image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಾಷಿಂಗ್ಟನ್​ನಲ್ಲಿ 64 ಜನರಿದ್ದ ಪ್ಯಾಸೆಂಜರ್​ ಜೆಟ್-ಸೇನಾ ಹೆಲಿಕಾಪ್ಟರ್​ ನಡುವೆ ಡಿಕ್ಕಿ

ವಾಷಿಂಗ್ಟನ್​ನಲ್ಲಿ 64 ಜನರಿದ್ದ ಪ್ಯಾಸೆಂಜರ್​ ಜೆಟ್-ಸೇನಾ ಹೆಲಿಕಾಪ್ಟರ್​ ನಡುವೆ ಡಿಕ್ಕಿ

ಯುಎಸ್‌ಎ: ಪ್ಯಾಸೆಂಜರ್​ ಜೆಟ್​ ಮತ್ತು ಸೇನಾ ಹೆಲಿಕಾಪ್ಟರ್​ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಅಮೆರಿಕದ ವಾಷಿಂಗ್ಟನ್​ನಲ್ಲಿ ಬುಧವಾರ ರಾತ್ರಿ ನಡೆಯಿತು. ಅಮೆರಿಕನ್​ ಏರ್​ಲೈನ್ಸ್ ​ವಿಮಾನ ಸಂಖ್ಯೆ 5342 ಮತ್ತು ಬ್ಲಾಕ್​ ಹಾವಕ್​ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

ಈ ಸಂದರ್ಭದಲ್ಲಿ ಪ್ಯಾಸೆಂಜರ್​ ಜೆಟ್‌ನಲ್ಲಿ 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.

ಫೆಡರಲ್​ ವಿಮಾನ ಆಡಳಿತ​ (ಎಫ್​ಎಎ)ದ ವರದಿ ಪ್ರಕಾರ, ಬುಧವಾರ ರಾತ್ರಿ 9ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ಯಾಸೆಂಜರ್​ ಜೆಟ್​​ ರೊನಾಲ್ಡ್​​ ರೀಗನ್​ ವಾಷಿಂಗ್ಟನ್​ ನ್ಯಾಷನಲ್​ ಏರ್​ಪೋರ್ಟ್​ನ ರನ್‌ವೇ 33ರಲ್ಲಿ ಇಳಿಯುತ್ತಿದ್ದಂತೆ ದುರಂತ ಘಟಿಸಿದೆ.

ಪಿಎಸ್​ಎ ಏರ್​ಲೈನ್​ ಬೊಮಾರ್ಡಿಯರ್​ ಸಿಆರ್​ಜೆ700 ಪ್ರಾದೇಶಿಕ ಜೆಟ್,​​ ಸ್ಥಳೀಯ ಕಾಲಮಾನ ರಾತ್ರಿ 9ಕ್ಕೆ ರೀಗನ್​ ವಾಷಿಂಗ್ಟನ್​ ನ್ಯಾಷನಲ್​ ಏರ್​ಪೋರ್ಟ್​ನ ರನ್​ವೇ ಇಳಿಯುವಾಗ ಸಿಕೊರ್ಸಕೆ ಎಚ್​-60 ಹೆಲಿಕಾಪ್ಟರ್‌ ಡಿಕ್ಕಿಯಾಗಿದೆ. ಪಿಎಸ್​ಎ ವಿಮಾನವನ್ನು ಅಮೆರಿಕನ್​ ಏರ್​ಲೈನ್ಸ್‌​ ಕಾರ್ಯಾಚರಣೆ ನಡೆಸುತ್ತಿದೆ. ಇದು ಕನ್ಸಸ್‌ನ​ ವಿಚಿತ ಎಂಬಲ್ಲಿಂದ ಹೊರಟಿತ್ತು. ಘಟನೆಯನ್ನು ಎಫ್​ಎಎಎ ಮತ್ತು ಎನ್​ಟಿಎಸ್​ಬಿ ತನಿಖೆ ನಡೆಸಲಿದೆ ಎಂದು ಎಫ್​ಎಎ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

Category
ಕರಾವಳಿ ತರಂಗಿಣಿ