image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಗುವಿನಿಂದಲೇ ಪ್ರಸಿದ್ಧರಾದ ಬಂಜಾರನ್ ಮೊನಾಲಿಸಾಗೆ ನಿರ್ದೇಶಕ ಸನೋಜ್ ಮಿಶ್ರಾರಿಂದ ನಟಿಸುವ ಆಫರ್

ನಗುವಿನಿಂದಲೇ ಪ್ರಸಿದ್ಧರಾದ ಬಂಜಾರನ್ ಮೊನಾಲಿಸಾಗೆ ನಿರ್ದೇಶಕ ಸನೋಜ್ ಮಿಶ್ರಾರಿಂದ ನಟಿಸುವ ಆಫರ್

 

ಉತ್ತರಪ್ರದೇಶ: ಮಧ್ಯಪ್ರದೇಶದ ಇಂದೋರ್‌ನಿಂದ ಮಹಾಕುಂಭಮೇಳಕ್ಕೆ ಬಂದು ಜಪಮಾಲೆಗಳನ್ನು ಮಾರಾಟ ಮಾಡುತ್ತಾ ತನ್ನ ನಗುವಿನಿಂದಲೇ ಪ್ರಸಿದ್ಧರಾದ ಬಂಜಾರನ್ ಮೊನಾಲಿಸಾ ಅವರಿಗೆ ಇದೀಗ ಚಲನಚಿತ್ರಗಳಲ್ಲಿ ನಟಿಸುವ ಆಫರ್ ಸಿಕ್ಕಿದೆ.

'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ನಿರ್ದೇಶಕ ಸನೋಜ್ ಮಿಶ್ರಾ ಅವರು ತಮ್ಮ ಮುಂದಿನ ಚಿತ್ರ 'ದಿ ಡೈರಿ ಆಫ್ ಮಣಿಪುರ'ದಲ್ಲಿ ಮೊನಾಲಿಸಾ ಅವರಿಗೆ ಪ್ರಮುಖ ಪಾತ್ರವೊಂದನ್ನ ನೀಡಿದ್ದಾರೆ. ಮೊನಾಲಿಸಾ ಅವರನ್ನು ಭೇಟಿಯಾದ ನಂತರ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಿದ್ದಾರೆ.

ಈಗಾಗಲೇ ಈ ಬಗ್ಗೆ ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾ ಅವರ ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಸದ್ಯ ಮೊನಾಲಿಸಾ ಮಹಾಕುಂಭ ನಗರದಲ್ಲಿಲ್ಲ. ಆದ್ದರಿಂದ ಸನೋಜ್ ಈಗ ಇಂದೋರ್‌ನಲ್ಲಿರುವ ಮೊನಾಲಿಸಾ ಅವರ ಹಳ್ಳಿಗೆ ಹೋಗಲಿದ್ದಾರೆ.

ನಿರ್ಮಾಪಕ - ನಿರ್ದೇಶಕ ಸನೋಜ್ ಮಿಶ್ರಾ ಅವರು ಅತ್ಯಂತ ಸೂಕ್ಷ್ಮ ವಿಷಯಗಳ ಮೇಲೆ ಡಜನ್‌ಗಿಂತಲೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಜನವರಿ 19, 2025 ರಂದು ಮೊನಾಲಿಸಾಗೆ ತಮ್ಮ ಮುಂದಿನ ಚಲನಚಿತ್ರದಲ್ಲಿ ಪಾತ್ರವನ್ನು ನೀಡುವ ಕುರಿತು ತಮ್ಮ ಮೊದಲ ಟ್ವೀಟ್ ಮಾಡಿದ್ದರು.

Category
ಕರಾವಳಿ ತರಂಗಿಣಿ