image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 8.25ರ ದರದಲ್ಲಿಯೇ ಮುಂದುವರಿಕೆ

ಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 8.25ರ ದರದಲ್ಲಿಯೇ ಮುಂದುವರಿಕೆ

ನವದೆಹಲಿ: ಭಾರತದ ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಇಪಿಎಫ್ಒ 2024-25ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.25 ರ ಮಟ್ಟದಲ್ಲಿಯೇ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 2024 ರಲ್ಲಿ, ಇಪಿಎಫ್ಒ ಬಡ್ಡಿದರವನ್ನು 2022-23 ರಲ್ಲಿ ಇದ್ದ ಶೇಕಡಾ 8.15 ರಿಂದ 2023-24 ಕ್ಕೆ ಶೇಕಡಾ 8.25 ಕ್ಕೆ ಹೆಚ್ಚಿಸಿತ್ತು.

ಇಪಿಎಫ್ಒನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿರುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (ಸಿಬಿಟಿ) ಶುಕ್ರವಾರ ನಡೆದ ಸಭೆಯಲ್ಲಿ 2024-25ನೇ ಸಾಲಿಗೆ ಇಪಿಎಫ್ ಮೇಲೆ ಈಗಿರುವ ಶೇಕಡಾ 8.25 ರಷ್ಟು ಬಡ್ಡಿದರವನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಸಿಬಿಟಿ ನಿರ್ಧಾರದ ನಂತರ, 2024-25ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುವುದು.

ಸರ್ಕಾರದ ಅನುಮೋದನೆಯ ನಂತರ, 2024-25ರ ಇಪಿಎಫ್ ಮೇಲಿನ ಬಡ್ಡಿದರವನ್ನು ಇಪಿಎಫ್ಒನ ಏಳು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಮಾರ್ಚ್ 2022 ರಲ್ಲಿ, ಇಪಿಎಫ್ಒ ತನ್ನ ಏಳು ಕೋಟಿ ಚಂದಾದಾರರಿಗೆ 2021-22ರ ಇಪಿಎಫ್ ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1 ಕ್ಕೆ ಇಳಿಸಿತ್ತು. 2020-21ರಲ್ಲಿ ಇದ್ದ ಇಪಿಎಫ್ ಮೇಲಿನ ಶೇಕಡಾ 8.10 ರಷ್ಟು ಬಡ್ಡಿದರವು 1977-78 ರ ನಂತರದ ಅತ್ಯಂತ ಕಡಿಮೆ ಬಡ್ಡಿದರವಾಗಿತ್ತು.

ಉಮಂಗ್ ಅಪ್ಲಿಕೇಶನ್, ಇಪಿಎಫ್ಒ ಪೋರ್ಟಲ್ ಮತ್ತು ಮಿಸ್ಡ್ ಕಾಲ್ ಮೂಲಕ ನೀವು ನಿಮ್ಮ ಇಪಿಎಫ್ ಬ್ಯಾಲೆನ್ಸ್​ ಚೆಕ್ ಮಾಬಹುದು.

ಉಮಂಗ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ. ನಿಮ್ಮ ಫೋನ್ ನಂಬರ್ ನಮೂದಿಸಿ ಅದರಲ್ಲಿ ನೋಂದಾಯಿಸಿಕೊಳ್ಳಿ. ನಂತರ ಇದರಲ್ಲಿ ಇಪಿಎಫ್ ಪಾಸ್ ಬುಕ್, ಕ್ಲೈಮ್ ಗಳು ಮತ್ತು ಬ್ಯಾಲೆನ್ಸ್ ಚೆಕ್ ಗಳಂತಹ ವೈಶಿಷ್ಟ್ಯಗಳನ್ನು ನೀವು ಬಳಸಬಹುದು.

ಇಪಿಎಫ್ಒ ವೆಬ್ ಸೈಟ್​ಗೆ ಭೇಟಿ ನೀಡಿ. ಮೆಂಬರ್ ಪಾಸ್​ ಬುಕ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಯುಎಎನ್ ಹಾಗೂ ಪಾಸ್​ವರ್ಡ್​ ನಮೂದಿಸಿ ಲಾಗಿನ್ ಮಾಡಿ. ಈಗ ನೀವು ನಿಮ್ಮ ಇಪಿಎಫ್ ಬ್ಯಾಲೆನ್ಸ್​ ಚೆಕ್ ಮಾಡಬಹುದು.

ನಿಮ್ಮ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಿ (ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ವಿವರಗಳನ್ನು ಲಿಂಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ).

Category
ಕರಾವಳಿ ತರಂಗಿಣಿ