image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯುದ್ಧದಲ್ಲಿ ನಾಶವಾದ ತಮ್ಮ ಮನೆಯನ್ನು ಹುಡುಕುತ್ತಿರುವ ಪ್ಯಾಲೆಸ್ಟೈನಿಯನ್ನರು

ಯುದ್ಧದಲ್ಲಿ ನಾಶವಾದ ತಮ್ಮ ಮನೆಯನ್ನು ಹುಡುಕುತ್ತಿರುವ ಪ್ಯಾಲೆಸ್ಟೈನಿಯನ್ನರು

ಗಾಜಾ: ಹಮಾಸ್​ ಉಗ್ರರು ಮತ್ತು ಇಸ್ರೇಲ್​ ನಡುವೆ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದೆ. ಆಶ್ರಯ ತಾಣಗಳಲ್ಲಿದ್ದ ಜನರು ಇದೀಗ, ತಮ್ಮ ತಮ್ಮ ವಾಸಸ್ಥಾನಗಳಿಗೆ ವಾಪಸ್ಸಾಗುತ್ತಿದ್ದಾರೆ. ಆದರೆ, ಅಲ್ಲಿನ ಪರಿಸ್ಥಿತಿ ಹೇಳತೀರದಾಗಿದೆ. ಇಸ್ರೇಲ್​​ನ ದಾಳಿಗೆ ಧರಾಶಾಯಿ ಆಗಿರುವ ಮನೆಗಳು, ಕಟ್ಟಡಗಳು ಥೇಟ್​ 'ಸಮಾಧಿ'ಯಂತೆ ಕಾಣುತ್ತಿವೆ.

16 ತಿಂಗಳು ನಡೆದ ಯುದ್ಧದಲ್ಲಿ ಕಟ್ಟಡಗಳ ಸಮೇತ, ನಗರಗಳಿಗೆ ಸರಬರಾಜಾಗುತ್ತಿದ್ದ ನೀರು, ವಿದ್ಯುತ್ ಅಥವಾ ಇನ್ನಿತರ ಸೇವೆಗಳೆಲ್ಲವೂ ಸ್ತಬ್ಧವಾಗಿವೆ. ಇಲ್ಲಿ ನಮ್ಮ ಸುಂದರವಾದ ಮನೆ ಇತ್ತು ಎಂಬುದನ್ನೇ ಜನರು ಹುಡುಕಿ ತೆಗೆಯುವ ಸ್ಥಿತಿ ನಿರ್ಮಾಣವಾಗಿದೆ.

ವಿಶ್ವಸಂಸ್ಥೆಯ ಪ್ರಕಾರ, ಗಾಜಾದಲ್ಲಿ ಒಂದು ತಿಂಗಳು ಕದನ ವಿರಾಮ ಘೋಷಣೆಯಾಗಿದ್ದರಿಂದ ಸುಮಾರು 6 ಲಕ್ಷ ಪ್ಯಾಲೆಸ್ಟೈನಿಯನ್ನರು ಉತ್ತರ ಗಾಜಾಕ್ಕೆ ಮರಳಿದ್ದಾರೆ. ತಮ್ಮ ಮನೆಗಳಿಗೆ ಹಿಂತಿರುಗಿದ ಸಂತೋಷ ಒಂದೆಡೆಯಾದರೆ, ತೀವ್ರ ಹಾನಿ ಅಥವಾ ನಾಶವಾಗಿರುವ ಪ್ರದೇಶದಲ್ಲಿ ಅವಶೇಷಗಳ ಮಧ್ಯೆ ತಮ್ಮ ಭವಿಷ್ಯವನ್ನು ಮತ್ತೆ ಕಟ್ಟಿಕೊಳ್ಳಲು ಸಜ್ಜಾಗಿದ್ದಾರೆ.

ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟವು ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇಸ್ರೇಲ್‌ನ ಬಾಂಬ್ ದಾಳಿ ಮತ್ತು ಹಮಾಸ್ ಉಗ್ರಗಾಮಿಗಳ ಪ್ರತಿರೋಧದ ದಾಳಿಯಲ್ಲಿ ನಾಶವಾದ ಗಾಜಾವನ್ನು ಪುನರ್​​ ನಿರ್ಮಿಸಲು ಸುಮಾರು 53 ಬಿಲಿಯನ್ ಅಮೆರಿಕನ್​ ಡಾಲರ್​ ವೆಚ್ಚವಾಗುತ್ತದೆ ಎಂದು ಅಂದಾಜಿಸಿದೆ. ಇದೇ ವೇಳೆ ಇಲ್ಲಿನ ಅವಶೇಷಗಳ ತೆರವಿಗೆ ಬೇಕಾದ ಯಾವುದೇ ಸೌಕರ್ಯಗಳು ಮತ್ತು ಅಥವಾ ಅದಕ್ಕೆ ಬೇಕಾದಷ್ಟು ಹಣದ ಕೊರತೆ ಇದೆ.

ಗಾಜಾವನ್ನು ತಕ್ಷಣ ವಾಸಯೋಗ್ಯಕ್ಕೆ ಅನುಮತಿಸಬೇಕು. ಜನರಿಗೆ ಡೇರೆಗಳು ಮತ್ತು ತಾತ್ಕಾಲಿಕ ಆಶ್ರಯ ತಾಣಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹಮಾಸ್​ ಉಗ್ರರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಅನುಮತಿಸಿದಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಷರತ್ತು ವಿಧಿಸಿತ್ತು. ಇಸ್ರೇಲ್ ಮೊಬೈಲ್ ಮನೆಗಳು ಮತ್ತು ನಿರ್ಮಾಣ ವಸ್ತುಗಳನ್ನು ಗಾಜಾದೊಳಕ್ಕೆ ಬಿಡಲು ಒಪ್ಪಿಕೊಂಡಿದೆ.

Category
ಕರಾವಳಿ ತರಂಗಿಣಿ