image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ ಎಂಬುದು ಹ್ಯೂಮನ್ ರೈಟ್ ವರದಿ....!

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ ಎಂಬುದು ಹ್ಯೂಮನ್ ರೈಟ್ ವರದಿ....!

ಢಾಕಾ: ಇಸ್ಲಾ ಮೂಲಭೂತವಾದಿ ಸಂಘಟನೆಗಳ ಸದಸ್ಯರು ಅಲ್ಪಸಂಖ್ಯಾತರ ಮೇಲೆ, ವಿಶೇಷವಾಗಿ ಬಾಂಗ್ಲಾದೇಶದ ಹಿಂದೂ ಮತ್ತು ಅಹ್ಮದೀಯ ಸಮುದಾಯಗಳ ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ (ಎಚ್ಆರ್​ಡಬ್ಲ್ಯೂ) ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗಪಡಿಸಿದೆ. ಕಳೆದ ವರ್ಷದ ಆಗಸ್ಟ್​ನಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ ದೇಶದಲ್ಲಿ ಅವಾಮಿ ಲೀಗ್ ಬೆಂಬಲಿಗರು ಮತ್ತು ಪತ್ರಕರ್ತರ ಮೇಲೆ ಭದ್ರತಾ ಪಡೆಗಳು ಕೂಡ ದೌರ್ಜನ್ಯವೆಸಗುತ್ತಿರುವ ಆತಂಕಕಾರಿ ಬೆಳವಣಿಗೆಗಳಾಗುತ್ತಿವೆ ಎಂದು ವರದಿ ತಿಳಿಸಿದೆ.

'ಮಾನ್ಸೂನ್ ಕ್ರಾಂತಿಯ ನಂತರ: ಬಾಂಗ್ಲಾದೇಶದಲ್ಲಿ ಶಾಶ್ವತ ಭದ್ರತಾ ವಲಯದ ಸುಧಾರಣೆಗೆ ಮಾರ್ಗಸೂಚಿ' ಎಂಬ ಶೀರ್ಷಿಕೆಯ 50 ಪುಟಗಳ ವರದಿಯು ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ವಿವಿಧ ಸಲಹೆಗಳನ್ನು ನೀಡಿದೆ.

ಶಾಶ್ವತ ಸುಧಾರಣೆಗಳನ್ನು ಖಚಿತಪಡಿಸಿಕೊಳ್ಳಲು ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ ಮತ್ತು ಇತರ ವಿಶ್ವಸಂಸ್ಥೆ ಹಕ್ಕುಗಳ ತಜ್ಞರಿಂದ ತಾಂತ್ರಿಕ ನೆರವು, ಮೇಲ್ವಿಚಾರಣೆ ಮತ್ತು ವರದಿಯನ್ನು ಪಡೆಯಬೇಕು ಎಂದು ಬಾಂಗ್ಲಾ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಹಿಂದೂಗಳ ಮೇಲೆ ಹೆಚ್ಚಿದ ದಾಳಿ- ವರದಿ: ಹಸೀನಾ ಸರ್ಕಾರದ ಪತನದ ನಂತರ ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗುತ್ತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಅಂತರರಾಷ್ಟ್ರೀಯ ಕಳವಳಕ್ಕೆ ಕಾರಣವಾಗಿದೆ. ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು ಸಾಂಪ್ರದಾಯಿಕವಾಗಿ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ಬೆಂಬಲಿಸಿದ್ದರಿಂದ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹಲವಾರು ವ್ಯಾಖ್ಯಾನಕಾರರು ಎಚ್ಆರ್​ಡಬ್ಲ್ಯೂಗೆ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ