image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತದ ಮತದಾನಕ್ಕಾಗಿ ಮೀಸಲಿಟ್ಟಿದ್ದ ನಿಧಿಯನ್ನು ರದ್ದುಗೊಳಿಸಿದ ಅಮೇರಿಕಾ....!

ಭಾರತದ ಮತದಾನಕ್ಕಾಗಿ ಮೀಸಲಿಟ್ಟಿದ್ದ ನಿಧಿಯನ್ನು ರದ್ದುಗೊಳಿಸಿದ ಅಮೇರಿಕಾ....!

ವಾಷಿಂಗ್ಟನ್: ಅಮೆರಿಕದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ನೇತೃತ್ವದ ಹೊಸ ಸರ್ಕಾರವು ಹಲವಾರು ದೇಶಗಳ ವಿವಿಧ ಯೋಜನೆಗಳಿಗಾಗಿ ನೀಡಲಾಗುತ್ತಿದ್ದ ಧನಸಹಾಯವನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಸದ್ಯ ಇಂಥ ಅನೇಕ ಯೋಜನೆಗಳಿಗೆ ಧನಸಹಾಯ ಸ್ಥಗಿತಗೊಳಿಸಲಾಗುತ್ತಿರುವುದನ್ನು ಎಲೋನ್ ಮಸ್ಕ್ ನೇತೃತ್ವದ ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯೆನ್ಸಿ (ಡಿಒಜಿಇ) ಪ್ರಕಟಿಸಿದೆ.

"ಭಾರತದಲ್ಲಿ ಮತದಾನದ ಪ್ರಮಾಣ"ಕ್ಕಾಗಿ ನಿಗದಿಪಡಿಸಲಾಗಿದ್ದ 22 ಮಿಲಿಯನ್ ಡಾಲರ್ ಧನಸಹಾಯವನ್ನು ನಿಲ್ಲಿಸುವುದಾಗಿ ಹೇಳಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಭಾರತದಲ್ಲಿನ ಮತದಾನ ಪ್ರಮಾಣಕ್ಕಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಅಮೆರಿಕ ಮೀಸಲಿಟ್ಟಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಇನ್ನು "ಭಾರತದಲ್ಲಿ ಮತದಾನದ ಪ್ರಮಾಣ"ಕ್ಕೆ ಹಣ ಮೀಸಲಿಟ್ಟಿದ್ದು ಭಾರತದಲ್ಲಿನ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕಾ ಎಂಬ ಗಂಭೀರ ಪ್ರಶ್ನೆಯೂ ಮೂಡಿದೆ.

ಈ ಪ್ರಕಟಣೆಯ ಬಗ್ಗೆ ಬಿಜೆಪಿಯ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದು, "ಮತದಾನದ ಪ್ರಮಾಣಕ್ಕೆ 21 ಮಿಲಿಯನ್ ಡಾಲರ್ ಇಡಲಾಗಿತ್ತಾ? ಇದು ಖಂಡಿತವಾಗಿಯೂ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪವಾಗಿದೆ. ಇದರಿಂದ ಯಾರಿಗೆ ಲಾಭ? ಖಂಡಿತವಾಗಿಯೂ ಇದರ ಲಾಭ ಆಡಳಿತ ಪಕ್ಷಕ್ಕೆ ಸಿಗಲಾರದು!" ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ