image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾರ್ಪೊರೇಟ್ ಕೃಷಿ ವಿರೋಧಿಸಿ ಪಾಕಿಸ್ತಾನದ ರೈತರು ಪ್ರತಿಭಟನೆ ಮಾಡಲು ಸಜ್ಜು

ಕಾರ್ಪೊರೇಟ್ ಕೃಷಿ ವಿರೋಧಿಸಿ ಪಾಕಿಸ್ತಾನದ ರೈತರು ಪ್ರತಿಭಟನೆ ಮಾಡಲು ಸಜ್ಜು

ಪಾಕಿಸ್ತಾನ: ಗ್ರೀನ್ ಪಾಕಿಸ್ತಾನ್ ಇನಿಶಿಯೇಟಿವ್ (ಜಿಪಿಐ) ಅಡಿ ಜಾರಿಗೆ ತರಲಾಗುತ್ತಿರುವ ಕಾರ್ಪೊರೇಟ್ ಕೃಷಿ ವಿರೋಧಿಸಿ ಪಾಕಿಸ್ತಾನದ ರೈತರು ಏಪ್ರಿಲ್ 13 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎಂದು ಡಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಏಪ್ರಿಲ್ 13 ರಂದು ವಿವಿಧ ಪಟ್ಟಣಗಳಲ್ಲಿ ಮತ್ತು ಸಾರ್ವಜನಿಕ ವಲಯದ ಕೃಷಿ ಭೂಮಿಗಳಲ್ಲಿ ರ್‍ಯಾಲಿಗಳು ಮತ್ತು ಸಮಾವೇಶಗಳನ್ನು ನಡೆಸಲಾಗುವುದು. ಪಾಕಿಸ್ತಾನ ಕಿಸಾನ್ ರಬಿತಾ ಸಮಿತಿ, ಅಂಜುಮನ್ ಮಜರೀನ್ ಪಂಜಾಬ್, ಹರಿ ಜೆದೋಜೆಹಾದ್ ಸಮಿತಿ, ಕ್ರಾಫ್ಟರ್ ಫೌಂಡೇಶನ್ ಮತ್ತು ಇತರ ಸಂಘಟನೆಗಳ ಜಂಟಿ ಸಭೆಯಲ್ಲಿ ಪ್ರತಿಭಟನೆಗಳನ್ನು ಪ್ರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಗುವುದು. ಕಾರ್ಪೊರೇಟ್ ಕೃಷಿಯನ್ನು ಕೊನೆಗೊಳಿಸಲು ಮತ್ತು ತಲೆಮಾರುಗಳಿಂದ ಕೃಷಿ ಮಾಡುತ್ತಿರುವ ಭೂಮಿಯಿಂದ ರೈತರನ್ನು ಹೊರಹಾಕದಂತೆ ಪ್ರತಿಭಟನೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲು ರೈತ ಸಂಘಟನೆಗಳು ನಿರ್ಧರಿಸಿವೆ ಎಂದು ಡಾನ್ ವರದಿ ತಿಳಿಸಿದೆ.

ದಕ್ಷಿಣ ಪಂಜಾಬ್​ನಲ್ಲಿ ವಿವಾದಾತ್ಮಕ ಕಾಲುವೆಗಳ ನಿರ್ಮಾಣವನ್ನು ನಿಷೇಧಿಸಬೇಕು, ಎಲ್ಲಾ ಸಾರ್ವಜನಿಕ ವಲಯದ ಕೃಷಿ ಭೂಮಿಯನ್ನು ರೈತರಿಗೆ ಹಂಚಬೇಕು, ಲಕ್ಷಾಂತರ ರೂಪಾಯಿ ಬಾಕಿ ಪಾವತಿಸುವಂತೆ ಗೇಣಿದಾರರಿಗೆ ನೀಡಿದ ನೋಟಿಸ್​ಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಪ್ರಸಕ್ತ ಕೊಯ್ಲು ಋತುವಿನಲ್ಲಿ ಗೋಧಿ ಖರೀದಿ ಬೆಲೆಯನ್ನು 40 ಕೆಜಿಗೆ 4,000 ಪಾಕಿಸ್ತಾನಿ ರೂಪಾಯಿಗಳಿಗೆ (ಪಿಕೆಆರ್) ನಿಗದಿಪಡಿಸಬೇಕು ಎಂದು ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿವೆ.

 

Category
ಕರಾವಳಿ ತರಂಗಿಣಿ