ಹೈದರಾಬಾದ್: ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗ ಕುಸಿದು ಇಂದಿಗೆ ವಾರ ಕಳೆದಿದೆ, ಏಳನೇ ದಿನದ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಎನ್‌ಜಿಆರ್‌ಐ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ ನೀಡಿದ ಸಮೀಕ್ಷೆಯಲ್ಲಿ ಗುರುತಿಸಿದ ಸ್ಥಳದಲ್ಲಿ ಉತ್ಖನನ ಕಾರ್ಯ ಸಾಗಿದೆ. ಇನ್ನು ಈ ಸುರಂಗ ಮಾರ್ಗದಲ್ಲಿನ ಮಣ್ಣು, ಬಂಡೆಗಳು ಭಿನ್ನವಾಗಿ, ಸುಮಾರು 3 ರಿಂದ 5 ಮೀಟರ್ ಒಳಗೆ ಮೃದುವಾದ ಪದರಗಳಿರುವ ಸಾಧ್ಯತೆ ಇದೆ ಹೇಳಿದೆ.
ಅಗೆಯುತ್ತಾ ಹೋದಂತೆ ಅಲ್ಲಿ ಏನೆಂಬುದು ತಿಳಿಯುತ್ತಿಲ್ಲ. ಆದರೆ, ಅಲ್ಲಿ ಹೆಚ್ಚಿನ ನೀರಿನ ಹರಿವಿದೆ. ಇದರಿಂದಾಗಿ ಹೆಚ್ಚಿನ ಆಳದಲ್ಲಿ ಅಗೆಯಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಇದು ಕೂಡ ರಕ್ಷಣಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸುರಂಗದಲ್ಲಿ ಜಿಪಿಆರ್ ಸಮೀಕ್ಷೆ ಪ್ರಕಾರ ಗುರುತಿಸಿದ ಸ್ಥಳದಲ್ಲಿ ಏನಾಗಿದೆ ಎಂಬುದು ಇಂದು ಅಥವಾ ನಾಳೆ ಸಂಜೆ ವೇಳೆಗೆ ಗೊತ್ತಾಗಲಿದೆ. ಆ ಪ್ರದೇಶಗಳಲ್ಲಿಈಗ ಉತ್ಕನನ ಆರಂಭವಾಗಿದೆ ಎಂದು ಸಿಂಗರೇಣಿ ಸಿಎಂಡಿ ಬಲರಾಮ್ ತಿಳಿಸಿದ್ದಾರೆ.
ಇನ್ನು ಸುರಂಗದಲ್ಲಿ ಶವಗಳು ಪತ್ತೆಯಾಗಿವೆ ಎಂಬುದು ಸುಳ್ಳು ಎಂದು ನಾಗರಕರ್ನೂಲ್ ಜಿಲ್ಲಾಧಿಕಾರಿ ಬಡಾವತ್ ಸಂತೋಷ್ ಮತ್ತು ಎಸ್ಪಿ ವೈಭವ್ ಗಾಯಕ್ವಾಡ್ ತಿಳಿಸಿದ್ದು, ಈ ಗಾಳಿ ಸುದ್ದಿಗಳನ್ನು ನಂಬಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಎನ್‌ಜಿಆರ್‌ಐ ಕೆಲವು ಪ್ರದೇಶಗಳನ್ನು ಮಾತ್ರ ಗುರುತಿಸಿದೆ ಹೊರತು ಸುರಂಗದಲ್ಲಿ ಸಿಲುಕಿದವರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಮಾಹಿತಿ ಸಿಕ್ಕರೆ ಬಹಿರಂಗಪಡಿಸುವುದಾಗಿ ಅವರು ಇದೇ ವೇಳೆ, ಡಿಸಿ ಮತ್ತು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಸುರಂಗದಲ್ಲಿ ಸಿಲುಕಿರುವ 8 ಮಂದಿಯನ್ನು ರಕ್ಷಿಸಲು ಭೂಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್, ಹೈದ್ರಾ, ಸಿಂಗರೇಣಿ, ರೈಲ್ಬೆ ಸೇರಿದಂತೆ 12 ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಸುರಂಗದಲ್ಲಿ ಅಡ್ಡವಾಗಿರುವ ಅವಶೇಷಗಳನ್ನು ಗ್ಯಾಸ್ ಮತ್ತು ಪ್ಲಾಸ್ಮಾ ಕತ್ತರಿಸುವ ಯಂತ್ರಗಳಿಂದ ಕತ್ತರಿಸಿ, ಅವುಗಳನ್ನು ಹಂತ ಹಂತವಾಗಿ ಹೊರಗೆ ಹಾಕಲಾಗುತ್ತಿದೆ. ಅತ್ಯಾಧುನಿಕ ರಕ್ಷಣಾ ಸಾಧನಗಳ ಜೊತೆಗೆ, ರಾಜ್ಯ ಮತ್ತು ಕೇಂದ್ರ ರಕ್ಷಣಾ ಸಿಬ್ಬಂದಿಗಳ ಸಮನ್ವಯದಲ್ಲಿ ಸುರಂಗದಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನವನ್ನು ನಡೆಸಲಾಗಿದೆ.