ಇಸ್ರೇಲ್: ಭಾರತ -ಇಸ್ರೇಲ್ ಮೈತ್ರಿ ಯೋಜನೆಯಡಿಯಲ್ಲಿ ಭಾರತದಿಂದ ಮೊದಲ ಗಣ್ಯ ವ್ಯಕ್ತಿಗಳ ನಿಯೋಗ ಇಸ್ರೇಲ್ನ ಸರ್ಕಾರೇತರ ಸಂಸ್ಥೆ ಶರಕಾ ಮೂಲಕ ಈ ವಾರದ ಮೊದಲಲ್ಲಿ ಇಸ್ರೇಲ್ಗೆ ಕರೆಸಿಕೊಂಡಿತ್ತು. ಇಸ್ರೇಲಿ ಸಮಾಜದ ಬಗೆಗಿನ ಭಾರತೀಯರ ಅಭಿಪ್ರಾಯ ಮತ್ತು ವಾಸ್ತವತೆಯನ್ನು ಅರಿಯಲು, ತಿಳಿವಳಿಕೆಯನ್ನು ಉತ್ತೇಜಿಸಲು ಈ ಯೋಜನೆ ಕೈಗೊಳ್ಳಲಾಗಿದೆ. ಈ ಮೂಲಕ ಭಾರತ-ಇಸ್ರೇಲ್ ಸಂಬಂಧವು ಮತ್ತಷ್ಟು ಬಲಗೊಳ್ಳಲು ಈ ಭೇಟಿ ಸಹಾಯವಾಗಲಿದೆ.
ಈ ಬಗ್ಗೆ ಶರಕಾದ ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕ ಅಮಿತ್ ಡೆರಿ ಭಾರತದ ಗಣರಾಜ್ಯೋತ್ಸವದ ಭೇಟಿಯ ಆರಂಭದಲ್ಲಿ ಹೇಳಿದ್ದರು. "ಈ ಭಾರತೀಯ ನಿಯೋಗವನ್ನು ಆತಿಥ್ಯ ವಹಿಸಲು ನಮಗೆ ಗೌರವವಿದೆ. ಇಸ್ರೇಲ್ ಭೇಟಿಯಿಂದ ಭಾರತೀಯರು ಪಡೆಯುವ ಜ್ಞಾನ ಮತ್ತು ಅನುಭವಗಳು ಭಾರತ ಮತ್ತು ಇಸ್ರೇಲ್ ಸಂಬಂಧಗಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತವೆ. ಭಾರತದಿಂದ ಬಂದಿರುವ ಮುಸ್ಲಿಂ, ಹಿಂದೂ ಮತ್ತು ಕ್ರಿಶ್ಚಿಯನ್ ನಾಯಕರ ನಿಯೋಗವನ್ನು ಇಸ್ರೇಲ್ನಲ್ಲಿ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ಇಸ್ರೇಲ್ ಮೇಲೆ ಭಾರತೀಯರು ಸಾಮಾನ್ಯ ಒಲವು ಹೊಂದಿದ್ದಾರೆ. ಅಲ್ಲದೇ ನಮ್ಮ ಸಮಾಜವು ಕೂಡ ಭಾರತೀಯರೊಂದಿಗೆ ಪರಸ್ಪರ ಆಳವಾಗಿ ಪರಿಚಿತವಾಗಿಲ್ಲ. ಆದರೆ, ಈಗಿನ ಭಾರತ-ಇಸ್ರೇಲ್ ಮೈತ್ರಿ ಯೋಜನೆಯು ವಿಶ್ವದ ಅತಿದೊಡ್ಡ ಮುಸ್ಲಿಂ ಸಮುದಾಯ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವದೊಂದಿಗೆ ಸಂಬಂಧವನ್ನು ನಿರ್ಮಿಸಲು ಅವಕಾಶವನ್ನು ಒದಗಿಸುತ್ತಿದೆ" ಎಂದಿದ್ದರು.
ಭಾರತೀಯ ಗಣ್ಯರ ನಿಯೋಗಕ್ಕೆ ಒಟ್ಟು ಆರು ದಿನಗಳ ಭೇಟಿ ಇದಾಗಿದ್ದು, ಜನವರಿ 31ರಂದು ಮುಕ್ತಾಯಗೊಂಡಿದೆ. ಈ ಪ್ರವಾಸದ ವೇಳೆ ಭಾರತದ ನಿಯೋಗವು ಜೆರುಸಲೆಮ್ನ ಐತಿಹಾಸಿಕ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದೆ. ತಜ್ಞರು ಮತ್ತು ವೈವಿಧ್ಯಮಯ ಸಮುದಾಯ ನಾಯಕರನ್ನು ಭೇಟಿ ಮಾಡಿದ್ದು, ಇಸ್ರೇಲಿ ಅರಬ್ಬರೊಂದಿಗೆ ಸಂವಾದ ನಡೆಸಿದೆ. ಮತ್ತು ಸ್ಥಳೀಯ ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕ ನೀತಿ ಬುದ್ಧಿಜೀವಿಗಳೊಂದಿಗೆ ಸಂಪರ್ಕ ಸಾಧಿಸಿದೆ. ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪ್ರಭಾವಿತವಾದ ಸ್ಥಳಗಳಲ್ಲೂ ಸಹ ಅವರು ಪ್ರವಾಸ ಮಾಡಿದ್ದಾರೆ. ಈ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು ಮತ್ತು 251 ಜನರನ್ನು ಹಮಾಸ್ ಒತ್ತೆಯಾಳುಗಳಾಗಿ ಇಟ್ಟುಕೊಂಡಿದೆ. ಅದರಲ್ಲಿ ಈಗ ಕೆಲವರನ್ನು ಬಿಡುಗಡೆ ಮಾಡಿದೆ.