image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೆಹಲಿ ಬಜೆಟ್​ನಲ್ಲಿ ಸಾರ್ವಜನಿಕರು ಭಾಗಿಯಾಗಲು ಅವಕಾಶ

ದೆಹಲಿ ಬಜೆಟ್​ನಲ್ಲಿ ಸಾರ್ವಜನಿಕರು ಭಾಗಿಯಾಗಲು ಅವಕಾಶ

ನವದೆಹಲಿ : 'ವಿಕಸಿತ್​ ದೆಹಲಿ' ಬಜೆಟ್​ ಮಂಡನೆಗೆ ರಾಜ್ಯ ಸರ್ಕಾರ ಸಜ್ಜಾಗಿದ್ದು, ಮಾರ್ಚ್​ 24- 26ರ ನಡುವಿನ ಅಧಿವೇಶನದಲ್ಲಿ ಬಜೆಟ್​ ಮಂಡಿಸಲಾಗುವುದು. ಎಲ್ಲ ವರ್ಗದವರನ್ನೊಳಗಂಡ ಬಜೆಟ್​ ರಚನೆಗೆ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆ ಸಮಾಜದ ಎಲ್ಲಾ ವರ್ಗಗಳ ಸಲಹೆಗಳನ್ನು ಪಡೆಯಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಿಎಂ ರೇಖಾ ಗುಪ್ತಾ, ದೆಹಲಿ ಅಭಿವೃದ್ಧಿಗೆ ಆದ್ಯತೆಯನ್ನು ವಿಕಸಿತ್​ ದೆಹಲಿ ಬಜೆಟ್​ ಮಂಡಿಸಲಾಗುವುದು. ಇದಕ್ಕಾಗಿ ಜನರಿಂದಲೂ ಸಲಹೆ ಸ್ವೀಕರಿಸಲಾಗುವುದು ಎಂದರು.

ಮಹಿಳೆಯರಿಗೆ ಆರ್ಥಿಕ ಸಹಾಯ, ಆರೋಗ್ಯ ಸೇವೆ ವಿಸ್ತರಣೆ, ಸಾರ್ವಜನಿಕ ಸಾರಿಗೆ ಉತ್ತೇಜನ, ಮಾಲಿನ್ಯ ಕಡಿಮೆಗೊಳಿಸುವ, ಯುಮುನಾ ಶುದ್ಧೀಕರಣ, ಉದ್ಯೋಗ, ಹಿರಿಯ ನಾಗರಿಕರ ಕಲ್ಯಾಣ ಮತ್ತು ಇತರೆ ಪ್ರಮುಖ ಅಂಶಗಳು ನಮ್ಮ ಪ್ರಣಾಳಿಕೆಯ ಭಾಗವಾಗಿದೆ. ಇದೀಗ ನಮ್ಮ ಗುರಿ ದೆಹಲಿ ಜನರ ಆದ್ಯತೆಯನ್ನು ಪರಿಗಣಿಸಿ, ಅದಕ್ಕನುಸಾರವಾಗಿ ಬಜೆಟ್​ ಮಂಡಿಸುವುದಾಗಿದೆ.

ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಲು ಮತ್ತು ಅವುಗಳನ್ನು ಬಜೆಟ್‌ನಲ್ಲಿ ಅಳವಡಿಸಲು ಪಾಲುದಾರರ ಸಲಹೆಗಳನ್ನು ಸೇರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ದೆಹಲಿಯ ನಾಗರಿಕರು ತಮ್ಮ ಸಲಹೆಗಳನ್ನು ಸಲ್ಲಿಸಲು ಅವಕಾಶ ಇದೆ. ಅವರು ತಮ್ಮ ಈ ಸಲಹೆಗಳನ್ನು ಇಮೇಲ್​ ViksitDelhiBudget_25@delhi.gov.in ಮತ್ತು ವಾಟ್ಸಾಪ್ ಸಂಖ್ಯೆ 999962025ಗೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೇ, ವಿಕಸಿತ್​​ ದೆಹಲಿ ಬಜೆಟ್​​ಗೆ ಸಲಹೆ ನೀಡಲು ಮಹಿಳಾ ಸಂಘಟನೆಗೆ ಮಾರ್ಚ್​​ 5 ರಂದು ಸರ್ಕಾರ ಆಹ್ವಾನ ನೀಡಿದೆ. ಅದೇ ದಿನ ಸಂಜೆ ಶಿಕ್ಷಣ ವಲಯದೊಂದಿಗೆ ತೊಡಗಿಸಿಕೊಂಡಿರುವ ಜನರಿಗೆ ಆಹ್ವಾನಿಸಲಾಗಿದೆ. ಮಾರ್ಚ್​6ರಂದು ಉದ್ಯಮ ಮತ್ತು ಕೈಗಾರಿಕಾ ಕ್ಷೇತ್ರದ ಜನರು ಸಲಹೆ ನೀಡಲಿದ್ದಾರೆ. ಈ ರೀತಿ ಸರಣಿ ಸಭೆ ಮೂಲಕ ದೆಹಲಿಯ ಎಲ್ಲಾ ಸಂಬಂಧಿಸಿದ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗುವುದು. ನಮ್ಮ ಈ ಸಾಮೂಹಿಕ ಪ್ರಯತ್ನವು ಇದು ಜನರ ಬಜೆಟ್​ ಎಂಬುದನ್ನು ಖಚಿತ ಪಡಿಸುತ್ತದೆ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಸಿಎಂ, ಇಂದು ಆರೋಗ್ಯದ ಮೇಲೆ ಸಿಎಜಿ ವರದಿಯನ್ನು ಚರ್ಚಿಸಲಾಗುವುದು. ಈ ಮೂಲಕ ಹಿಂದಿನ ಆಮ್​ ಆದ್ಮಿ ಸರ್ಕಾರದ ಎಲ್ಲಾ ಹಗರಣಗಳನ್ನು ಬಯಲು ಮಾಡಲಾಗುವುದು. ಚುನಾವಣೆಗೆ ಮುಂಚೆಯೇ ಎಎಪಿ ಸರ್ಕಾರದ ಹಗರಣಗಳು ಬಯಲಾಗಿದ್ದವು. ಇಂದು ಹೇಗೆ ಎಎಪಿ ಜನರನ್ನು ವಂಚಿಸಿತು ಎಂಬುದಕ್ಕೆ ಜನರು ಸಾಕ್ಷಿಯಾಗಲಿದ್ದಾರೆ. ಪ್ರಾಮಾಣಿಕರೆಂದು ದೆಹಲಿಯಲ್ಲಿ ಆಡಳಿತಕ್ಕೆ ಬಂದಿದ್ದವರು, ಅಪ್ರಾಮಾಣಿಕತೆಯ ಮಿತಿಯನ್ನು ಮೀರಿದರು ಎಂದು ಟೀಕಿಸಿದರು.

Category
ಕರಾವಳಿ ತರಂಗಿಣಿ