image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಣಿಪುರದ ಇಂಫಾಲದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ನಿಷೇಧಿತ ಸಂಘಟನೆಗೆ ಸೇರಿದ 9 ಉಗ್ರರ ಬಂಧನ

ಮಣಿಪುರದ ಇಂಫಾಲದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ನಿಷೇಧಿತ ಸಂಘಟನೆಗೆ ಸೇರಿದ 9 ಉಗ್ರರ ಬಂಧನ

ಮಣಿಪುರ: ವಿವಿಧ ನಿಷೇಧಿತ ಸಂಘಟನೆಗೆ ಸೇರಿದ್ದ 9 ಉಗ್ರರನ್ನು ಪೂರ್ವ ಮತ್ತು ಪಶ್ಚಿಮ ಇಂಫಾಲ ಹಾಗೂ ಕಕ್ಚಿಂಗ್ ಮತ್ತು ತೌಬಲ್ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂಫಾಲ್ ಪೂರ್ವ ಜಿಲ್ಲೆಯ ಮಂತ್ರಿಪುಖ್ರಿ ಠಾಕುರ್ಬರಿ ಪ್ರದೇಶದಿಂದ ಕಾಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ (ಸಿಟಿ ಮೈತೆ) ಐವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಬಂಧಿತರಿಂದ ಒಂದು 9 ಎಂಎಂ ಪಿಸ್ತೂಲ್, ಮ್ಯಾಗಜೀನ್, 11 ಜೀವಂತ ಗುಂಡುಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ

ನಿಷೇಧಿತ ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ಎಂಸಿ) ಪ್ರಗತಿಪರ ಸದಸ್ಯನನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಸಿಂಗ್ಜಮೇಯಿ ತೊಕ್ಚೋಮ್ ಲೈಕೈಯಲ್ಲಿ ಬಂಧಿಸಲಾಗಿದೆ. ಈತ ಸುಲಿಗೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಆರೋಪದ ಮೇರೆಗೆ ಯುನೈಟೆಡ್ ಪೀಪಲ್ಸ್ ಪಾರ್ಟಿ ಆಫ್ ಕಂಗ್ಲೀಪಾಕ್ (ಯುಪಿಪಿಕೆ) ಸದಸ್ಯನನ್ನು ಕಾಕ್ಚಿಂಗ್ ಜಿಲ್ಲೆಯ ಇರೆಂಗ್‌ಬಂಡ್ ಹವೈರೌ ಪ್ರದೇಶದಲ್ಲಿ ಬಂಧಿಸಲಾಗಿದೆ. ಪ್ರೆಪಾಕ್​ (ಪ್ರೊ)ದ ಸದಸ್ಯನನ್ನು ಬಲ್ ಜಿಲ್ಲೆಯ ಯೈರಿಪೋಕ್ ಬಜಾರ್‌ನಿಂದ ಅರೆಸ್ಟ್​ ಮಾಡಲಾಗಿದೆ. ಕಾಕ್ಚಿಂಗ್ ಜಿಲ್ಲೆಯ ವಬಗೈ ಬಜಾರ್ ಪ್ರದೇಶದಲ್ಲಿ ನಿಷೇಧಿತ ಕಂಗ್ಲೇ ಯಾವೋಲ್ ಕನ್ನಾ ಲುಪ್‌ನ ಸಕ್ರಿಯ ಕಾರ್ಯಕರ್ತನನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ