image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾಣಾ ಹಿಮಕುಸಿತ ಘಟನೆ: ಇದುವರೆಗೂ 47ಮಂದಿ ರಕ್ಷಣೆ: 8 ಕಾರ್ಮಿಕರಿಗಾಗಿ ಮುಂದುವರೆದ ಕಾರ್ಯಾಚರಣೆ

ಮಾಣಾ ಹಿಮಕುಸಿತ ಘಟನೆ: ಇದುವರೆಗೂ 47ಮಂದಿ ರಕ್ಷಣೆ: 8 ಕಾರ್ಮಿಕರಿಗಾಗಿ ಮುಂದುವರೆದ ಕಾರ್ಯಾಚರಣೆ

ಚಮೋಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ್ ಬಳಿಯ ಮಾಣಾದಲ್ಲಿ ಶುಕ್ರವಾರ ಹಿಮಕುಸಿತದ ಅವಶೇಷಗಳ ಅಡಿಯಲ್ಲಿ ಹೂತುಹೋಗಿರುವ, ಇನ್ನುಳಿದ ಬಿಆರ್‌ಒ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದೆ.

ಹಿಮಕುಸಿತ ರಕ್ಷಣಾ ಕಾರ್ಯಾಚರಣೆ ನಿಮಿತ್ತ ಜ್ಯೋತಿರ್ಮಠ ಮೂಲ ಶಿಬಿರದಿಂದ ಹೆಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಇದೀಗ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ಬದರಿನಾಥ್ ಧಾಮದ ಕಡೆಗೆ ಕಳುಹಿಸಲಾಗಿದೆ. ಲಂಬಗಡದ ಆಚೆ ರಸ್ತೆಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಹಾಗಾಗಿ ಈಗ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ಪ್ರಧಾನಿ ಮೋದಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಉತ್ತರಾಖಂಡ ಸಿಎಂ ಧಾಮಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಮಾಣಾ ಹಿಮಕುಸಿತದ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇಂದು ಬೆಳಗಿನ ಶುಭ ಸುದ್ದಿ ಎಂದರೆ ಆ ಪ್ರದೇಶದಲ್ಲಿ ಈಗ ಹವಾಮಾನ ಸಹಜ ಸ್ಥಿತಿಗೆ ಮರಳಿದೆ. ಹಿಮಪಾತ ನಿಂತ ನಂತರ ಇದೀಗ ಬೇಸ್ ಕ್ಯಾಂಪ್ ಜೋಶಿಮಠದಿಂದ ಹೆಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಚಮೋಲಿ ಡಿಸಿ ಅವರಿಂದ ಹಿಡಿದು ಎಲ್ಲ ವಿಪತ್ತು ನಿರ್ವಹಣಾ ಅಧಿಕಾರಿಗಳು ಜ್ಯೋತಿರ್ಮಠದಲ್ಲಿದ್ದಾರೆ.

ಸುಮಾರು 150 ರಕ್ಷಣಾ ಕಾರ್ಯಕರ್ತರು ಜೋಶಿಮಠ ಮತ್ತು ಗೋವಿಂದ್ ಘಾಟ್ ಗುರುದ್ವಾರದಿಂದ ಬದರಿನಾಥ್ ಮಾಣಾ ಬಳಿ ಹಿಮಪಾತ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸಿಎಂ ಧಾಮಿ ಕೂಡ ಜೋಶಿಮಠಕ್ಕೆ ತಲುಪುವ ಸಾಧ್ಯತೆ ಇದೆ. ಪ್ರಸ್ತುತ, BRO/ಆಡಳಿತವು ಹಿಮಕುಸಿತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

Category
ಕರಾವಳಿ ತರಂಗಿಣಿ