ಉತ್ತರ ಪ್ರದೇಶ : ಮಹಾಕುಂಭ ಮೇಳದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಪ್ರಮುಖವಾಗಿ ಐದು ಬದಲಾವಣೆಗೆ ಮುಂದಾಗಿದೆ. ಈ ಬದಲಾವಣೆಗಳನ್ನು ತಕ್ಷಣ ಜಾರಿ ಮಾಡಿ, ಕುಂಭ ಮೇಳವನ್ನು ಸುರಕ್ಷಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಮಹಾ ಕುಂಭ ಮೇಳದ ಪ್ರದೇಶಕ್ಕೆ ಎಲ್ಲಾ ರೀತಿಯ ವಾಹನಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಯಾವುದೇ ವಿನಾಯಿತಿ ಇಲ್ಲದೇ ವಿಶೇಷ ಪಾಸ್ಗಳ ಪ್ರವೇಶಕ್ಕೆ ಅನುಮತಿ ಇಲ್ಲ. ಭಕ್ತರಿಗೆ ಅನುಕೂಲವಾಗುವಂತೆ ಏಕ ಮುಖ ಮಾರ್ಗದಲ್ಲಿ ಟ್ರಾಫಿಕ್ ವ್ಯವಸ್ಥೆ ಜಾರಿಗೆ ನಿರ್ಧಾರ.
ಪ್ರಯಾಗ್ರಾಜ್ ನೆರೆಹೊರೆ ಜಿಲ್ಲೆಯಿಂದ ಹೊರಬರುವ ವಾಹನಗಳ ಆಗಮನವನ್ನು ನಿರ್ಬಂಧಿಸುವ ಮೂಲಕ ದಟ್ಟಣೆ ಕಡಿಮೆ ಮಾಡಲಾಗಿದೆ. ನಗರದಲ್ಲಿ ಫೆ. 4ರವರೆಗೆ ನಾಲ್ಕು ಚಕ್ರದ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.