image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಷ್ಯಾ ಪರವಾದ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಅಮೇರಿಕ ಮತ

ರಷ್ಯಾ ಪರವಾದ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಅಮೇರಿಕ ಮತ

ಅಮೆರಿಕ: ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್​ - ರಷ್ಯಾ ಯುದ್ಧದಲ್ಲಿ ಆರಂಭದಿಂದಲೂ ಅಮೆರಿಕ ಉಕ್ರೇನ್​ ಪರ ನಿಂತಿತ್ತು. ಆದರೆ, ಇದೀಗ ನಾಟಕೀಯ ಬೆಳವಣಿಗೆಯಲ್ಲಿ ಅಮೆರಿಕ ವಿಶ್ವಸಂಸ್ಥೆ ನಿರ್ಣಯದಲ್ಲಿ ರಷ್ಯಾದ ಪರ ಹಾಗೂ ನಿರ್ಣಯದ ವಿರುದ್ಧ ಮತ ಹಾಕುವ ಮೂಲಕ ಗಮನ ಸೆಳೆದಿದೆ. ರಷ್ಯಾದ ಜೊತೆ ನೇರ ಮಾತುಕತೆ ಮೂಲಕ ಯುದ್ಧವನ್ನು ಕೊನೆಗಾಣಿಸಲು ಮುಂದಾಗಿರುವ ಟ್ರಂಪ್​, ಕಳೆದ ವಾರ ನಡೆದ ಪ್ರಾಥಮಿಕ ಮಾತುಕತೆಯಲ್ಲಿ ಉಕ್ರೇನ್​​ ಮತ್ತು ಯುರೋಪಿಯನ್​ ರಾಷ್ಟ್ರಗಳ ಬೆಂಬಲವನ್ನು ಹೊರಗೆ ಇಟ್ಟು ಚರ್ಚೆ ನಡೆಸಿದ್ದರು.

193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯಸಭೆಯು ಉಕ್ರೇನ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಮಂಡಿಸಿದ ನಿರ್ಣಯದ ಮೇಲೆ ಮತ ಚಲಾಯಿಸಿದವು. "ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸಬೇಕು " ಎಂಬ ಕರಡು ನಿರ್ಣಯ ಕೈಗೊಳ್ಳಲಾಗಿತ್ತು

ನಿರ್ಣಯವು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಾಗರಿಕ ಸಮಾಜ ಒಳಗೊಂಡಂತೆ ಅಗಾಧವಾದ ವಿನಾಶ ಮತ್ತು ಮಾನವ ಸಂಕಟದಿಂದ ಗುರುತಿಸಲ್ಪಟ್ಟಿರುವ ಉಕ್ರೇನ್ ವಿರುದ್ಧದ ಯುದ್ಧದ ಆರಂಭಿಕ ನಿಲುಗಡೆ ಮತ್ತು ಶಾಂತಿ ಕಾಪಾಡಬೇಕು ಎಂಬ ನಿರ್ಣಯಕ್ಕೆ ಕರೆ ನೀಡಿದೆ.

ಮೂರು ವರ್ಷಗಳ ಹಿಂದೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಉಕ್ರೇನ್‌ನ ಕರಡು ನಿರ್ಣಯ ತಡೆಯುವ ಪ್ರಯತ್ನದಲ್ಲಿ ಅಮೆರಿಕ ರಷ್ಯನ್ನರೊಂದಿಗೆ ಮತ ಚಲಾಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿತು. ಕರಡು ನಿರ್ಣಯದ ಪರವಾಗಿ ಯುರೋಪಿಯನ್ನರು ಮತ್ತು G7 ( ಅಮೆರಿಕ ಹೊರತು ಪಡಿಸಿ) ರಾಷ್ಟ್ರಗಳು ಮತ ಚಲಾಯಿಸುವುದರೊಂದಿಗೆ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಯಿತು.

Category
ಕರಾವಳಿ ತರಂಗಿಣಿ