image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪೈಲಟ್​ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ: 150 ಪ್ರಯಾಣಿಕರು ಪಾರು....

ಪೈಲಟ್​ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ: 150 ಪ್ರಯಾಣಿಕರು ಪಾರು....

ಹೈದರಾಬಾದ್​: ಶಂಶಾಬಾದ್​ನಲ್ಲಿರುವ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಭಾರೀ ದುರಂತವೊಂದು ತಪ್ಪಿದೆ. ಗೋವಾದಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನ ಮತ್ತೊಂದು ವಿಮಾನದೊಂದಿಗೆ ಡಿಕ್ಕಿಯಾಗುವುದರಿಂದ ಕ್ಷಣಾರ್ಧದಲ್ಲಿ ಪಾರಾಗಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಇಂಡಿಗೋ ವಿಮಾನ 6ಇ-6973 150 ಪ್ರಯಾಣಿಕರೊಂದಿಗೆ ಗೋವಾದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿತ್ತು. ಈ ವೇಳೆ ಶಂಶಾಬಾದ್​ ವಿಮಾನದಲ್ಲಿ ನಿಗದಿಯಂತೆ ವಿಮಾನ ನಿಲುಗಡೆಗೆ ಮುಂದಾಗಿದೆ. ವಿಮಾನದ ಲ್ಯಾಂಡಿಂಗ್​​ಗೆ ಏರ್​ ಟ್ರಾಫಿಕ್​ ಕಂಟ್ರೋಲ್​ನಿಂದಲೂ ಅನುಮತಿ ಸಿಕ್ಕಿದೆ. ಅದರಂತೆ ಪೈಲಟ್​ ರನ್​ವೇಯಲ್ಲಿ ಇಳಿಸಲು ಮುಂದಾಗುತ್ತಿದ್ದಂತೆ ಅದೇ ರನ್​ವೇಯಲ್ಲಿ ಮತ್ತೊಂದು ವಿಮಾನ ಟೇಕ್​ ಆಫ್​ ಆಗಲು ಮುಂದಾಗಿದ್ದನ್ನು ಪೈಲಟ್​ ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್​​ ವಿಮಾನವನ್ನು ಇಳಿಸದೇ ಹಾರಾಟಕ್ಕೆ ಮುಂದಾಗಿದ್ದು, ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.

ಇದಾದ 10 ನಿಮಿಷದ ಬಳಿಕ ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ. ಸಣ್ಣ ನಿಲುಗಡೆಯ ಬಳಿಕ ವಿಮಾನ ಮತ್ತೆ ವಿಶಾಖಪಟ್ಟಣಂ ಕಡೆ ಪ್ರಯಾಣ ಬೆಳೆಸಿತು. ಪೈಲಟ್​ ಸಮಯ ಪ್ರಜ್ಞೆಯಿಂದ ಸಿಬ್ಬಂದಿ ಮತ್ತು ಪ್ರಯಾಣಿಕರು ನಿಟ್ಟುಸಿರುಬಿಟ್ಟರು ಎಂದು ತಿಳಿದು ಬಂದಿದೆ.

Category
ಕರಾವಳಿ ತರಂಗಿಣಿ