image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆಲಸದ ಸಮಯದ ನಿಯಮ ಸೇರಿದಂತೆ ಸಪ್ತ ಗ್ಯಾರಂಟಿ ಘೋಷಿಸಿದ ಎಎಪಿ

ಕೆಲಸದ ಸಮಯದ ನಿಯಮ ಸೇರಿದಂತೆ ಸಪ್ತ ಗ್ಯಾರಂಟಿ ಘೋಷಿಸಿದ ಎಎಪಿ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಸಪ್ತ ಗ್ಯಾರಂಟಿಗಳನ್ನು ಎಎಪಿ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಘೋಷಣೆ ಮಾಡಿದ್ದಾರೆ. ಆರ್ಥಿಕ ದುರ್ಬಲ ವರ್ಗದವರಿಗೆ (EWS) ಫ್ಲಾಟ್​, ಸಂಸದರು, ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳ ನಿವಾಸದಲ್ಲಿ ಕಾರ್ಯ ನಿರ್ವಹಿಸುವ ಸೇವಕರ (ಮನೆಗೆಲಸದವರ) ಕೆಲಸದ ಗಂಟೆಗಳ ನಿಯಮ ಸೇರಿದಂತೆ ಹಲವು ಗ್ಯಾರಂಟಿಗಳನ್ನು ನೀಡಿದ್ದಾರೆ.

ಪೋರ್ಟಲ್​ನಲ್ಲಿ ನೋಂದಣಿಯಾಗಿರುವ ಸೇವಕರಿಗೆ ವೇತನ ನಿಯಮಾವಳಿ, 10 ಲಕ್ಷ ವಿಮೆ ಮತ್ತು ಅವರ ಮಕ್ಕಳಿಗೆ ವಿಮೆ ಕೂಡ ಇದರಲ್ಲಿ ಸೇರಿದೆ.

ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು​, ಶೇ 70-80ರಷ್ಟು ಮನೆಗೆಲಸದ ಸೇವಕರಿಗೆ ವೇತನವನ್ನು ನೀಡಲಾಗುತ್ತಿಲ್ಲ. ಅವರಿಗೆ ಕೇವಲ ಕ್ವಾಟ್ರಸ್​ ಮಾತ್ರ ನೀಡಲಾಗಿದ್ದು, ಜೀತ ಕಾರ್ಮಿಕರಂತೆ ಪರಿಗಣಿಸಲಾಗುತ್ತಿದೆ. ಈ ಮನೆಗೆಲಸದವರಿಗೆ ನೀಡುತ್ತಿರುವ ಮನೆಯನ್ನು ಕೆಲವು ಸಂಸದರು ಬಾಡಿಗೆಗೆ ನೀಡಿದ್ದಾರೆ ಎಂದು ಕೂಡ ಆರೋಪಿಸಿದರು.

ಮೊದಲಿಗೆ ನಾವು ಸೇವಕರು, ಹಾಗಾಗಿ ಹೆಸರು ನೋಂದಣಿಗೆ ಪ್ರತ್ಯೇಕ ಪೋರ್ಟಲ್​ ಸೃಷ್ಟಿಸಲಾಗುವುದು. ಈ ಮೂಲಕ ಕೆಲಸಗಾರರು ಉದ್ಯೋಗದ ಅವಕಾಶವನ್ನು ಹುಡುಕಬಹುದು. ಎರಡನೇಯದು ಈ ಉದ್ಯೋಗಿಗಳಿಗೆ ಹಾಸ್ಟೆಲ್​ ನಿರ್ಮಾಣ ಮಾಡಲಾಗುವುದು. ಮೂರನೇಯದು ಮೊಬೈಲ್​ ಮೊಹಲ್ಲಾ ಕ್ಲಿನಿಕ್​ ಅನ್ನು ನಿಯೋಜಿಸಲಾಗುವುದು ಎಂದು ಆಪ್​ ನಾಯಕ ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ