image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಶಾಂತಿ ನೊಬೆಲ್​ ಪ್ರಶಸ್ತಿಗೆ ನಾಮನಿರ್ದೇಶನ

ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಶಾಂತಿ ನೊಬೆಲ್​ ಪ್ರಶಸ್ತಿಗೆ ನಾಮನಿರ್ದೇಶನ

ಪಾಕಿಸ್ತಾನ : ಭ್ರಷ್ಟಾಚಾರ, ದೇಶದ್ರೋಹ ಆರೋಪದ ಮೇಲೆ ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ಇಮ್ರಾನ್​ ಖಾನ್​(imran khan) ಅವರನ್ನು ನೊಬೆಲ್(nobel) ಶಾಂತಿ ಪ್ರಶಸ್ತಿಗೆ ಪಾಕಿಸ್ತಾನದಿಂದ ನಾಮನಿರ್ದೇಶನ ಮಾಡಲಾಗಿದೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು "ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು(human rights) ಮತ್ತು ಪ್ರಜಾಪ್ರಭುತ್ವ(democracy)" ರಕ್ಷಣೆಗಾಗಿ ಮಾಡಿದ ಪ್ರಯತ್ನಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿಗೆ ದೇಶದಿಂದ ನಾಮನಿರ್ದೇಶನ ಮಾಡಲಾಗಿದೆ ಎಂದು ಪಾಕಿಸ್ತಾನ್​ ವರ್ಲ್ಡ್ ಅಲೈಯನ್ಸ್ (PWA) ತಿಳಿಸಿದೆ.

ಈ ಬಗ್ಗೆ ನಾರ್ವೆಯ(norway) ರಾಜಕೀಯ ಪಕ್ಷವಾದ ಪಾರ್ಟಿಯೆಟ್ ಸೆಂಟ್ರಮ್ ತನ್ನ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಯಾವುದೇ ದೇಶಗಳು ಅರ್ಹ ವ್ಯಕ್ತಿಯನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು. ಪಾಕಿಸ್ತಾನದಿಂದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ನೊಬೆಲ್ ಶಾಂತಿ' ಪ್ರಶಸ್ತಿಗೆ ಎರಡನೇ ಸಲ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿಸಿದೆ.

ವಿವಿಧ ರಾಷ್ಟ್ರಗಳು ತಮ್ಮಲ್ಲಿ ಸಾಧನೆ ಮಾಡಿದ ವ್ಯಕ್ತಿಯನ್ನು ಪ್ರಶಸ್ತಿಗೆ ಹೆಸರು ಸೂಚಿಸುತ್ತವೆ. ಸರ್ಕಾರಗಳು(governament), ಸಂಘಟನೆಗಳು ಸೂಚಿಸಿದ ನಾಮನಿರ್ದೇಶಿತರನ್ನು ನಾರ್ವೆಯ ನೊಬೆಲ್ ಸಮಿತಿಯು ಪರಿಗಣಿಸಿ, ನಂತರ 8 ತಿಂಗಳ ದೀರ್ಘ ಪರಿಶೀಲನೆ ನಂತರ ವಿಜೇತರನ್ನು ಘೋಷಿಸುತ್ತದೆ.

ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಲು ಮಾಡಿದ ಪ್ರಯತ್ನಿಗಳಿಗಾಗಿ ಇಮ್ರಾನ್​ ಖಾನ್​ ಅವರನ್ನು 2019 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (pti) ಸ್ಥಾಪಕರೂ ಆಗಿರುವ ಖಾನ್, 2023 ರಿಂದ ಜೈಲಿನಲ್ಲಿದ್ದಾರೆ. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮಾಜಿ ಪ್ರಧಾನಿಯ ಮೇಲೆ ಗುರುತರವಾದ ಆರೋಪಗಳುಳ್ಳ ನಾಲ್ಕು ಪ್ರಕರಣಗಳಿವೆ.

ತೋಷಖಾನಾ ಪ್ರಕರಣ ಎಂದೇ ಕರೆಯಲಾಗುವ ಪ್ರಧಾನಿ ಬಂದ ಉಡುಗೊರೆಗಳ ಮಾರಾಟ, ದೇಶದ ರಹಸ್ಯಗಳ ಸೋರಿಕೆ, ಕಾನೂನುಬಾಹಿರ ವಿವಾಹದ ಆರೋಪಗಳು ಖಾನ್​ ಮೇಲಿವೆ. ಈ ಮೂರು ಪ್ರಕರಣಗಳ ಶಿಕ್ಷೆಯನ್ನು ನ್ಯಾಯಾಲಯಗಳು ರದ್ದುಗೊಳಿಸಿವೆ. 2022 ರಲ್ಲಿ ಅವಿಶ್ವಾಸ ಮತದಾನದ ನಂತರ ಅಧಿಕಾರ ಕಳೆದುಕೊಂಡ ಮಾಜಿ ಪ್ರಧಾನಿ, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿ, ಅವುಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದಾರೆ.

Category
ಕರಾವಳಿ ತರಂಗಿಣಿ