image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗೂಗಲ್ ಸಿಇಒ ಸುಂದರ್ ಪಿಚೈ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು

ಗೂಗಲ್ ಸಿಇಒ ಸುಂದರ್ ಪಿಚೈ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು

ಫ್ರಾನ್ಸ್​: ಪ್ಯಾರಿಸ್‌ನಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯ ಹಿನ್ನೆಲೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೃತಕ ಬುದ್ಧಿಮತ್ತೆ (ಎಐ) ಭಾರತಕ್ಕೆ ತರಲಿರುವ ಇನ್​​ ಕ್ರೆಡಿಬಲ್​ ಅವಕಾಶಗಳೇನು ಎಂಬುದನ್ನು ವಿವರಿಸಿದ್ದಾರೆ.

ದೇಶದ ಡಿಜಿಟಲ್ ರೂಪಾಂತರವನ್ನು ಮುನ್ನಡೆಸಲು ಗೂಗಲ್ ಮತ್ತು ಭಾರತದ ನಡುವಿನ ನಿಕಟ ಸಹಯೋಗದ ಸಾಮರ್ಥ್ಯವನ್ನು ಸಹ ಆಲ್ಫಾಬೆಟ್ CEO ಗಮನಿಸಿದ್ದಾರೆ ಎಂದು ಪಿಚೈ ಹೇಳಿದ್ದಾರೆ. ಎಕ್ಸ್​​​​​ ನಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಅವರು, ಎಐ ಆಕ್ಷನ್ ಶೃಂಗಸಭೆಗಾಗಿ ಇಂದು ಪ್ಯಾರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಭಾರತಕ್ಕೆ AI ತರುವ ಅದ್ಭುತ ಅವಕಾಶಗಳು ಮತ್ತು ಭಾರತದ ಡಿಜಿಟಲ್ ರೂಪಾಂತರದಲ್ಲಿ ನಾವು ಒಟ್ಟಿಗೆ ಕೆಲಸ ಮಾಡುವ ವಿಧಾನಗಳ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ಪ್ಯಾರಿಸ್‌ನಲ್ಲಿ ಭಾರತ - ಫ್ರಾನ್ಸ್ ಸಿಇಒಗಳ ವೇದಿಕೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆರ್ಥಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ನಾವೀನ್ಯತೆ ಪೋಷಿಸುವಲ್ಲಿ ಈ ವೇದಿಕೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಭಾರತ ಮತ್ತು ಫ್ರಾನ್ಸ್‌ನ ವ್ಯಾಪಾರ ನಾಯಕರು ಒಟ್ಟಾಗಿ ಬರುತ್ತಿದ್ದಾರೆ ಎಂಬುದನ್ನು ಅವರು ಇದೇ ವೇಳೆ ಗಮನಿಸಿದರು, ಇದು ಭವಿಷ್ಯದ ಪೀಳಿಗೆಗೆ ಬೆಳವಣಿಗೆ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ನೀರಿಕ್ಷೆ ಹೊಂದಿದ್ದಾರೆ.

ಸಿಇಒಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇದು ಕೇವಲ ವ್ಯಾಪಾರೋದ್ಯಮದ ಕಾರ್ಯಕ್ರಮವಲ್ಲ - ಇದು ಭಾರತ ಮತ್ತು ಫ್ರಾನ್ಸ್‌ನ ಪ್ರಕಾಶಮಾನವಾದ ಮನಸ್ಸುಗಳ ಜೋಡಣೆಯಾಗಿದೆ. ನೀವು ನಾವೀನ್ಯತೆ, ಸಹಯೋಗ ಮತ್ತು ಉನ್ನತಿಯ ಮಂತ್ರವನ್ನು ಅಳವಡಿಸಿಕೊಳ್ಳುತ್ತಿದ್ದೀರಿ, ಉದ್ದೇಶದೊಂದಿಗೆ ಪ್ರಗತಿಯನ್ನು ಕಾಣುತ್ತಿದ್ದೀರಿ. ಬೋರ್ಡ್‌ರೂಮ್ ಸಂಪರ್ಕಗಳನ್ನು ಹೊರತುಪಡಿಸಿ, ನೀವು ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಕ್ರಿಯವಾಗಿ ಬಲಪಡಿಸುತ್ತಿದ್ದೀರಿ ಎಂದು ಬಣ್ಣಿಸಿದರು.

Category
ಕರಾವಳಿ ತರಂಗಿಣಿ