image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆರ್ಥಿಕ ಸಮೀಕ್ಷೆ ಮಂಡಿಸಿದ ನಿರ್ಮಲಾ ಸೀತರಾಮನ್​: ಶೇ.6.3 - 6.8ರಷ್ಟು ಜಿಡಿಪಿ ಬೆಳವಣಿಗೆ!

ಆರ್ಥಿಕ ಸಮೀಕ್ಷೆ ಮಂಡಿಸಿದ ನಿರ್ಮಲಾ ಸೀತರಾಮನ್​: ಶೇ.6.3 - 6.8ರಷ್ಟು ಜಿಡಿಪಿ ಬೆಳವಣಿಗೆ!

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್​ ಅವರು ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆ ವರದಿಯನ್ನು ಮಂಡಿಸಿದ್ದಾರೆ. 2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2025-26 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 6.3 ರಿಂದ 6.8 ಶೇಕಡಾ ನಡುವೆ ಇರಬಹುದು ಎಂದು ಅಂದಾಜು ಮಾಡಲಾಗಿದೆ.

ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್​ ಹಾಗೂ ಅವರ ತಂಡ ರಚಿಸಿರುವ 2024-25ರ ಆರ್ಥಿಕ ಸಮೀಕ್ಷೆ ವರದಿಯನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್​ ಮಂಡಿಸಿದರು. ನಿಧಾನಗತಿಯ ಜಿಡಿಪಿ ಬೆಳವಣಿಗೆ, ದುರ್ಬಲ ಉತ್ಪಾದನೆ ಮತ್ತು ಖಾಸಗಿ ಹೂಡಿಕೆ, AI ಮತ್ತು ಆಟೋಮೇಶನ್​ ಏರಿಕೆಯ ನಡುವೆ ಉದ್ಯೋಗ ಸೃಷ್ಟಿಯಲ್ಲಿ ತೊಂದರೆ ಇತ್ಯಾದಿಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರವು ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾದ ಶೇ. 6.4ಕ್ಕೆ ಇಳಿಯುವ ಸಾಧ್ಯತೆ ಎಂದು ಸಮೀಕ್ಷಾ ವರದಿ ಹೇಳಿದೆ. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದ್ದ ಶೇ. 6.5 - 7 ಮತ್ತು ರಿಸರ್ವ್​ ಬ್ಯಾಂಕ್​ ಅಂದಾಜಿಸಿದ್ದ ಶೇ.6.6 ಬೆಳವಣಿಗೆಗಿಂತ ಇದು ಕಡಿಮೆಯಾಗಿದೆ.

ಬಲವಾದ ಮೂಲಭೂತ ಅಂಶಗಳು, ಹಣಕಾಸು ಬಲವರ್ಧನೆ, ಸ್ಥಿರವಾದ ಖಾಸಗಿ ಬಳಕೆಯ ಆಧಾರದ ಮೇಲೆ ಭಾರತದ ಜಿಡಿಪಿ ಬೆಳವಣಿಗೆ ಅಂದಾಜಿಸಲಾಗಿದೆ. ಇವೆಲ್ಲದರಿಂದಾಗಿ ದೇಶೀಯ ಆರ್ಥಿಕತೆಯ ಮೂಲಭೂತ ಅಂಶಗಳು ದೃಢವಾಗಿವೆ. ಇವೆಲ್ಲವುಗಳ ಸಮತೋಲನದ ಮೇಲೆ 2026ರ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.6.3 ರಿಂದ 6.8ರ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

Category
ಕರಾವಳಿ ತರಂಗಿಣಿ