image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇವಸ್ಥಾನವೊಂದರ ಕಾಣಿಕೆ ಡಬ್ಬಿಯಲ್ಲಿ ಹರಕೆಯಾಗಿ ಸಂಗ್ರಹವಾದ 58 ಕೆ.ಜಿ. ಅಫೀಮು...!

ದೇವಸ್ಥಾನವೊಂದರ ಕಾಣಿಕೆ ಡಬ್ಬಿಯಲ್ಲಿ ಹರಕೆಯಾಗಿ ಸಂಗ್ರಹವಾದ 58 ಕೆ.ಜಿ. ಅಫೀಮು...!

ಮಧ್ಯ ಪ್ರದೇಶ : ದೇವಸ್ಥಾನವೊಂದರ ಕಾಣಿಕೆ ಡಬ್ಬಿಯಲ್ಲಿ ಹರಕೆಯಾಗಿ ಸಂಗ್ರಹವಾದ 58 ಕೆ.ಜಿ. ಅಫೀಮನ್ನು ಮಾದಕ ದ್ರವ್ಯ ಇಲಾಖೆ ವಶಪಡಿಸಿಕೊಂಡಿದೆ.

ರಾಜಸ್ಥಾನದ ಚಿತ್ತೋರಗಢದ ಸನ್ವಾಲಿಯಾ ಸೇಠ್​ ದೇವಾಲಯದ ಕಾಣಿಕೆ ಡಬ್ಬಿಯಲ್ಲಿ 58.7 ಕೆ.ಜಿ ಅಫೀಮು ಪತ್ತೆಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದ ಬಳಿಕ ನಾರ್ಕೋಟಿಕ್ಸ್​ ಇಲಾಖೆಯವರು ಆಗಮಿಸಿ, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅಫೀಮು ಕಾಣಿಕೆಯಾ ಎಂದು ನೀವು ಆಶ್ಚರ್ಯಪಡಬಹುದು, ಆದರೆ ಇದು ನಿಜ! ದೇವಸ್ಥಾನದ ಹುಂಡಿಯಲ್ಲಿ ಇಷ್ಟೊಂದು ಅಫೀಮು ಹೇಗೆ ಬಂತು? ಹಾಕಿದವರು ಯಾರು? ಇದರ ಹಿಂದಿನ ಕಥೆಯನ್ನು ನಾವು ಹೇಳುತ್ತೇವೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕೆಲವು ಗ್ರಾಮಗಳಲ್ಲಿ ರೈತರು ಅಫೀಮು ಬೆಳೆಯುತ್ತಾರೆ. ಉತ್ತಮವಾಗಿ ಅಫೀಮು ಉತ್ಪಾದನೆಯಾದಾಗ, ತಮ್ಮ ಕೋರಿಕೆ ಈಡೇರಿದ ಹಿನ್ನೆಲೆ ಹರಕೆಯಾಗಿ ಅಫೀಮನ್ನು ಸನ್ವಾಲಿಯಾ ಸೇಠ್​ ದೇವಾಲಯದ ದೇವರಿಗೆ ಅರ್ಪಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಈ ರೀತಿಯ ಆಚರಣೆಯೊಂದು ಇಲ್ಲಿ ನಡೆದುಕೊಂಡು ಬರುತ್ತಿದೆ.

Category
ಕರಾವಳಿ ತರಂಗಿಣಿ