ಮಹಾರಾಷ್ಟ್ರ : ಪ್ರತಿದಿನ ಲಕ್ಷಗಟ್ಟಲೆ ಪ್ರಯಾಣಿಕರ ಸುರಕ್ಷಿತ ಪ್ರಯಾಣದ ಹೊಣೆ ಹೊತ್ತಿರುವ ಸೆಂಟ್ರಲ್ ರೈಲ್ವೆಯ ಲೋಕೋ ಪೈಲಟ್‌ಗಳು ಮತ್ತು ಮೋಟಾರ್‌ಮೆನ್‌ಗಳು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಸುಡುಬಿಸಿಲಿನ ಪ್ರಖರತೆಯಿಂದ ರಿಲೀಫ್ ನೀಡುವುದಕ್ಕಾಗಿ ಅವರ ಕ್ಯಾಬಿನ್‌ಗಳಲ್ಲಿ ಎಸಿ ಅಳವಡಿಸಲು ಕೇಂದ್ರ ರೈಲ್ವೆ ನಿರ್ಧರಿಸಿದೆ.
ತೀವ್ರವಾದ ಬೇಸಿಗೆಯ ಶಾಖದಿಂದಾಗಿ ಮೇಲ್ ಎಕ್ಸ್‌ಪ್ರೆಸ್ ಅಥವಾ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರು ನಿರ್ಜಲೀಕರಣದಿಂದಾಗಿ ತಲೆಸುತ್ತು ಬಂದು ಬೀಳುತ್ತಿದ್ದರು. ನಿರ್ಜಲೀಕರಣ ಎಂಬುದು ಸಾಮಾನ್ಯವಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕೆ ಪರಿಹಾರವೆಂಬಂತೆ ರೈಲ್ವೆಯ ಪ್ಯಾಸೆಂಜರ್ ಕೋಚ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ಗಳನ್ನು ಅಳವಡಿಸಲಾಗಿತ್ತು. ಈಗ ಮೇಲ್ ಎಕ್ಸ್ಪ್ರೆಸ್ನಲ್ಲಿ ಸಂಪೂರ್ಣ ಹವಾನಿಯಂತ್ರಣ ಅಳವಡಿಸಲಾಗಿದೆ.
ಅದಾಗ್ಯೂ ಲೊಕೊ ಪೈಲಟ್ ಕ್ಯಾಬಿನ್‌ನಲ್ಲಿ ಅಂತಹ ಯಾವುದೇ ಸೌಲಭ್ಯಗಳಿಲ್ಲದಿರುವುದರಿಂದಾಗಿ ತೀವ್ರವಾದ ಶಾಖ, ಆರ್ದ್ರ ಗಾಳಿ, ಧೂಳು ಮತ್ತು ಒತ್ತಡದ ವಾತಾವರಣವು ಅವರ ಆರೋಗ್ಯ ಮತ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿತ್ತು. ಈ ಪರಿಸ್ಥಿತಿಯನ್ನು ಸುಧಾರಿಸಲು, ಇಂಜಿನ್‌ಗಳು ಮತ್ತು ಸ್ಥಳೀಯ ರೈಲುಗಳ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸಲು ಕೇಂದ್ರ ರೈಲ್ವೆ ನಿರ್ಧರಿಸಿದ ಕೇಂದ್ರ ರೈಲ್ವೆ ಇಲಾಖೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶಾಖದ ತೀವ್ರತೆಯನ್ನು ಪರಿಗಣಿಸಿ, ಭಾರತೀಯ ರೈಲ್ವೆಯು 2010 ರಲ್ಲಿ ರೈಲ್ವೆಯ ಲೋಕೋ ಪೈಲಟ್ ಮತ್ತು ಮೋಟಾರ್‌ಮ್ಯಾನ್‌ಗಳ ಕ್ಯಾಬಿನ್‌ಗಳನ್ನು ನವೀಕರಿಸಲು ಮತ್ತು ಹವಾನಿಯಂತ್ರಣ ಮಾಡಲು ನಿರ್ಧರಿಸಿತು.
''ಕೇಂದ್ರ ರೈಲ್ವೆಯ 1,107 ಇಂಜಿನ್‌ಗಳಲ್ಲಿ 636 ಇಂಜಿನ್‌ಗಳಲ್ಲಿ ಎಸಿ ಅಳವಡಿಸಲಾಗಿದೆ. ಇದಲ್ಲದೇ ಸುಮಾರು 250 ಇಂಜಿನ್‌ಗಳಲ್ಲಿ ಎಸಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಮೇಲ್ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ಎಂಜಿನ್‌ಗಳು ಸೇರಿವೆ. ಉಳಿದ 200 ಇಂಜಿನ್‌ಗಳಲ್ಲಿ ತಾಂತ್ರಿಕ ತೊಂದರೆ ಹಾಗೂ ಇತರ ಕಾರಣಗಳಿಂದಾಗಿ ಎಸಿ ಅಳವಡಿಸುವ ಸಾಧ್ಯತೆ ಸದ್ಯಕ್ಕೆ ಸಾಧ್ಯವಿಲ್ಲ'' ಎಂದು ಕೇಂದ್ರ ರೈಲ್ವೆ ಸಾರ್ವಜನಿಕ ವಲಯದ ಮುಖ್ಯಾಧಿಕಾರಿ ಡಾ. ಸ್ವಪ್ನಿಲ್ ನೀಲಾ ಅವರು ತಿಳಿಸಿದ್ದಾರೆ.