image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವೆಸ್ಟ್​ಬ್ಯಾಂಕ್​ನಲ್ಲಿ ಕಾಣೆಯಾಗಿದ್ದ 10 ಮಂದಿ ಭಾರತೀಯರು ಸುರಕ್ಷಿತವಾಗಿ ಇಸ್ರೇಲ್​ಗೆ

ವೆಸ್ಟ್​ಬ್ಯಾಂಕ್​ನಲ್ಲಿ ಕಾಣೆಯಾಗಿದ್ದ 10 ಮಂದಿ ಭಾರತೀಯರು ಸುರಕ್ಷಿತವಾಗಿ ಇಸ್ರೇಲ್​ಗೆ

ನವದೆಹಲಿ: ವೆಸ್ಟ್​ಬ್ಯಾಂಕ್​ನಲ್ಲಿ ಕಾಣೆಯಾಗಿದ್ದ 10 ಮಂದಿ ಭಾರತೀಯರನ್ನು ಇಸ್ರೇಲ್​ಗೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ವಿದೇಶಾಂಗ ಇಲಾಖೆ ಸಚಿವಾಲಯ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತೀಯರನ್ನು ಪತ್ತೆ ಹಚ್ಚಲು ಇಸ್ರೇಲ್​ ಅಧಿಕಾರಿಗಳು ಪ್ರಯತ್ನಿಸಿದರು ಎಂದು ತಿಳಿಸಿದ್ದಾರೆ.

ಇವರೆಲ್ಲಾ ವೆಸ್ಟ್​ ಬ್ಯಾಂಕ್​ನಲ್ಲಿ ಇದ್ದರು. ಅವರನ್ನು ಇಸ್ರೇಲ್​ಗೆ ಕರೆತರಲಾಗಿದೆ. ಅವರು ವೆಸ್ಟ್​ಬ್ಯಾಂಕ್​ಗೆ ಹೇಗೆ ಹೋದರು ಎಂಬ ಕುರಿತು ತನಿಖೆ ನಡೆಸಲಾಗುವುದು. ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಜೈಸ್ವಾಲ್​ ಮಾಹಿತಿ ನೀಡಿದ್ದಾರೆ.

ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಮ್ಮ ರಾಯಭಾರ ಕಚೇರಿ ಇಸ್ರೇಲಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ವೆಸ್ಟ್​ ಬ್ಯಾಂಕ್​ಗೆ ಹೋಗಿದ್ದ ಎಲ್ಲಾ 10 ಭಾರತೀಯರನ್ನು ಇಸ್ರೇಲ್​ಗೆ ಕರೆತರಲಾಗಿದ್ದು, ನೋಡಿಕೊಳ್ಳಲಾಗುತ್ತಿದೆ ಎಂದರು.

Category
ಕರಾವಳಿ ತರಂಗಿಣಿ