image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಕ್ಫ್​ ತಿದ್ದುಪಡಿ ಮಸೂದೆಯ ವಿರುದ್ಧ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ನಿರ್ಧಾರ

ವಕ್ಫ್​ ತಿದ್ದುಪಡಿ ಮಸೂದೆಯ ವಿರುದ್ಧ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ನಿರ್ಧಾರ

ಜಮ್ಮು- ಕಾಶ್ಮೀರ : ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಿರುವ ವಕ್ಫ್​ ತಿದ್ದುಪಡಿ ಮಸೂದೆಗೆ ವಿರೋಧ ಮತ್ತು ಜಮ್ಮು- ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲು ಆಗ್ರಹಿಸಿ ನ್ಯಾಷನಲ್​ ಕಾನ್ಫ್​​ರೆನ್ಸ್​ ಮತ್ತು ಕಾಂಗ್ರೆಸ್​ನ ಮೈತ್ರಿ ಸರ್ಕಾರವು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲು ಸಜ್ಜಾಗಿದೆ.

ಜಮ್ಮು- ಕಾಶ್ಮೀರ ವಿಧಾನಸಭೆಯ ಎರಡನೇ ಅವಧಿಯ ಅಧಿವೇಶನ ಏಪ್ರಿಲ್​ 7 ರಿಂದ ಜಮ್ಮುವಿನಲ್ಲಿ ಆರಂಭವಾಗಲಿದೆ. ಮುಂದಿನ ವಾರ ಈ ಎರಡೂ ನಿರ್ಣಯಗಳನ್ನು ವಿಧಾನಸಭೆಯಲ್ಲಿ ಮಂಡಿಸಲು ಆಡಳಿತಾರೂಢ ಮೈತ್ರಿ ಪಕ್ಷಗಳು ಯೋಜಿಸಿವೆ. ಈ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ರೂಪಿಸಿವೆ.

ಎನ್​ಸಿ ಮತ್ತು ಕಾಂಗ್ರೆಸ್​ ನಾಯಕರ ನಡುವೆ ಶ್ರೀನಗರದಲ್ಲಿನ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರ ಅಧಿಕೃತ ನಿವಾಸದಲ್ಲಿ 2 ಗಂಟೆಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆದಿದೆ. ಕೇಂದ್ರಾಡಳಿತ ಪ್ರದೇಶದ ಸರ್ಕಾರದ ಜನಾದೇಶವನ್ನು 'ಅತಿಕ್ರಮಿಸಲು' ಪ್ರಯತ್ನಿಸುತ್ತಿರುವ ಗವರ್ನರ್​​ ವಿರುದ್ಧ ಹೋರಾಡಲು ಒಮ್ಮತದಿಂದ ನಿರ್ಧರಿಸಲಾಗಿದೆ.

ರಾಜ್ಯ ಸ್ಥಾನಮಾನ ಪುನಃಸ್ಥಾಪನೆ, ವಕ್ಫ್ ಮಸೂದೆಗೆ ವಿರೋಧ, ಕೇಂದ್ರ ಗೃಹ ಸಚಿವಾಲಯದ ವಿಳಂಬ ಧೋರಣೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ಶಾಸಕರು ಗಹನ ಚರ್ಚೆ ನಡೆಸಿದ್ದಾರೆ ಎಂದು ಈಟಿವಿ ಭಾರತ್‌ಗೆ ತಿಳಿದುಬಂದಿದೆ.

ಜಮ್ಮು- ಕಾಶ್ಮೀರ ವಿಧಾನಸಭೆಯ ಎರಡನೇ ಅವಧಿಯ ಅಧಿವೇಶನ ಸೋಮವಾರ (ಏಪ್ರಿಲ್ 7) ಜಮ್ಮುವಿನಲ್ಲಿ ಆರಂಭವಾಗಲಿದೆ. ವಿಧಾನಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಮಂಡಿಸುವ ಜೊತೆಗೆ, ನ್ಯಾಷನಲ್ ಕಾನ್ಫರೆನ್ಸ್ ಶಾಸಕ ತನ್ವೀರ್ ಸಾದಿಕ್ ಅವರು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ವಿಧಾನಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಲಿದ್ದಾರೆ.

ಅಧಿಕಾರಿಗಳ ನೇಮಕಾತಿ ಕುರಿತು ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್​ ಗವರ್ನರ್​ ಮಧ್ಯೆ ಜಿದ್ದಾಜಿದ್ದಿ ನಡೆಯುತ್ತಿದೆ. ಆಡಳಿತಾತ್ಮಕ ಹುದ್ದೆಗಳಿಗೆ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನೇತೃತ್ವದ 'ಸಮರ್ಥ ಪ್ರಾಧಿಕಾರ'ವನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ಲೆಫ್ಟಿನೆಂಟ್​ ಗವರ್ನರ್​​ ನಿರ್ಲಕ್ಷಿಸಿರುವುದು ಕಿತ್ತಾಟಕ್ಕೆ ಕಾರಣವಾಗಿದೆ.

ರಹಸ್ಯ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್‌ಸಿ ಮುಖ್ಯ ವಕ್ತಾರ ತನ್ವೀರ್ ಸಾದಿಕ್ ಮತ್ತು ಕಾಂಗ್ರೆಸ್ ಶಾಸಕ ನಿಜಾಮುದ್ದೀನ್ ಭಟ್, ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸುವುದು ಮತ್ತು ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಕುರಿತ ಎರಡು ನಿರ್ಣಯಗಳನ್ನು ಮೈತ್ರಿ ಸರ್ಕಾರ ಅಂಗೀಕರಿಸಲಿದೆ ಎಂದು ತಿಳಿಸಿದರು.

ವಕ್ಫ್ ಮಸೂದೆಯು ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ವಿರುದ್ಧವಾಗಿದೆ. ಇದು ಅಲ್ಪಸಂಖ್ಯಾತರ ನಂಬಿಕೆಯ ಮೇಲಿನ ನೇರ ದಾಳಿಯಾಗಿದೆ ಎಂದು ಆಪಾದಿಸಿದರು.

Category
ಕರಾವಳಿ ತರಂಗಿಣಿ