image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್​​ಗಳ ನಿಗೂಢ ​ಸಾವು

ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್​​ಗಳ ನಿಗೂಢ ​ಸಾವು

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ದಕ್ಷಿಣ ದ್ವೀಪ ತಾಸ್ಮಾನಿಯಾದಲ್ಲಿ ಹೆಚ್ಚು ಜನಸಂಪರ್ಕಕ್ಕೆ ಒಳಗಾಗದ ಸಮುದ್ರ ಕಿನಾರೆಯಲ್ಲಿ 150ಕ್ಕೂ ಹೆಚ್ಚು ಡಾಲ್ಫಿನ್​ಗಳು ಸಾವನ್ನಪ್ಪಿದ್ದು, ಕಡಲ ಕಿನಾರೆಯಲ್ಲಿ ಅದರ ಕಳೆಬರಗಳು ಕಂಡು ಬಂದಿವೆ.157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ ಸಾವಿಗೆ ಕಾರಣವಾಗಿರುವಂತೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿರುವ ಕೆಲವು ಡಾಲ್ಫಿನ್​ಗಳು ಸಹ ಪತ್ತೆಯಾಗಿದ್ದು, ಅವುಗಳನ್ನು ರಕ್ಷಿಸುವುದು ಕಷ್ಟವಾಗಿದೆ ಎಂದು ರಾಜ್ಯ ವನ್ಯಜೀವಿ ಅಧಿಕಾರಿ ಬ್ರೆಂಡೊನ್​ ಕ್ಲಾರ್ಕ್​ ಹೇಳಿದ್ದಾರೆ.

ಡಾಲ್ಫಿನ್​ಗಳ ಮೇಲಿನ ಹಾನಿ ಕಡಿಮೆ ಮಾಡಲು ತಜ್ಞ ವೈದ್ಯರನ್ನು ಸ್ಥಳದಲ್ಲಿ ಸಹಾಯಕ್ಕೆ ನಿಯೋಜಿಸಬೇಕಿದೆ. ವೇಲ್ಸ್​ಗಳುಇ ಡಾಲ್ಫಿನ್​ ಗಳ ಮೇಲೆ ಆಗಾಗ ಈ ರೀತಿಯ ದಾಳಿ ಮಾಡಿ ಹಾನಿ ಮಾಡುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ವೆಟ್​ ಡಾಕ್ಟರ್​ ಉಪಸ್ಥಿತಿ ಅವಶ್ಯವಾಗಿದೆ ಎಂದಿದ್ದಾರೆ.

ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್​ಗಳ ಮೇಲಿನ ಈ ರೀತಿಯ ದಾಳಿ 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದಿದೆ ಎಂದು ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ. ಬಹುಕಾಲದ ಬಳಿಕ ಈ ರೀತಿಯ ನಡುವಳಿಕೆ ಕಂಡು ಬಂದಿದೆ. ಈ ಡಾಲ್ಫಿನ್​ ​ಗಳು ವಲಸಿಗ ಪ್ರಾಣಿಗಳಾಗಿದ್ದು, ಇವು ಜಗತ್ತಿನ ಎಲ್ಲೆಡೆ ಸಂಚರಿಸುತ್ತವೆ. 50 ವರ್ಷದಲ್ಲಿ ಮೊದಲ ಬಾರಿಗೆ ಡಾಲ್ಫಿನ್​ ಗಳು ಈ ರೀತಿಯಲ್ಲಿ ಕಂಡು ಬಂದಿರುವುದು ಏನಕ್ಕೆ ಎಂಬುದು ಕಾರಣ ತಿಳಿದಿಲ್ಲ. ಈ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಈ ಕುರಿತು ಸುಳಿವು ಲಭ್ಯವಾಗುವ ಭರವಸೆ ಇದೆ ಎಂದು ಬ್ರೆಂಡೊನ್​ ಕ್ಲಾರ್ಕ್ ತಿಳಿಸಿದ್ದಾರೆ​ .

ತಾಸ್ಮಾನಿಯಾದಲ್ಲಿ ಕಡು ಕಪ್ಪು ಮೈ ಬಣ್ಣದ ಡಾಲ್ಫಿನ್​ಗಳು ಬುಧವಾರ ಬೆಳಗ್ಗೆ ಸಮುದ್ರ ಕಿನಾರೆಯ ಮರಳಿನಲ್ಲಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಈ ಕಿನಾರೆ ಪ್ರದೇಶ ಜನನಿಬಿಡವಲ್ಲದ ಕ್ಲಿಷ್ಟಕರ ಪ್ರದೇಶವಾಗಿದೆ. ಇಲ್ಲಿನ ಸಮುದ್ರಕ್ಕೆ ವಿಶೇಷ ಸಾಧನಗಳನ್ನು ತರುವುದು ಕೂಡ ಸವಾಲುದಾಯಕವಾಗಿದ್ದು, ಇದು ದುರ್ಗಮ ಮಾರ್ಗವಾಗಿದೆ ಎಂದು ತಾಸ್ಮಾನಿಯಾದ ಪರಿಸರ ವಿಭಾಗ ತಿಳಿಸಿದೆ.

Category
ಕರಾವಳಿ ತರಂಗಿಣಿ