ನವದೆಹಲಿ: ಭಾರತದ ಮೇಲೆ ಅಮೆರಿಕ ವಿಧಿಸಿದ್ದ ಶೇ.26ರಷ್ಟು ಹೆಚ್ಚುವರಿ ಸುಂಕವನ್ನು 90 ದಿನಗಳವರೆಗೆ ಅಂದರೆ, ಜುಲೈ 9ರವರೆಗೆ ಹಿಂಪಡೆಯಲಾಗುವುದು ಎಂದು ಶ್ವೇತಭವನ ತಿಳಿಸಿದೆ.
ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುವ ಸುಮಾರು 60 ದೇಶಗಳಿಗೆ ಅಮೆರಿಕ ಭಾರತ ಸೇರಿದಂತೆ ಹಲವು ರಾಜ್ಯಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದರು. ಇದು ಸಿಗಡಿಯಿಂದ ಉಕ್ಕಿನವರೆಗೆ ಎಲ್ಲಾ ವಸ್ತುಗಳ ಉತ್ಪನ್ನಗಳ ಮೇಲಿನ ಸುಂಕ ಜಗತ್ತಿನ ಆರ್ಥಿಕಗೆ ಮೇಲೆ ಪರಿಣಾಮ ಬೀರಿತ್ತು. ಈ ಹೆಚ್ಚುವರಿ ಸುಂಕದ ಮೂಲಕ ವ್ಯಾಪಾರ ಕೊರತೆ ಕಡಿತ ಮಾಡಿ, ದೇಶೀಯ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿತ್ತು.
ಅಮೆರಿಕವು ಭಾರತದ ಮೇಲೆ ಶೇ.26ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಿದ್ದರೆ, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಚೀನಾದ ಮೇಲೆ ಹೆಚ್ಚಿನ ಸುಂಕ ವಿಧಿಸಿತ್ತು. ಇದೀಗ ಭಾರತ ಮೇಲೆ ವಿಧಿಸಿರುವ ಸುಂಕವನ್ನು ತಾತ್ಕಲಿಕವಾಗಿ ರದ್ದು ಮಾಡಿದ್ದು, ಚೀನಾ, ಹಾಂಕ್ಗಾಂಗ್ ಮತ್ತು ಮೆಕು ಮೇಲೆ ಯಾವುದೇ ಹಿಂಪಡೆತ ಆಗಿಲ್ಲ.
ಈ ಕ್ರಮವು ಏಪ್ರಿಲ್ 10ರಿಂದ ಜಾರಿಗೆ ಬರಲಿದ್ದು, ಜುಲೈ 9ರವರೆಗೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಶೇ.10ರಷ್ಟು ಬೇಸ್ಲೈನ್ ಸುಂಕ ವಿಧಿಸುವಿಕೆ ಮುಂದುವರೆಯಲಿದೆ.