image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಸ್ರೇಲ್ - ಹಮಾಸ್ ಕದನ ವಿರಾಮ

ಇಸ್ರೇಲ್ - ಹಮಾಸ್ ಕದನ ವಿರಾಮ

ಕೈರೋ: ಗಾಜಾ ಕದನ ವಿರಾಮ ಒಪ್ಪಂದದ ಮೊದಲ ಹಂತ ಜಾರಿಯ ಸಂದರ್ಭದಲ್ಲಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ ಮೆಂಟ್ ಅಥವಾ ಹಮಾಸ್ 33 ಇಸ್ರೇಲಿ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಇಸ್ರೇಲ್ 1,890ಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಲಿದೆ ಎಂದು ಈಜಿಪ್ಟ್ ಘೋಷಿಸಿದೆ. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಈಜಿಪ್ಟ್ ಮಧ್ಯಸ್ಥಿಕೆಯ ಮೂಲಕ ತಲುಪಿದ ಈ ಒಪ್ಪಂದವು ಸ್ಥಳೀಯ ಸಮಯ ಭಾನುವಾರ ಬೆಳಗ್ಗೆ 8: 30 ಕ್ಕೆ (0630 ಜಿಎಂಟಿ) ಪ್ರಾರಂಭವಾಗಲಿದೆ ಎಂದು ಈಜಿಪ್ಟ್ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

42 ದಿನಗಳ ಕಾಲ ಮುಂದುವರಿಯಲಿರುವ ಕದನ ವಿರಾಮದ ಮೊದಲ ಹಂತದಲ್ಲಿ, ಇಸ್ರೇಲ್ 1,890 ಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಹಮಾಸ್ 33 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ ಎಂದು ಸಚಿವಾಲಯ ತಿಳಿಸಿದೆ. ಒಪ್ಪಂದದ ಎಲ್ಲ ಮೂರು ಹಂತಗಳಲ್ಲಿ ಸಂಪೂರ್ಣ ಮತ್ತು ಸಮಯೋಚಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮಧ್ಯವರ್ತಿಗಳ ಬದ್ಧತೆಯನ್ನು ಅದು ಒತ್ತಿಹೇಳಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕದನ ವಿರಾಮ ಒಪ್ಪಂದವು ಪ್ಯಾಲೆಸ್ಟೈನ್ ಜನರ ಸಂಕಟವನ್ನು ನಿವಾರಿಸುವ ಮಾರ್ಗದ ಆರಂಭದ ಮುನ್ಸೂಚನೆಯಾಗಿದೆ ಎಂದು ಈಜಿಪ್ಟ್ ಭರವಸೆ ವ್ಯಕ್ತಪಡಿಸಿದೆ. ಒಪ್ಪಂದವನ್ನು ಬೆಂಬಲಿಸುವಂತೆ ಮತ್ತು ಶಾಶ್ವತ ಕದನ ವಿರಾಮವನ್ನು ಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್​ಗೆ ಈಜಿಪ್ಟ್ ಕರೆ ನೀಡಿದೆ.

ಇದಲ್ಲದೆ, ಪ್ಯಾಲೆಸ್ಟೈನ್ ಜನತೆಗೆ ಅಗತ್ಯವಿರುವ ಎಲ್ಲ ಮಾನವೀಯ ನೆರವನ್ನು ಒದಗಿಸುವಂತೆ ಮತ್ತು ಗಾಜಾದ ಪುನರ್ ನಿರ್ಮಾಣಕ್ಕಾಗಿ ತುರ್ತು ಯೋಜನೆ ಅಭಿವೃದ್ಧಿಪಡಿಸುವಂತೆ ಈಜಿಪ್ಟ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯಿಸಿದೆ. ಅಂತಾರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ದ್ವಿ-ರಾಷ್ಟ್ರ ಪರಿಹಾರದ ಚೌಕಟ್ಟಿನೊಳಗೆ ಪ್ಯಾಲೆಸ್ಟೈನ್ ಸಮಸ್ಯೆ ಪರಿಹರಿಸಬೇಕು ಎಂದು ಅದು ಹೇಳಿದೆ.

Category
ಕರಾವಳಿ ತರಂಗಿಣಿ