ತಮಿಳುನಾಡು: ನೀಟ್ಗೆ(neet) ವಿನಾಯಿತಿ ಕೋರಿ ರಾಜ್ಯ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ(central government) ತಿರಸ್ಕಾರ ಮಾಡಿರುವ ಕ್ರಮವನ್ನು ತಮಿಳುನಾಡು ಎಂ.ಕೆ ಸ್ಟಾಲಿನ್(m.k Stalin) ತೀವ್ರವಾಗಿ ಖಂಡಿಸಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ(tamilnadu legislative assembly) ಮಾತನಾಡಿದ ಅವರು, ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣದಲ್ಲಿ ಸುದೀರ್ಘಕಾಲದಿಂದ ಅತ್ಯುತ್ತಮ ಪ್ರದರ್ಶನ ಹೊಂದಿದೆ. ಕ್ಲಾಸ್ 12ರ ಅಂಕಗಳ ಆಧಾರದ ಮೇಲೆ ಎಲ್ಲರನ್ನು ಒಳಗೊಳ್ಳುವ ನ್ಯಾಯಸಮ್ಮತ ಪ್ರವೇಶಾತಿ ಪ್ರಕ್ರಿಯೆ ಜಾರಿ ಮಾಡುವಂತೆ ರಾಜ್ಯ ಸರ್ಕಾರ ಒತ್ತಿ ಹೇಳಿದ್ದು, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶದ ಭರವಸೆ ನೀಡಿದೆ. ಈ ವ್ಯವಸ್ಥೆಯನ್ನು ಮಾಜಿ ಸಿಎಂ ಕೆ ಕರುಣಾನಿಧಿ(karinanidhi) ಪರಿಚಯಿಸಿದ್ದು, ಇದು ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ವೃತ್ತಿಪರರಾಗಲು ಅವಕಾಶ ನೀಡುವ ಜೊತೆಗೆ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯ ಸಿಗುವ ಭರವಸೆ ನೀಡಿತ್ತು.
ನೀಟ್ ಸಾಮಾಜಿಕ ಮತ್ತು ಆರ್ಥಿಕವಾಗಿ ಬಳಲುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದುಬಾರಿ ಕೋಚಿಂಗ್ ಶಾಲೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಈ ಪರೀಕ್ಷೆಯು ನಗರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸೌಲಭ್ಯಗಳನ್ನು ಹೊಂದಿರುವುದರಿಂದ ಅವರಿಗೆ ಮಾತ್ರ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಆದರೆ, ಸೌಲಭ್ಯವಂಚಿತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಿಗದೇ ಹೋಗುತ್ತಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ವಿಚಾರವನ್ನು ತಿಳಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ನಿವೃತ್ತ ನ್ಯಾ. ಎಕೆ ರಾಜನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಈ ಸಮಿತಿ ಶಿಫಾರಸಿನ ಆಧಾರದ ಮೇಲೆ ತಮಿಳುನಾಡು ವಿಧಾನಸಭೆಯಲ್ಲಿ 2021ರಲ್ಲಿ ನೀಟ್ನಿಂದ ವಿನಾಯಿತಿ ನೀಡುವ ಯುಜಿ ವೈದ್ಯಕೀಯ ಪದವಿ ಕೋರ್ಸ್ ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಿತ್ತು. ದೀರ್ಘಕಾಲದ ವಿಳಂಬದ ಬಳಿಕ ರಾಜ್ಯಪಾಲರು ಕೂಡ ಇದಕ್ಕೆ ಸಹಿ ಹಾಕಿ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದ್ದರು.
ರಾಜ್ಯ ಸರ್ಕಾರ ನೀಡಿದ ವಿವರವಾದ ಸ್ಪಷ್ಟನೆ ಹೊರತಾಗಿ ಅನೇಕ ಕೇಂದ್ರ ಸಚಿವರು, ಕೇಂದ್ರ ಸರ್ಕಾರ ಈ ಮಸೂದೆಯನ್ನು ತಿರಸ್ಕರಿಸಿದೆ. ಈ ನಿರ್ಧಾರವನ್ನು ಕಟುವಾಗಿ ಖಂಡಿಸಿರುವ ಸ್ಟಾಲಿನ್ ಇದು ತಮಿಳುನಾಡು ಚುನಾಯಿತ ವಿಧಾನಸಭೆಗೆ ಅವಮಾನ ಎಂದಿದ್ದಾರೆ. ಅಲ್ಲದೇ ನೀಟ್ ವಿರುದ್ಧ ಹೋರಾಟ ಇನ್ನೂ ಮುಗಿದಿಲ್ಲ. ಮುಂದಿನ ಕ್ರಮದ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುವುದು ಎಂದು ಇದೇ ವೇಳೆ ಸ್ಟಾಲಿನ್ ಕಾನೂನು ಹೋರಾಟದ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.