image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ...

ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ...

ನವದೆಹಲಿ: ಬುಧವಾರ ತಡರಾತ್ರಿ ಎರಡು ಗಂಟಗೆ ವಕ್ಫ್​ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ(Parliament) ಪಾಸ್​ ಆಗಿತ್ತು. ಇನ್ನು ಗುರುವಾರ ತಡರಾತ್ರಿ ರಾಜ್ಯಸಭೆಯಲ್ಲಿ(upper house) ವಕ್ಫ್ ತಿದ್ದುಪಡಿ ಮಸೂದೆ(Waqf Amendment Bill) ಗೂ ಅಂಗೀಕಾರ ಪಡೆದುಕೊಳ್ಳಲಾಯಿತು. ಕೇಂದ್ರ ಸರ್ಕಾರ(central government) ಮಂಡಿಸಿದ ವಕ್ಫ್​​ ತಿದ್ದುಪಡಿ ವಿಧೇಯಕ 2025ರ ಪರ 128 ಮತಗಳು ಬಂದರೆ ವಿರೋಧವಾಗಿ 95 ಮತಗಳು ಬಂದವು.

ರಾಜ್ಯಸಭೆಯಲ್ಲೂ ಕೂಡಾ ವಿಧೇಯಕಕ್ಕೆ ಹಲವು ತಿದ್ದುಪಡಿಗಳನ್ನು ಮಂಡಿಸಲಾಯಿತು. ಸದಸ್ಯರು ಮಂಡಿಸಿದ ತಿದ್ದುಪಡಿಗಳು ಅಂಗೀಕಾರ ಆದರೆ, ಕೆಲವು ಅಂಗೀಕಾರ ಪಡೆಯಲು ವಿಫಲವಾದವು. ರಾಜ್ಯಸಭೆಯಲ್ಲೂ ಮ್ಯಾರಾಥಾನ್​ ಚರ್ಚೆಗಳು ನಡೆದವು. ರಾತ್ರಿ ಒಂದು ಗಂಟೆವರೆಗೂ ಚರ್ಚೆ ನಡೆದು, ಬಳಿಕ ವಿದೇಯಕ ಅನುಮೋದನೆಗೆ ಮತಕ್ಕೆ ಹಾಕಲಾಯಿತು. ಪ್ರತಿಪಕ್ಷಗಳು ಡಿವಿಸನ್​ ಆಫ್​ ವೋಟ್(division of vote)​ ಕೇಳಿದ್ದರಿಂದ ತಲೆ ಎಣಿಕೆ ಮೂಲಕ ಅಂಗೀಕಾರ ಪಡೆದುಕೊಳ್ಳಲಾಯಿತು. ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡ ಬಳಿಕ ಗುರುವಾರ ರಾಜ್ಯಸಭೆಯಲ್ಲೂ ವಕ್ಫ್​​ (ತಿದ್ದುಪಡಿ) ಮಸೂದೆ 2025 ಅನ್ನು ಅಲ್ಪ ಸಂಖ್ಯಾತ ಖಾತೆ ಸಚಿವ ಕಿರಣ್​ ರಿಜಿಜು(kiran rijiju) ಮಂಡಿಸಿದರು.

ವಕ್ಫ್​ ತಿದ್ದುಪಡಿಗಳ ವಿಧೇಯಕ ಮಂಡನೆ ಮಾಡಿದ ಬಳಿಕ ಮಾತನಾಡಿದ ಸಚಿವ ರಿಜಿಜು ಈ ಮಸೂದೆಯು ಮುಸ್ಲಿಮರ ವಿರುದ್ಧವಾಗಿಲ್ಲ. ಅವರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಇದು ವಕ್ಫ್ ಆಸ್ತಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು, ಸಮಸ್ಯೆಗಳನ್ನು ಪರಿಹರಿಸಲು, ಪಾರದರ್ಶಕತೆಯನ್ನು ಕಾಪಾಡಲು, ತಂತ್ರಜ್ಞಾನ-ಚಾಲಿತ ನಿರ್ವಹಣೆಯನ್ನು ಉದ್ದೇಶದಿಂದ ಪರಿಚಯಿಸಲಾಗಿದೆ ಎಂದು ವಿಧೇಯಕದ ಅನಿವಾರ್ಯತೆ ಮತ್ತು ಉದ್ದೇಶವನ್ನು ರಾಜ್ಯಸಭೆಗೆ ವಿವರಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಹಾಗೂ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ(sonia Gandhi), ವಕ್ಫ್ ಮಸೂದೆ ಸಂವಿಧಾನದ ಮೇಲಿನ ದಾಳಿ ಇದು ಎಂದು ಆರೋಪಿಸಿದರು. ಈ ವಿಧೇಯಕ ಸಮಾಜವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿಡುವ ಬಿಜೆಪಿಯ ತಂತ್ರದ ಭಾಗ ಇದು ಆಕ್ರೋಶ ಹೊರಹಾಕಿದರು.

ರಾಜ್ಯಸಭೆಯಲ್ಲಿ ಬಿಜೆಪಿಯ 98 ಸಂಸದರು, ಮಿತ್ರಪಕ್ಷ ಜೆಡಿಯು ಪಕ್ಷದ ನಾಲ್ವರು, ಎನ್‌ಸಿಪಿಯ ಮೂವರು, ಟಿಡಿಪಿಯ ಇಬ್ಬರು ಮತ್ತು ಆರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಎನ್‌ಡಿಎ ಮೈತ್ರಿಕೂಟದ 125 ಸಂಸದರಿದ್ದಾರೆ. 

Category
ಕರಾವಳಿ ತರಂಗಿಣಿ