image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತೆಲಂಗಾಣದ ಎಸ್​ಎಲ್​ಬಿಸಿ ಟನಲ್​ ಕುಸಿದ ಸ್ಥಳದಲ್ಲಿ 24ನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯಾಚರಣೆ

ತೆಲಂಗಾಣದ ಎಸ್​ಎಲ್​ಬಿಸಿ ಟನಲ್​ ಕುಸಿದ ಸ್ಥಳದಲ್ಲಿ 24ನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯಾಚರಣೆ

ತೆಲಂಗಾಣ : ತೆಲಂಗಾಣದ ಎಸ್​ಎಲ್​ಬಿಸಿ ಟನಲ್​ ಕುಸಿದ ಸ್ಥಳದಲ್ಲಿ 24ನೇ ದಿನದ ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ನಾಪತ್ತೆಯಾದ 7 ಮಂದಿ ಕಾರ್ಮಿಕರಿಗೆ ಹುಡುಕಾಟ ತೀವ್ರಗೊಳಿಸಲಾಗಿದೆ.

ಶ್ರೀಶೈಲಂ ಎಡದಂಡೆ ಕಾಲುವೆಯ ಟನಲ್​ನ ಒಳ ಪ್ರದೇಶ ಭಾಗಶಃ ಕುಸಿದಿದ್ದು, ಡಿ1 ಮತ್ತು ಡಿ2 ಸ್ಥಳದಲ್ಲಿ ಕಣ್ಮರೆಯಾಗಿರುವ ವ್ಯಕ್ತಿಗಳಿರುವ ಸಾಧ್ಯತೆ ಇದೆ. ಇದಕ್ಕಾಗಿ ಮತ್ತಷ್ಟು ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕೇಂದ್ರ ರೈಲ್ವೆ, ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​, ರಾಜ್ಯದ ಗಣಿ ಸಿಂಗರೇಣಿ ಕಾಲೀರಿಸ್​, RAT​ ಮೈನರ್ಸ್​​ ಹಾಗೂ ಇತರ ಸಿಬ್ಬಂದಿ ಅಗತ್ಯ ಸಾಧನಗಳೊಂದಿಗೆ ಶೋಧದಲ್ಲಿ ಭಾಗಿಯಾಗಿದ್ದಾರೆ. ರಕ್ಷಣಾ ಕಾರ್ಯಕ್ಕೆ ವಿವಿಧ ಕ್ಷೇತ್ರದ ತಜ್ಞರಿಂದ ಮಾಹಿತಿ ಪಡೆದಿದ್ದು, ಸುಧಾರಿತ ತಂತ್ರಜ್ಞಾನದ ಬಳಕೆ ಮಾಡಲಾಗಿದೆ. ಟಿಬಿಎಂ ಆಪರೇಟರ್​​ ಗುರ್​ಪ್ರೀತ್​ ಸಿಂಗ್​ ಅವರ ಮೃತದೇಹ ಮಾರ್ಚ್​ 9ರಂದು ಸಿಕ್ಕಿದ್ದು, ಪಂಜಾಬ್​ನಲ್ಲಿರುವ ಕುಟುಂಬಕ್ಕೆ ಒಪ್ಪಿಸಲಾಗಿದೆ. ಇನ್ನೂ 7 ಮಂದಿಗೆ ಹುಡುಕಾಟ ನಡೆಯುತ್ತಿದೆ.

Category
ಕರಾವಳಿ ತರಂಗಿಣಿ