image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೆಹಲಿ ಮದ್ಯ ನೀತಿ ಹಗರಣವೇ ಎಎಪಿ ಹಿನ್ನಡೆಗೆ ಕಾರಣ; ಅಣ್ಣಾ ಹಜಾರೆ ಆಕ್ರೋಶ

ದೆಹಲಿ ಮದ್ಯ ನೀತಿ ಹಗರಣವೇ ಎಎಪಿ ಹಿನ್ನಡೆಗೆ ಕಾರಣ; ಅಣ್ಣಾ ಹಜಾರೆ ಆಕ್ರೋಶ

ಮಹಾರಾಷ್ಟ್ರ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದ್ದು, 26 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಎಎಪಿಯ ಹಿನ್ನಡೆ ಕುರಿತು ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮದ್ಯ ನೀತಿ ಮತ್ತು ಅದರ ಮೂಲಕ ಹಣದ ಬಗ್ಗೆ ಎಎಪಿಗಿದ್ದ ಗಮನವೇ ಪಕ್ಷದ ಹಿನ್ನಡೆಗೆ ಕಾರಣ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅಣ್ಣಾ ಹಜಾರೆ, ಅಭ್ಯರ್ಥಿಗಳ ವ್ಯಕ್ತಿತ್ವವೂ ಶುದ್ಧವಾಗಿರಬೇಕು. ಅವರು ತ್ಯಾಗದ ಬಗ್ಗೆ ತಿಳಿದಿರಬೇಕು. ಮದ್ಯ ನೀತಿ ಮತ್ತು ಭಷ್ಟಾಚಾರ ವಿವಾದಗಳಿಂದ ಅಪಖ್ಯಾತಿಗೆ ಆಪ್ ಒಳಗಾಗಲು ಕಾರಣವಾಯಿತು. ಕೇಜ್ರಿವಾಲ್​ ಒಂದು ಕೈಯಲ್ಲಿ ಒಳ್ಳೆ ಗುಣದ ಬಗ್ಗೆ ಮಾತನಾಡುತ್ತಾ, ಮತ್ತೊಂದು ಕಡೆ ಮದ್ಯವನ್ನು ಉತ್ತೇಜಿಸಿದರು. ಇದೇ ಕಾರಣ ಅವರಿಗೆ ಕೆಲವೇ ಮತಗಳು ಲಭ್ಯವಾಯಿತು ಎಂದರು.

ಜನರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಎಪಿ ಸೋಲು ಕಂಡಿದ್ದು, ಅದು ತಪ್ಪು ಮಾರ್ಗದಲ್ಲಿ ಸಾಗಿತ್ತು. ಹಣವನ್ನು ಅವರು ಪ್ರಮುಖವಾಗಿ ಪರಿಗಣಿಸಿದ ಹಿನ್ನಲೆ ಅವರಿಗೆ ಈ ನಿರಾಸೆ ಆಗಿದೆ ಎಂದು ಅವರು ಹೇಳಿದ್ದಾರೆ.

ದಶಕಗಳ ಹಿಂದೆ ನಡೆಸಿದ ಅಣ್ಣಾ ಹಜಾರೆ ಭ್ರಷ್ಟಾಚಾರ ಹೋರಾಟದಲ್ಲಿ ಅರವಿಂದ್​ ಕೇಜ್ರಿವಾಲ್​ ಜೊತೆಯಾಗಿದ್ದರು. ಇದಾದ ಬಳಿಕ ಹಜಾರೆ ಮತ್ತು ಕೇಜ್ರಿವಾಲ್​ ಅವರು ಪ್ರತ್ಯೇಕ ದಾರಿ ಆಯ್ಕೆ ಮಾಡಿಕೊಂಡರು. 2012ರಲ್ಲಿ ಎಎಪಿ ಹುಟ್ಟುಹಾಕಲು ಕೇಜ್ರಿವಾಲ್​ ನಿರ್ಧರಿಸಿದ್ದರು.

Category
ಕರಾವಳಿ ತರಂಗಿಣಿ