ಫ್ರಾನ್ಸ್: ಫ್ರಾನ್ಸ್ ಸಂಸತ್ತು ಮಹತ್ವದ ಮಸೂದೆಯೊಂದಕ್ಕೆ ಅನುಮೋದನೆ ನೀಡಿದೆ. ಸಂವಿಧಾನದಲ್ಲಿ ಗರ್ಭಪಾತದ ಹಕ್ಕನ್ನು ಪ್ರತಿಷ್ಠಾಪಿಸಲು ಫ್ರೆಂಚ್ ಸಂಸತ್‌ನಲ್ಲಿ ಮತದಾನ ನಡೆಯಿತು. ಈ ಮೂಲಕ ಗರ್ಭಪಾತದ ಹಕ್ಕುಗಳನ್ನು ಸಾಂವಿಧಾನಿಕವಾಗಿ ಅಳವಡಿಸಿಕೊಂಡ ವಿಶ್ವದ ಮೊದಲ ರಾಷ್ಟ್ರವೆಂಬ ಹಿರಿಮೆಗೆ ಫ್ರಾನ್ಸ್ ಪಾತ್ರವಾಯಿತು. ವಿಶೇಷ ಜಂಟಿ ಅಧಿವೇಶನದಲ್ಲಿ ಗರ್ಭಪಾತವನ್ನು ಮಹಿಳೆಯರ ಸಾಂವಿಧಾನಿಕ ಹಕ್ಕಾಗಿಸುವ ಮಸೂದೆಗೆ ಸಂಸದರು ಒಗ್ಗಟ್ಟಿನಿಂದ ಅನುಮೋದನೆ ನೀಡಿದರು.