image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಷ್ಟ್ರಪತಿ ಭವನದಲ್ಲಿ ಕತಾರ್​ ದೊರೆಗೆ ಗಾರ್ಡ್​ ಆಫ್​ ಆನರ್​ ಗೌರವ

ರಾಷ್ಟ್ರಪತಿ ಭವನದಲ್ಲಿ ಕತಾರ್​ ದೊರೆಗೆ ಗಾರ್ಡ್​ ಆಫ್​ ಆನರ್​ ಗೌರವ

ನವದೆಹಲಿ: ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಕತಾರ್​ ದೊರೆ ತಮೀಮ್​ ಬಿನ್​ ಹಮದ್​ ಅಲ್​ ಥನಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಇಂದು ಗಾರ್ಡ್​ ಆಫ್​ ಆನರ್​ ಮೂಲಕ ಸರ್ಕಾರಿ ಗೌರವಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಹಿರಿಯ ಸಚಿವರು ಕತಾರ್‌ ದೊರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಕತಾರ್‌ ನಿಯೋಗವನ್ನು ರಾಷ್ಟ್ರಪತಿ ಮುರ್ಮು ಸ್ವಾಗತಿಸಿದರು.

ಭಾರತ ಭೇಟಿಗಾಗಿ ತಮೀಮ್​ ಬಿನ್​ ಹಮದ್​ ಅಲ್​ ಥಾನಿ ಭಾರತಕ್ಕೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡು ವಿಶೇಷ ಗೌರವ ನೀಡಿದ್ದರು. ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್​ ಕೂಡ ಉಪಸ್ಥಿತರಿದ್ದರು. "ಕತಾರ್​ ದೊರೆ ತನ್ನ ಸಹೋದರನಿದ್ದಂತೆ" ಎಂದು ಹೇಳಿದ್ದ ಪ್ರಧಾನಿ ಮೋದಿ, ಅವರ ಭೇಟಿ ಫಲಪ್ರದವಾಗಲಿ ಎಂದು ಹಾರೈಸಿದ್ದರು.

ಕತಾರ್​ ದೊರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚೆ ನಡೆಸಲಿದ್ದು, ಅವರಿಗಾಗಿ ವಿಶೇಷ ಔತಣಕೂಟವನ್ನು ಆಯೋಜಿಸಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಕತಾರ್​ ದೊರೆಯೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಉದ್ಯಮಿಗಳ ನಿಯೋಗವೂ ಆಗಮಿಸಿದೆ. ಈ ಮೊದಲು 2015ರ ಮಾರ್ಚ್​ನಲ್ಲಿ ಕತಾರ್​ ದೊರೆ ಭಾರತಕ್ಕೆ ಭೇಟಿ ನೀಡಿದ್ದರು. ಇದು ಅವರ ಎರಡನೇ ಭೇಟಿಯಾಗಿದೆ.

ಕತಾರ್​ನಲ್ಲಿ ಭಾರತದ ಅತೀ ದೊಡ್ಡ ವಲಸಿಗ ಸಮುದಾಯವಿದೆ. ಕತಾರ್​ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಅವರ ಸಕಾರಾತ್ಮಕ ಕೊಡುಗೆಗಳು ಮೆಚ್ಚುಗೆ ಪಡೆದಿವೆ. ಈ ಭೇಟಿಯು ಎರಡು ದೇಶಗಳ ನಡುವಿನ ಹಲವು ಅಭಿವೃದ್ಧಿ ಪಾಲುದಾರಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Category
ಕರಾವಳಿ ತರಂಗಿಣಿ