ಬ್ಯಾಂಕಾಕ್: ಚೀನಾದ ಆಮದುಗಳ ಮೇಲೆ ಅಮೆರಿಕ ವಿಧಿಸಿರುವ ಶೇ104ರಷ್ಟು ಪ್ರತಿಸುಂಕ ಇಂದಿನಿಂದ ಜಾರಿಗೆ ಬರಲಿದೆ. ಇದರ ಪರಿಣಾಮ ಷೇರು ಪೇಟೆಯ ಮೇಲೆ ಆಗಿದ್ದು, ಏಷ್ಯಾದ ಷೇರುಗಳು ಮತ್ತೆ ಕುಸಿತ ಕಂಡಿವೆ.
(Japan) ಜಪಾನ್‌ನ ನಿಕ್ಕಿ 225 ಸೂಚ್ಯಂಕ ಸುಮಾರು ಶೇ 4ರಷ್ಟು ಕುಸಿದಿದ್ದು, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಷೇರು ವಹಿವಾಟು ಕೂಡ ಕುಸಿತದೊಂದಿಗೆ ಆಗಿದೆ. ಇದು ಜಾಗತಿಕ ಷೇರು ಹೂಡಿಕೆದಾರರನ್ನು ತಲ್ಲಣಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಲಕ್ಷಾಂತರ ಕೋಟಿ ರೂಗಳನ್ನು ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಒಳಗಾಗಿದ್ದಾರೆ.
ಎಸ್ ಅಂಡ್ ಪಿ 500 ಸೂಚ್ಯಂಕ ಶೇ 4.1ರಷ್ಟು ಆರಂಭಿಕ ಏರಿಕೆ ಕಂಡಿದ್ದರೂ ಬಳಿಕ 1.6ರಷ್ಟು ಕುಸಿತ ಕಂಡಿದೆ. ಫೆಬ್ರವರಿ ದಾಖಲೆಗಳಿಗಿಂತ ಶೇ 19ರಷ್ಟು ಕುಸಿತ ಕಂಡಿದೆ. ಡೌ ಜೋನ್ಸ್ ಇಂಡಸ್ಟ್ರಿ ಶೇ 0.8ರಷ್ಟು ಕುಸಿದರೆ, ನಾಸ್ಡಾಕ್ ಕಾಂಪೋಸಿಟ್ ಶೇ 2.1ರಷ್ಟು ಕುಸಿದಿದೆ. ಈ ನಡುವೆ ಅಮೆರಿಕ ಅಧ್ಯಕ್ಷರಿಂದ ಈ ವ್ಯಾಪಾರ ಯುದ್ಧ ಮುಂದುವರೆಯುವ ಭೀತಿ ಕೂಡ ಎದುರಾಗಿದೆ.
(America)ಅಮೆರಿಕದ ಪ್ರತಿಸುಂಕವೂ ಅಲ್ಲಿನ ಕಾಲಮಾನದ ಅನುಸಾರ ಮಧ್ಯರಾತ್ರಿಯಂದಲೇ ಜಾರಿಗೆ ಬರಲಿದ್ದು, ಈ ಕುರಿತು ಏನು ಮಾಡಬೇಕು ಎಂಬ ಕುರಿತು ಹೂಡಿಕೆದಾರರಿಗೆ ಯಾವುದೇ ಯೋಜನೆ ಇಲ್ಲದಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಏಷ್ಯಾದಲ್ಲಿ ಬುಧವಾರ ರಾತ್ರಿಯಿಂದಲೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಕಂಡು ಬಂದಿದ್ದು, ಈ ನಡುವೆ ಟೋಕಿಯೊ ಸೂಚ್ಯಂಕಗಳಲ್ಲಿ ಶೇ 6ರಷ್ಟು, ಪ್ಯಾರಿಸ್‌ನಲ್ಲಿ ಶೇ 2.5ರಷ್ಟು ಮತ್ತು ಶಾಂಘೈನ ಇಂಡೆಕ್ಸ್ ಗಳಲ್ಲಿ ಆರಂಭದಲ್ಲಿ ಶೇ 1.6ರಷ್ಟು ಏರಿಕೆ ಕೂಡಾ ಕಂಡು ಬಂದಿತ್ತು.
ಆದರೆ ಅಮೆರಿಕ ಚೀನಾ ಮೇಲೆ 104 ರಷ್ಟು ಸುಂಕ ಹೇರಿಕೆ ಜಾರಿಗೆ ತಂದಿದ್ದರ ಸುದ್ದಿ ಹೊರ ಬೀಳುತ್ತಿದ್ದಂತೆ ಟೋಕಿಯೊದಲ್ಲಿ ನಿಕ್ಕಿ 225 ಶೇ.3.9 ಕುಸಿತಕಂಡಿದ್ದು, ಷೇರು ವಹಿವಾಟು ಆರಂಭವಾದ ಒಂದು ಗಂಟೆಯಲ್ಲಿ ಶೇ.3.5 ರಷ್ಟು ಕುಸಿದು 31,847.40 ಕ್ಕೆ ತಲುಪಿತು.