image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಪ್ಪಾಗಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಗೆ 12 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿದ ಜಪಾನ್ ಕೋರ್ಟ್

ತಪ್ಪಾಗಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಗೆ 12 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿದ ಜಪಾನ್ ಕೋರ್ಟ್

ಜಪಾನ್​: ಕೊಲೆ ಪ್ರಕರಣದಲ್ಲಿ ತಪ್ಪಾಗಿ ಶಿಕ್ಷೆಗೊಳಗಾದ ಜಪಾನಿನ ವ್ಯಕ್ತಿಗೆ 1.4 ಮಿಲಿಯನ್ ಡಾಲರ್ ( ಸುಮಾರು 11.98 ಕೋಟಿ ರೂ) ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇವಾವೊ ಹಕಾಮಡಾ ಎಂಬುವರೇ ಇಷ್ಟೊಂದು ದೊಡ್ಡ ಮೊತ್ತದ ಪರಿಹಾರ ಪಡೆದ ವ್ಯಕ್ತಿಯಾಗಿದ್ದಾರೆ.

 1966ರಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಹಕಾಮಡಾ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಸದ್ಯ 89 ವರ್ಷ ವಯಸ್ಸಿನ ಮಾಜಿ ಬಾಕ್ಸರ್ ಹಕಾಮಡಾ ಸುಮಾರು ನಾಲ್ಕು ದಶಕ ಜೈಲಿನಲ್ಲಿ ಕಳೆದಿದ್ದಾರೆ. ಹಾಗೆ ಅವರು ಜೈಲಿನಲ್ಲಿ ಕಳೆದ ಪ್ರತಿಯೊಂದು ದಿನಕ್ಕೆ 12,500 ಯೆನ್​ಗಳಂತೆ ಲೆಕ್ಕಹಾಕಿ 1.4 ಮಿಲಿಯನ್ ಡಾಲರ್ ಪರಿಹಾರವನ್ನು ಅವರಿಗೆ ಪಾವತಿಸಲಾಗಿದೆ. ಹಕಾಮಡಾ ಅವರ ಸಹೋದರಿ ಹಾಗೂ ಇನ್ನಿತರರ ಸತತ ಪ್ರಯತ್ನದ ನಂತರ ಅವರನ್ನು ಕೊಲೆ ಆರೋಪದಿಂದ ಖುಲಾಸೆಗೊಳಿಸಲಾಗಿದ್ದು, ಕಳೆದ ವರ್ಷ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಅರ್ಜಿದಾರನಿಗೆ 217,362,500,000 ಯೆನ್ ನೀಡಲಾಗುವುದು ಎಂದು ಶಿಜುವೊಕಾ ಜಿಲ್ಲಾ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ ಎಂದು ನ್ಯಾಯಾಲಯದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಕಾಮಡಾ ಅವರ ಪ್ರಕರಣದ ಮರು ವಿಚಾರಣೆ ನಡೆಸಿದ್ದ ಇದೇ ನ್ಯಾಯಾಲಯವು ಅವರು ತಪ್ಪಿತಸ್ಥರಲ್ಲ ಮತ್ತು ಪೊಲೀಸರು ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ತೀರ್ಪು ನೀಡಿತ್ತು.

ಕಾನೂನು ತಂಡವು ಹಕಾಮಡಾ ಅನುಭವಿಸಿದ ನೋವನ್ನು ಪರಿಗಣಿಸಿದರೆ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ಹೇಳಿದೆ. ಮರಣದಂಡನೆಯ ತೂಗುಗತ್ತಿಯೊಂದಿಗೆ ದಶಕಗಳ ಕಾಲ ಬಂಧನದಿಂದ ಹಕಾಮಡಾ ಅವರ ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಅವರ ವಕೀಲರು ಹೇಳಿದ್ದಾರೆ. ಯುದ್ಧಾನಂತರದ ಜಪಾನ್ ಇತಿಹಾಸದಲ್ಲಿ ಮರುವಿಚಾರಣೆಗೆ ಒಳಗಾದ ಐದನೇ ಮರಣದಂಡನೆ ಕೈದಿಯಾಗಿದ್ದಾರೆ ಹಕಾಮಡಾ. ಹಿಂದಿನ ಎಲ್ಲಾ ನಾಲ್ಕು ಪ್ರಕರಣಗಳಲ್ಲಿಯೂ ಆರೋಪಿಗಳು ಖುಲಾಸೆಯಾಗಿದ್ದರು.

Category
ಕರಾವಳಿ ತರಂಗಿಣಿ