image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಗಸ್ಟ್‌ನಿಂದ ಬಾಂಗ್ಲಾದೇಶದಲ್ಲಿ 23 ಹಿಂದೂಗಳ ಸಾವು, 152 ದೇವಾಲಯಗಳ ಮೇಲೆ ದಾಳಿ: ಕೇಂದ್ರ ಸರ್ಕಾರ

ಆಗಸ್ಟ್‌ನಿಂದ ಬಾಂಗ್ಲಾದೇಶದಲ್ಲಿ 23 ಹಿಂದೂಗಳ ಸಾವು, 152 ದೇವಾಲಯಗಳ ಮೇಲೆ ದಾಳಿ: ಕೇಂದ್ರ ಸರ್ಕಾರ

ನವದೆಹಲಿ: 2024ರ ಆಗಸ್ಟ್‌ನಿಂದ ನೆರೆಯ ಬಾಂಗ್ಲಾದೇಶದಲ್ಲಿ ಒಟ್ಟು 23 ಹಿಂದೂಗಳ ಸಾವಾಗಿದೆ ಮತ್ತು 152 ಹಿಂದೂ ದೇವಾಲಯಗಳ ಮೇಲಿನ ದಾಳಿ ಆಗಿದೆ ಎಂದು ವರದಿಗಳು ಉಲ್ಲೇಖಿಸಿವೆ ಎಂದು ಸಂಸತ್​​ಗೆ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಅಧಿವೇಶನದಲ್ಲಿ ಬಾಂಗ್ಲಾದೇಶದಲ್ಲಿ ಕಳೆದ 2 ತಿಂಗಳಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮತ್ತು ಘಟನೆಯಲ್ಲಿ ಗಾಯಗೊಂಡ, ಸತ್ತ ಹಿಂದೂಗಳ ಸಂಖ್ಯೆ, ಅವರಿಗೆ ಉಂಟಾಗಿರುವ ಕಿರುಕುಳದ ಪ್ರಕರಣಗಳ ವಿವರಗಳ ಬಗ್ಗೆ ಸರ್ಕಾರವನ್ನು ಕೇಳಲಾಯಿತು.

ಈ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ಉತ್ತರಿಸಿದರು. "ಕಳೆದ ಎರಡು ತಿಂಗಳ ಅವಧಿಯಲ್ಲಿ (ನವೆಂಬರ್ 26, 2024 ರಿಂದ ಜನವರಿ 25, 2025 ರವರೆಗೆ) ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ 76 ದಾಳಿ ಘಟನೆಗಳು ವರದಿಯಾಗಿವೆ. ಆಗಸ್ಟ್‌ನಿಂದ 23 ಹಿಂದೂಗಳು ಮೃತಪಟ್ಟಿದ್ದಾರೆ ಮತ್ತು ಹಿಂದೂ ದೇವಾಲಯಗಳ ಮೇಲೆ 152 ದಾಳಿಯ ಘಟನೆಗಳಾಗಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಘಟನೆಗಳನ್ನು ಭಾರತ ಸರ್ಕಾರ ಗಮನಿಸಿದೆ. ಹಾಗೇ ಬಾಂಗ್ಲಾದೇಶದ ಸರ್ಕಾರದೊಂದಿಗೆ ತನ್ನ ಕಳವಳವನ್ನು ಹಂಚಿಕೊಂಡಿದೆ" ಎಂದು ಸದನಕ್ಕೆ ವಿವರಿಸಿದರು.

"2024ರ ಡಿಸೆಂರ್​​ 9ರಂದು ನಮ್ಮ ವಿದೇಶಾಂಗ ಕಾರ್ಯದರ್ಶಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿದಂತೆ ಭಾರತದ ನಿರ್ಧಾರಗಳನ್ನು ಪುನರುಚ್ಚರಿಸಲಾಗಿದೆ. ಡಿಸೆಂಬರ್ 10ರಂದು ಬಾಂಗ್ಲಾದೇಶದ ಸರ್ಕಾರವು ಪತ್ರಿಕಾಗೋಷ್ಠಿಯಲ್ಲಿ ಅಲ್ಲಿನ ಅಲ್ಪಸಂಖ್ಯಾತರ ವಿರುದ್ಧದ ದಾಳಿಗಳಿಗೆ ಸಂಬಂಧಿಸಿದ ಒಟ್ಟು 88 ಪ್ರಕರಣಗಳಲ್ಲಿ 70 ಜನರನ್ನು ಬಂಧಿಸಲಾಗಿದೆ ಎಂದು ಘೋಷಿಸಿದೆ. ಪೊಲೀಸ್ ತನಿಖೆಗಳು ತರುವಾಯ 1,254 ಘಟನೆಗಳನ್ನು ಪರಿಶೀಲಿಸಿದೆ ಎಂದು ಬಾಂಗ್ಲಾ ಸರ್ಕಾರ ಹೇಳಿದೆ".

Category
ಕರಾವಳಿ ತರಂಗಿಣಿ