image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಂಭು ಗಡಿ ಮತ್ತು ಕನೌರಿ ಮೊರ್ಚಾದಲ್ಲಿ ಪ್ರತಿಭಟನಾ ನಿರತರಾಗಿರುವ ರೈತರೊಂದಿಗೆ ಕೇಂದ್ರದ ಮತ್ತೊಂದು ಸುತ್ತಿನ ಸಭೆ

ಶಂಭು ಗಡಿ ಮತ್ತು ಕನೌರಿ ಮೊರ್ಚಾದಲ್ಲಿ ಪ್ರತಿಭಟನಾ ನಿರತರಾಗಿರುವ ರೈತರೊಂದಿಗೆ ಕೇಂದ್ರದ ಮತ್ತೊಂದು ಸುತ್ತಿನ ಸಭೆ

ಚಂಡೀಗಢ: ಶಂಭು ಗಡಿ ಮತ್ತು ಕನೌರಿ ಮೊರ್ಚಾದಲ್ಲಿ ಪ್ರತಿಭಟನಾ ನಿರತರಾಗಿರುವ ರೈತರೊಂದಿಗೆ ಕೇಂದ್ರ ಸರ್ಕಾರದೊಂದಿಗೆ ನಡೆಯಬೇಕಿದ್ದ ನಾಳೆಯ ಸಭೆಯ ಸಮಯದಲ್ಲಿ ಕೆಲ ಬದಲಾವಣೆ ಆಗಿದೆ. ಚಂಡೀಗಢದಲ್ಲಿ ನಡೆಯಬೇಕಾಗಿದ್ದ ಸಭೆ ಸಮಯ ಬದಲಾವಣೆ ಕುರಿತು ಕೇಂದ್ರ ಇದೀಗ ಪತ್ರ ಕಳುಹಿಸಿದೆ.

ಈ ಕುರಿತು ರೈತ ನಾಯಕರಾದ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವಾನ್ ಸಿಂಗ್ ಪಂಧೇರ್​​ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಯುನೈಟೆಡ್​ ಕಿಸಾನ್​ ಮೋರ್ಚಾ ಮತ್ತು ಕಿಸಾನ್​ ಮಜ್ದೂರ್​ ಮೋರ್ಚಾಗೆ ಕಳುಹಿಸಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ಮತ್ತು ರೈತರೊಂದಿಗೆ ಮಾರ್ಚ್​ 19 ರಂದು ಮಹಾತ್ಮಗಾಂಧಿ ಸಂಸ್ಥೆ, ಸೆಕ್ಟರ್​ 26, ಚಂಡೀಗಢದಲ್ಲಿ ನಿಗದಿಯಾಗಿದ್ದ ಭೇಟಿಯನ್ನು ಬೆಳಗ್ಗೆ 11ಕ್ಕೆ ಬದಲಾಗಿ ಸಂಜೆ 5ಕ್ಕೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದೆ.

ಕಳೆದೊಂದು ವರ್ಷದಿಂದ ಶಂಭು ಮತ್ತು ಕನೌರಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಹಿರಿಯ ರೈತ ನಾಯಕರ ಜಗ್ಜೀತ್​​ ಸಿಂಗ್​ ದಲ್ಲೆವಾಲ್​ ಕಳೆದ 100 ದಿನಗಳಿಂದ ಉಪವಾಸ ಪ್ರತಿಭಟನೆ ಮುಂದುವರೆಸಿದ್ದಾರೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರ ರೈತರೊಂದಿಗೆ ಎರಡು ಬಾರಿ ಸಭೆ ನಡೆಸಿದೆ. ಇದೀಗ ನಾಳೆ ಮತ್ತೊಂದು ಸಭೆ ನಿಗದಿಯಾಗಿದ್ದು ಬೆಳಗ್ಗೆ 11ಕ್ಕೆ ಬದಲಾಗಿ ಸಂಜೆ 5 ನಡೆಯಲಿದೆ. ಇನ್ನು ನಾಳೆ ನಡೆಯಲಿರುವ ಸಭೆಯಲ್ಲಿ ಕೇಂದ್ರದ ಯಾವ ಯಾವ ಸಚಿವರು ಭಾಗಿಯಾಗಲಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ರಾಜ್ಯದ ಗಡಿಯಲ್ಲಿ ಪ್ರತಿಭಟನಾ ನಿರತರಾದ ರೈತರ ಜೊತೆಗೆ ಪಂಜಾಬ್​ ಸಿಎಂ ಭಗವಂತ್​ ಮಾನ್​ ಸಭೆ ನಡೆಸಿದ್ದರು. ಇದೀಗ ಕೇಂದ್ರದೊಂದಿಗೆ ನಡೆಯಲಿರುವ ಸಭೆಯಲ್ಲಿ ಪಂಜಾಬ್​ ಸಿಎಂ ಭಾಗಿಯಾಗುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದಗ್ಯೂ ಕಳೆದ ಬಾರಿ ನಡೆದ ಸಭೆಯಲ್ಲಿ ಪಂಜಾಬ್​ ಕೃಷಿ ಸಚಿವರು ಭಾಗಿಯಾಗಿದ್ದರು.

ರೈತರು ಕೃಷಿ ನೀತಿಯ ಅನುಷ್ಠಾನ, ಭೂರಹಿತ ಕಾರ್ಮಿಕರು ಮತ್ತು ರೈತರಿಗೆ ಭೂ ವಿತರಣೆ, ರೈತರು ಮತ್ತು ಕಾರ್ಮಿಕರ ಸಾಲ ಮನ್ನಾ ಸೇರಿದಂತೆ ರೈತರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

Category
ಕರಾವಳಿ ತರಂಗಿಣಿ