image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸ್ಪೇಸ್​ ಎಕ್ಸ್​ (space X) ಕಂಪನಿ ಮೊದಲ ಬಾರಿಗೆ ಭೂಮಿಯ ಧ್ರುವೀಯ ಕಕ್ಷೆ ಪ್ರದೇಶದ ಮೇಲೆ ರಾಕೆಟ್​​ ಉಡಾವಣೆ ನಡೆಸಲು ಸಜ್ಜು

ಸ್ಪೇಸ್​ ಎಕ್ಸ್​ (space X) ಕಂಪನಿ ಮೊದಲ ಬಾರಿಗೆ ಭೂಮಿಯ ಧ್ರುವೀಯ ಕಕ್ಷೆ ಪ್ರದೇಶದ ಮೇಲೆ ರಾಕೆಟ್​​ ಉಡಾವಣೆ ನಡೆಸಲು ಸಜ್ಜು

ವಾಷಿಂಗ್ಟನ್​: ಎಲಾನ್​ ಮಸ್ಕ್​ ಒಡೆತನದ ಸ್ಪೇಸ್​ ಎಕ್ಸ್​ ಕಂಪನಿ ಮೊದಲ ಬಾರಿಗೆ ಭೂಮಿಯ ಧ್ರುವೀಯ ಕಕ್ಷೆ ಪ್ರದೇಶದ ಮೇಲೆ ರಾಕೆಟ್​​ (Rocket) ಉಡಾವಣೆ ನಡೆಸಲು ಸಜ್ಜಾಗಿದೆ. ಈ ಹಿಂದೆ ಘೋಷಣೆ ಮಾಡಿದ್ದಂತೆ ಸ್ಪೇಸ್​ಎಕ್ಸ್​ನ ಫ್ರಾಮ್​2 ನೌಕೆ​ ಮಾರ್ಚ್​ 31ರಂದು ರಾತ್ರಿ 9.46ಕ್ಕೆ (ಭಾರತೀಯ ಕಾಲಮಾನ ಏಪ್ರಿಲ್​ 1 ಬೆಳಗ್ಗೆ 7.16ಕ್ಕೆ) ಉಡಾವಣೆಗೆ ಸಜ್ಜಾಗಿದೆ. ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ಕು ಗಗನಯಾತ್ರಿಗಳನ್ನು ಹೊತ್ತ ರಾಕೆಟ್​​​​ನ​ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.

ಕಡಿಮೆ ಭೂ ಕಕ್ಷಾ ಪ್ರದೇಶವಾಗಿರುವ ಧ್ರುವಗಳ ಮೇಲೆ ಮೊದಲ ಐತಿಹಾಸಿಕ ರಾಕೆಟ್​ ಉಡಾವಣಾ ಯೋಜನೆ ಇದಾಗಿದೆ. ಇನ್ನು ಇದೇ ವೇಳೆ, ಸ್ಪೇಸ್​ ಎಕ್ಸ್​ ಹೆಚ್ಚುವರಿಯಾಗಿ 3 ಉಡಾವಣಾ ಸಮಯವನ್ನು ಕೂಡ ನೀಡಿದೆ. ಇದನ್ನು ಏಪ್ರಿಲ್​ 2ಕ್ಕೆ ನಿಗದಿಪಡಿಸಲಾಗಿದೆ.

ಫ್ರಾಮ್​​2 ಮಿಷನ್​ನಲ್ಲಿ ನಾಲ್ಕು ಸಿಬ್ಬಂದಿಗಳು ಈ ಯೋಜನೆಯ ಭಾಗವಾಗಿದ್ದಾರೆ. ಮಿಷನ್ ಕಮಾಂಡರ್ ಚುನ್ ವಾಂಗ್, ವೆಹಿಕಲ್ ಕಮಾಂಡರ್ ಜಾನಿಕೆ ಮಿಕೆಲ್ಸೆನ್, ವೆಹಿಕಲ್ ಪೈಲಟ್ ರಾಬಿಯಾ ರೋಗ್ ಹಾಗೂ ಮಿಷನ್ ತಜ್ಞ ಮತ್ತು ವೈದ್ಯಕೀಯ ಅಧಿಕಾರಿ ಎರಿಕ್ ಫಿಲಿಪ್ಸ್ ಸೇರಿದ್ದಾರೆ. ಈ ಅಂತಾರಾಷ್ಟ್ರೀಯ ಸಿಬ್ಬಂದಿ 90 ಡಿಗ್ರಿ ವೃತ್ತಾಕಾರದ ಕಕ್ಷೆಗೆ ಪ್ರಯಾಣಿಸಲಿದ್ದಾರೆ. ಅವರು ಈ ಮೂಲಕ ಉತ್ತರ ಮತ್ತು ದಕ್ಷಿಣ ಧ್ರುವಕ್ಕೆ ಹಾರಲಿದ್ದಾರೆ. ಈ ಅದ್ಬುತ ಪ್ರಯಾಣದಲ್ಲಿ ಫ್ರಾಮ್​​2 ಮಿಷನ್​ ಸಿಬ್ಬಂದಿಗಳು ನೈಸರ್ಗಿಕ ಅದ್ಬುತಗಳಾದ ಉತ್ತರ ಧ್ರುವ ಔರಾದಂತಹ ಔರೊರಾ ಬೊರೆಲಿಸ್​ ಘಟನೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಈ ಯೋಜನೆಗೆ ಉದ್ಯಮಿ ವಾಂಗ್​ ಬಂಡವಾಳ ಹೂಡಿದ್ದಾರೆ. ಮಿಕೆಲ್ಸೆನ್​ ಚಿತ್ರ ನಿರ್ಮಾಣದಲ್ಲಿ ಹಾಗೂ ಫೋಟೋಗ್ರಾಫಿಯಲ್ಲಿ ಹೆಸರು ಮಾಡಿದ್ದಾರೆ. ಇದರ ಹೊರತಾಗಿ 29 ವರ್ಷದ ಗಗನಯಾನಿ ರೋಗ್​ ಇದ್ದು, ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮೊದಲ ಮಹಿಳಾ ಜರ್ಮನ್​ ಇವರಾಗಿದ್ದಾರೆ. ಇವರೆಲ್ಲರ ಹೊರತಾಗಿ ಫಿಲಿಪ್ಸ್​​​ ಆಸ್ಪ್ರೇಲಿಯಾ ಮೂಲಕ ಧ್ರುವದ ಅನ್ವೇಷಕರಾಗಿದ್ದಾರೆ.

ಈ ಯೋಜನೆಗಾಗಿ ಸ್ಪೇಸ್​ ಎಕ್ಸ್​ ಟೈಡೌನ್​ ಮತ್ತು ಪರೀಕ್ಷೆಗೆ ಒಳಪಡಿಸಿದ ಡ್ರಾಗನ್​ ನೌಕೆಯನ್ನು ಬಳಕೆ ಮಾಡಲಿದೆ. ಇದನ್ನು ಈ ಹಿಂದೆ ಕ್ರ್ಯೂ 1, ಇನ್ಸಪಿರೇಷನ್4ರಲ್ಲಿ ಬಳಕೆ ಮಾಡಲಾಗಿತ್ತು. ಸ್ಪೇಸ್​ಎಕ್ಸ್​ ಫ್ರಾಮ್​2 ಬಹು ದಿನದ ಬಾಹ್ಯಾಕಾಶ ಯೋಜನೆಯಾಗಿದ್ದು, ಇದಕ್ಕಾಗಿ ಡ್ರಾಗನ್​ ನೌಕೆ ಮತ್ತು ಅದರ ಸಿಬ್ಬಂದಿಗಳು ಧ್ರುವ ಕಕ್ಷೆಯಿಂದ ಭೂಮಿಯ ಹೊಸ ವಿಚಾರಗಳನ್ನು ಅಧ್ಯಯನ ಮಾಡಲು ಅವಕಾಶ ಪಡೆಯಲಿದ್ದಾರೆ. ಈ ಯೋಜನೆಗಾಗಿ ಗಗನಯಾನಿಯಗಳು ಬಾಹ್ಯಾಕಾಶದಲ್ಲಿ ಮಾನವನ ಆರೋಗ್ಯದ ಕುರಿತು ಅರ್ಥೈಸಿಕೊಳ್ಳುವ ಗುರಿಯೊಂದಿಗೆ 22 ಸಂಶೋಧನೆಗಳನ್ನು ನಡೆಸಿದ್ದಾರೆ. ಈ ಸಂಶೋಧನೆಗಳಲ್ಲಿ ಬಾಹ್ಯಾಕಾಶದಲ್ಲಿ ಮೊದಲ ಎಕ್ಸ್​​ರೇ ತೆಗೆದುಕೊಳ್ಳುವುದರ, ಹೊರತಾಗಿ, ಕಡಿಮೆ ಗುರುತ್ವಾಕರ್ಷಣೆಯಲ್ಲಿ ಅಣಬೆ ಬೆಳೆಯುವ ಪ್ರಯೋಗವನ್ನು ನಡೆಸಲಿದ್ದಾರೆ.

Category
ಕರಾವಳಿ ತರಂಗಿಣಿ