image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಾಯಿಯ ವಿವಾಹೇತರ ಸಂಬಂಧಕ್ಕೆ ತಾನು ಹುಟ್ಟಿದ ಶಂಕೆಯಲ್ಲಿ ಡಿ ಎನ್ ಎ ಪರೀಕ್ಷೆಗೆ ಕೋರ್ಟ್ ಮೊರೆ ಹೋದ ಯುವಕ...!

ತಾಯಿಯ ವಿವಾಹೇತರ ಸಂಬಂಧಕ್ಕೆ ತಾನು ಹುಟ್ಟಿದ ಶಂಕೆಯಲ್ಲಿ ಡಿ ಎನ್ ಎ ಪರೀಕ್ಷೆಗೆ ಕೋರ್ಟ್ ಮೊರೆ ಹೋದ ಯುವಕ...!

ನವದೆಹಲಿ: ಡಿಎನ್​ಎ ಪರೀಕ್ಷೆಯು ಯಾವುದೇ ವ್ಯಕ್ತಿಯ ಘನತೆ ಮತ್ತು ಗೌಪ್ಯತೆಗೆ ಧಕ್ಕೆ ತರಬಾರದು. ಇದರಿಂದ ಆತನ ಸಾಮಾಜಿಕ ಗೌರವಕ್ಕೂ ಚ್ಯುತಿ ತಂದಂತಾಗುತ್ತದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ತನ್ನ ತಾಯಿಯ ವಿವಾಹೇತರ ಸಂಬಂಧದಿಂದ ಜನಿಸಿದ್ದೇನೆ. ನನ್ನ ಜೈವಿಕ ತಂದೆ ಯಾರು ಎಂದು ತಿಳಿದುಕೊಳ್ಳಲು ವ್ಯಕ್ತಿಯೊಬ್ಬರ ಡಿಎನ್​​ಎ ಪರೀಕ್ಷೆ ನಡೆಸಬೇಕು ಎಂದು ಕೋರಿ 23 ವರ್ಷದ ಯುವಕನೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.

ಒಬ್ಬ ವ್ಯಕ್ತಿ ತನ್ನ ತಂದೆಯೇ ಎಂದು ತಿಳಿದುಕೊಳ್ಳುವ ಕಾನೂನುಬದ್ಧ ಆಸಕ್ತಿಯು ಇನ್ನೊಬ್ಬರ ಗೌಪ್ಯತೆ ಮತ್ತು ಘನತೆಯ ಹಕ್ಕನ್ನು ಮೀರಬಾರದು. ಇಂತಹ ಪ್ರಕರಣದಲ್ಲಿ ಡಿಎನ್​ಎ ನಡೆಸಲು ಕೋರುವುದು ವ್ಯಕ್ತಿಯ ಹಕ್ಕಿನ ಚ್ಯುತಿಯಾಗಲಿದೆ. ಯುವಕನ ಮಾಜಿ ತಂದೆಯೇ ನಿಜವಾದ ಜೈವಿಕ ತಂದೆ ಎಂದು ತೀರ್ಪು ನೀಡಿ, ಎರಡು ದಶಕಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ಕೋರ್ಟ್​ ಇತಿಶ್ರೀ ಹಾಡಿತು.

ಕೇರಳದ ಯುವಕನೊಬ್ಬ, ತನ್ನ ತಾಯಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ತನ್ನ ತಂದೆಯೇ ಎಂದು ತಿಳಿದುಕೊಳ್ಳಲು ಡಿಎನ್​ಎ ಪರೀಕ್ಷೆ ನಡೆಸಬೇಕು ಎಂದು ಕೋರಿದ್ದ. ಆದರೆ, ಹೈಕೋರ್ಟ್​ ಇದನ್ನು ನಿರಾಕರಿಸಿತ್ತು. ಇದರ ವಿರುದ್ಧ ಯುವಕ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ. ಇತ್ತ ಪ್ರತಿವಾದಿಯಾದ ವ್ಯಕ್ತಿಯೂ ತಾನು ಯುವಕನ ತಂದೆ ಅಲ್ಲ ಎಂದು ನಿರಾಕರಿಸುತ್ತಲೇ ಬಂದಿದ್ದರು. ಆರೋಪದಿಂದ ನನ್ನ ಸಾಮಾಜಿಕ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

Category
ಕರಾವಳಿ ತರಂಗಿಣಿ