image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇಶದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಖಲಿಸ್ತಾನಿ ಉಗ್ರ ಸಂಘಟನೆ ಸಂಚು

ದೇಶದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಖಲಿಸ್ತಾನಿ ಉಗ್ರ ಸಂಘಟನೆ ಸಂಚು

ನವದೆಹಲಿ: ದೇಶದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಖಲಿಸ್ತಾನಿ(khalisthani) ಉಗ್ರ ಸಂಘಟನೆಯಾದ ಗುಂಪು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (bki) ಪಂಜಾಬ್, ಚಂಡೀಗಢ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರತ್ಯೇಕತಾವಾದಿಗಳಿಂದ ಕೆಲ ಸಂಘಟನೆಗಳು ಹಿಂದೆ ಸರಿದ ಬೆನ್ನಲ್ಲೇ, ಪಾಕಿಸ್ತಾನ(Pakistan) ಮೂಲದ ಐಎಸ್‌ಐ(ISI) ಖಲಿಸ್ತಾನಿ ಭಯೋತ್ಪಾದಕರು, ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕರು ಮತ್ತು ಕೆಲವು ಮೂಲಭೂತವಾದಿ ಗುಂಪುಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಹೊಸದೊಂದು ಸಮಸ್ಯೆ ತಂದೊಡ್ಡಲಿದೆ ಎಂದು ಪ್ರಕರಣವೊಂದರಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಚಾರ್ಜ್‌ಶೀಟ್​​​ನಲ್ಲಿ (Charge sheet) ಇದರ ಉಲ್ಲೇಖವಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಅಮೆರಿಕ ಮೂಲದ ಬಬ್ಬರ್ ಖಾಲ್ಸಾ(babbar khalsa) ಸಂಘಟನೆಯ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾ ಭಾರತದಲ್ಲಿ ಉಗ್ರ ಕೃತ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರು ಸ್ಥಳೀಯ ಶಂಕಿತ ಉಗ್ರರಾದ ರೋಹನ್ ಮಸಿಹ್ ಮತ್ತು ವಿಶಾಲ್ ಮಸಿಹ್ ಅವರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಸೂಚನೆಯ ಮೇರೆಗೆ ದಾಳಿ ನಡೆಸುವ ಗುರಿಯನ್ನು ನೀಡಲಾಗಿದೆ ಎಂದು ಎನ್​ಐಎ ಹೇಳಿದೆ.

ಎನ್ಐಎ ಅಧಿಕಾರಿಯ ಪ್ರಕಾರ, ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್(international) ಸಂಘಟನೆಯು ಪಂಜಾಬ್, ಚಂಡೀಗಢ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಯುವಕರನ್ನು ಭದ್ರತಾ ಪಡೆಗಳ ಸಿಬ್ಬಂದಿಯ ಮೇಲೆ ದಾಳಿಗಳನ್ನು ನಡೆಸಲು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಖಲಿಸ್ತಾನಿ ಭಯೋತ್ಪಾದಕ ಗುಂಪುಗಳು, ಜಮ್ಮು ಮತ್ತು ಕಾಶ್ಮೀರದಲ್ಲಿನ ಇತರ ಭಯೋತ್ಪಾದಕ ಗುಂಪುಗಳು ಮತ್ತು ಕೆಲವು ಮೂಲಭೂತವಾದಿ ಗುಂಪುಗಳ ನಡುವೆ ಮೈತ್ರಿಗೂ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬಬ್ಬರ್​ ಖಾಲ್ಸಾ​ ಯೋಜಿಸುತ್ತಿದೆ ಎಂದು ಎನ್ಐಎ ಈಗಾಗಲೇ ಈ ರಾಜ್ಯಗಳಲ್ಲಿನ ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ ರವಾನಿಸಿದೆ. ಸ್ವತಂತ್ರ ಖಲಿಸ್ತಾನಕ್ಕಾಗಿ ಹೋರಾಡುತ್ತಿರುವ ಖಾಲ್ಸಾ ಸಂಘಟನೆಯು, ದೇಶದಲ್ಲಿ ಭೂಗತವಾಗಿರುವ ಉಗ್ರರಿಗೆ ಬೆಂಬಲ, ಹಣಕಾಸು, ಶಸ್ತ್ರಾಸ್ತ್ರಗಳು, ಮದ್ದುಗುಂಡಿನ ನೆರವು ಒದಗಿಸುತ್ತಿದೆ.

ಬಬ್ಬರ್​ ಖಾಲ್ಸಾವು 1978 ರಲ್ಲಿ ಬೈಸಾಖಿ ಘರ್ಷಣೆಯ ನಂತರ ಮತ್ತು ನಿರಂಕಾರಿ ಮುಖ್ಯಸ್ಥ ಗುರ್ಬಚನ್ ಸಿಂಗ್ ಹತ್ಯೆಯ ನಂತರ ಬೀಬಿ ಅಮರ್‌ಜಿತ್ ಕೌರ್ ಅವರ ಕೆಲವು ಅನುಯಾಯಿಗಳು 1980 ರಲ್ಲಿ ಹುಟ್ಟುಹಾಕಿದ ಉಗ್ರ ಸಂಘಟನೆಯಾಗಿದೆ.

ಸುಖದೇವ್ ಸಿಂಗ್ ಬಬ್ಬರ್ ಮತ್ತು ತಲ್ವಿಂದರ್ ಸಿಂಗ್ ಪರ್ಮಾರ್ ಸಂಘಟನೆಯ ಸ್ಥಾಪಕರಾಗಿದ್ದಾರೆ.

Category
ಕರಾವಳಿ ತರಂಗಿಣಿ