image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೆಹಲಿ ಮೊಹಲ್ಲಾ ಕ್ಲಿನಿಕ್​​ಗಳು ಆಯುಷ್ಮಾನ್​​ ಆರೋಗ್ಯ ಮಂದಿರವಾಗಿ ಪರಿವರ್ತನೆ

ದೆಹಲಿ ಮೊಹಲ್ಲಾ ಕ್ಲಿನಿಕ್​​ಗಳು ಆಯುಷ್ಮಾನ್​​ ಆರೋಗ್ಯ ಮಂದಿರವಾಗಿ ಪರಿವರ್ತನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಮೊಹಲ್ಲಾ ಕ್ಲಿನಿಕ್​ಗಳನ್ನು ಆಯುಷ್ಯಾನ್​ ಆರೋಗ್ಯ ಮಂದಿರಗಳಾಗಿ ಪರಿವರ್ತಿಸುವ ಕುರಿತು ದೆಹಲಿ ಸರ್ಕಾರ ಕೇಂದ್ರ ಆರೋಗ್ಯ ಸಚಿವಾಲಯ ವರದಿ ಕೋರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆರೋಗ್ಯ ಸಚಿವಾಲಯ ಈ ಮೊಹಲ್ಲಾ ಕ್ಲಿನಿಕ್​ಗಳಲ್ಲಿ ಆಯುಷ್ಯಾನ್​ ಭಾರತ್​​ ಆರೋಗ್ಯ ವಿಮೆ ಯೋಜನೆ (AB-PMJAY) ಜಾರಿಗೊಳಿಸುವ ಕುರಿತು ಚಿಂತಿಸುತ್ತಿದೆ. ಮೂಲಗಳ ಪ್ರಕಾರ, 51 ಲಕ್ಷ ಜನರಿಗೆ ಆಯುಷ್ಯಾನ್​ ಕಾರ್ಡ್​ ವಿತರಿಸಲಾಗಿದೆ. ಈ ಮೊಹಲ್ಲಾ ಕ್ಲಿನಿಕ್​ಗಳನ್ನು ಆಯುಷ್ಮಾನ್​​​ ಆರೋಗ್ಯ ಮಂದಿರವಾಗಿ ಪರಿವರ್ತಿಸಿದರೆ, ಅಲ್ಲಿ ಯೋಜನೆಗಳ ಮಾರ್ಗಸೂಚಿಯನ್ನು ಅನುಸರಿಸಲಾಗುವುದು ಎಂದು ತಿಳಿದು ಬಂದಿದೆ.

ಇನ್ನು ಮೊಹಲ್ಲಾ ಕ್ಲಿನಿಕ್​ನಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ವರದಿಯಲ್ಲಿ ಮೊಹಲ್ಲಾ ಚಿಕಿತ್ಸಾಲಯಗಳ ಸ್ಥಿತಿ ಮತ್ತು ಅವುಗಳನ್ನು ಆಯುಷ್ಮಾನ್ ಆರೋಗ್ಯ ಮಂದಿರವಾಗಿ ಪರಿವರ್ತಿಸಬಹುದೇ ಎಂಬ ಕುರಿತು ಕೇಳಲಾಗುವುದು. ಜನವರಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ, ದೆಹಲಿ ಎಎಪಿ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದ ಮೊಹಲ್ಲಾ ಕ್ಲಿನಿಕ್​ಗಳುಮ ಖಾಸಗಿ ಲ್ಯಾಬ್‌ಗಳಿಗೆ ಲಾಭವಾಗುವಂತೆ ರೋಗಿಗಳ ರೋಗನಿರ್ಣಯ ಪರೀಕ್ಷೆ ನಡೆಸಲು ಶಿಫಾರಸು ಮಾಡುತ್ತಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಸಿಬಿಐ ತನಿಖೆಗೆ ಕೂಡ ಎಲ್​ಜಿ ಆದೇಶಿಸಿದ್ದರು .

ಈ ಕೇಂದ್ರಗಳನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಾಗಿ ಪರಿವರ್ತಿಸಿದರೆ, ಗರ್ಭಕಂಠ, ಸ್ತನ ಮತ್ತು ಬಾಯಿಯ ಕ್ಯಾನ್ಸರ್ ಸೇರಿದಂತೆ ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ತಪಾಸಣೆ ಮೂಲಕ ಸೇವಾ ವಿತರಣೆ ಮಾಡುವ ಯೋಜನೆ ಹೊಂದಲಾಗಿದೆ.

Category
ಕರಾವಳಿ ತರಂಗಿಣಿ