image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ ವಿರೋಧಿ ಮೂಲಭೂತವಾದಿ ಬಾಬರ್ ಜೈಲಿನಿಂದ ಬಿಡುಗಡೆ

ಭಾರತ ವಿರೋಧಿ ಮೂಲಭೂತವಾದಿ ಬಾಬರ್ ಜೈಲಿನಿಂದ ಬಿಡುಗಡೆ

ಬಾಂಗ್ಲಾದೇಶ: ಭಾರತಕ್ಕೆ ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಭಾರತದ ಈಶಾನ್ಯ ರಾಜ್ಯಗಳಲ್ಲಿ ಬಂಡಾಯ ಉತ್ತೇಜಿಸಲು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಬಾಂಗ್ಲಾದೇಶದ ಮಾಜಿ ಸಚಿವ ಲುಟ್ಫೋಝಮಾನ್ ಬಾಬರ್ ಈತನನ್ನು ಗುರುವಾರ ಢಾಕಾದ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದ ಈ ಮತ್ತೊಂದು ವಿವಾದಾತ್ಮಕ ನಿರ್ಧಾರದಿಂದ ಈಗಾಗಲೇ ಅಸ್ಥಿರತೆಯಿಂದ ಬಳಲುತ್ತಿರುವ ಬಾಂಗ್ಲಾದೇಶದ ಮೂಲಭೂತವಾದಿ ಶಕ್ತಿಗಳಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಬಾಬರ್ 2004 ರಲ್ಲಿ ಖಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್​ಪಿ) ಜಮಾತ್-ಎ-ಇಸ್ಲಾಮಿ ಮೈತ್ರಿ ಸರ್ಕಾರದಲ್ಲಿ ಗೃಹ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಮೇಲೆ ಗ್ರೆನೇಡ್ ದಾಳಿ ಮತ್ತು ಭಾರತದಿಂದ ಅಸ್ಸಾಂ ರಾಜ್ಯವನ್ನು ಪ್ರತ್ಯೇಕಗೊಳಿಸಲು ಕೆಲಸ ಮಾಡುತ್ತಿರುವ ನಿಷೇಧಿತ ಭಯೋತ್ಪಾದಕ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಗೆ ಚಿತ್ತಗಾಂಗ್ ಮೂಲಕ 10 ಟ್ರಕ್ ಲೋಡ್ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸಾಗಿಸಿದ ಆರೋಪದ ಮೇಲೆ ಇವರನ್ನು ಮೇ 2007 ರಲ್ಲಿ ಬಂಧಿಸಲಾಗಿತ್ತು.

Category
ಕರಾವಳಿ ತರಂಗಿಣಿ