image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬುಲೆಟ್ ಟ್ರೈನ್ ಯೋಜನೆಗಾಗಿ ಗುಜರಾತ್‌ನ ಸೂರತ್‌ನಲ್ಲಿ 100 ಮೀಟರ್ ಉದ್ದದ ಉಕ್ಕಿನ ಸೇತುವೆ

ಬುಲೆಟ್ ಟ್ರೈನ್ ಯೋಜನೆಗಾಗಿ ಗುಜರಾತ್‌ನ ಸೂರತ್‌ನಲ್ಲಿ 100 ಮೀಟರ್ ಉದ್ದದ ಉಕ್ಕಿನ ಸೇತುವೆ

ಗುಜರಾತ್: ಮುಂಬೈ- ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗಾಗಿ ಗುಜರಾತ್‌ನ ಸೂರತ್‌ನಲ್ಲಿ 100 ಮೀಟರ್ ಉದ್ದದ ಉಕ್ಕಿನ ಸೇತುವೆ ನಿರ್ಮಿಸಲಾಗಿದೆ. ಇದನ್ನು ನ್ಯಾಷನಲ್​ ಹೈ- ಸ್ಪೀಡ್​ ರೈಲ್​ ಕಾರ್ಪೊರೇಷನ್​ ಲಿಮಿಡೆಟ್​ (ಎನ್​ಎಚ್​ಎಸ್​ಆರ್​ಸಿಎಲ್​) ಅಭಿವೃದ್ಧಿ ಪಡಿಸಿದೆ. ಈ ಸೇತುವೆಯಲ್ಲಿ ನಾಲ್ಕು ರೈಲ್ವೆ ಟ್ರ್ಯಾಕ್​​ ​ ಇದ್ದು, ಎರಡು ಪಶ್ಚಿಮ ರೈಲ್ವೆಗೆ ಮೀಸಲಾಗಿದ್ದರೆ, ಮತ್ತೆರಡು ಕಿಮ್​ ಮತ್ತು ಸಯಾನ್​ ನಡುವೆ ಸರಕು ಸಾಗಣೆ ಭಾರತೀಯ ಕಾರಿಡಾರ್ ಕಾರ್ಪೊರೇಷನ್ (ಡಿಎಫ್​ಸಿಸಿಐಎಲ್​)ಗೆ ಮೀಸಲಾಗಿದೆ.

100 ಮೀಟರ್​ ಉದ್ದ ಹಾಗೂ 60 ಮೀಟರ್​ ಅಗಲದ ಸೇತುವೆ ಇದಾಗಿದ್ದು, ಡಬಲ್ ಟ್ರ್ಯಾಕ್ ಸ್ಟ್ಯಾಂಡರ್ಡ್ ಗೇಜ್ ರೈಲು ವ್ಯವಸ್ಥೆಯನ್ನು ಸರಾಗಗೊಳಿಸಲು ವಿನ್ಯಾಸಗೊಳಿಸಲಾಗಿದೆ. 1,432 ಮೆಟ್ರಿಕ್ ಟನ್ ತೂಕದ 100 ಮೀಟರ್ ಉದ್ದದ ಈ ಸೇತುವೆಯನ್ನು ಜನವರಿ 28 ಮತ್ತು ಫೆಬ್ರವರಿ 5 ರ ನಡುವೆ ಚಾಲನೆ ನೀಡಲಾಯಿತು.

60 ಮೀಟರ್​ ಅಗಲದ ಈ ರೈಲ್ವೆ ಸೇತುವೆ ಪಕ್ಕದಲ್ಲಿ ನೀರಾವರಿಗಾಗಿ ಕಾಲುವೆ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಯೋಜನೆಯು ನಾಲ್ಕು ಪ್ರಮುಖ ರೈಲ್ವೆ ಹಳಿಗಳು ಮತ್ತು ನೀರಾವರಿ ಕಾಲುವೆಗಳನ್ನು ದಾಟಲಿದ್ದು, ಮುಂದಿನ ದಿನದಲ್ಲಿ ಹೈ ಸ್ಪೀಡ್​ ರೈಲು ಸೇವೆಯ ಸರಾಗತೆ ಮಾರ್ಗದ ಭರವಸೆ ನೀಡುತ್ತದೆ.

100 ಮೀಟರ್​ ಉದ್ದದ ಈ ಉಕ್ಕಿನ ಸೇತುವೆ ನಿರ್ಮಾಣಕ್ಕೆ 525 ಮೆಟ್ರಿಕ್​ ಟನ್​ ತೂಕದ 84 ಮೀಟರ್​ ಉದ್ದದ ಲಾಂಚಿಂಗ್​ ನೋಸ್​ ಅನ್ನು ಬಳಕೆ ಮಾಡಲಾಗಿದೆ. 14.3 ಮೀಟರ್​ ಅಗಲದ ಸೇತುವೆಯನ್ನು ಗುಜರಾತ್​ನ ಭುಜ್​ನಲ್ಲಿ ಆರ್​ಡಿಎಸ್​ಒ ಅನುಮೋದಿತ ಕಾರ್ಯಾಗಾರದಲ್ಲಿ ಜೋಡಿಸಲಾಗಿದೆ. ಇದನ್ನು ಸಾರಿಗೆ ಮೂಲಕ ಸಾಗಿಸಿ, ಇಲ್ಲಿ ಅಳವಡಿಸಲಾಗಿದೆ.

ಎರಡು ಸೆಮಿ- ಆಟೋಮೆಟಿಕ್​ ಜಾಕ್​ ಬಳಕೆ ಮಾಡಿಕೊಂಡು 50 ಮಿ.ಮೀ ಮ್ಯಾಕ್​-ಲೊಯ್​ ಬಾರ್​ಗಳನ್ನು ಅದರ ಸ್ಥಾನಕ್ಕೆ ಎಳೆಯಲಾಗಿದೆ. ಇವು ಒಂದೊಂದು 250 ಟನ್​ ಸಾಮರ್ಥ್ಯದ್ದಾಗಿವೆ. ಇದರ ಎತ್ತರ 12 ಮೀಟರ್​ ಇದೆ. ಇವುಗಳನ್ನು 60,000 ಟೊರ್​ ಶೀರ್​ ಟೈಪ್​ ಹೈ ಸ್ಟ್ರೇಂಥ್​ ಬೋಲ್ಟ್​​ನಿಂದ ಬಿಗಿ ಮಾಡಲಾಗಿದ್ದು, ಇದು 100 ವರ್ಷಗಳವರೆಗೆ ಬಾಳಿಕೆ ಬರುವಂತೆ ವಿನ್ಯಾಸ ಮಾಡಲಾಗಿದೆ.

Category
ಕರಾವಳಿ ತರಂಗಿಣಿ