image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾಲೆಗಳಲ್ಲಿ ಹೆಲ್ತ್​ ಕ್ಲಬ್​ ಸ್ಥಾಪನೆ : ರಾಜಸ್ಥಾನ ಶಿಕ್ಷಣ ಇಲಾಖೆಯಿಂದ ಮಹತ್ವದ ಹೆಜ್ಜೆ

ಶಾಲೆಗಳಲ್ಲಿ ಹೆಲ್ತ್​ ಕ್ಲಬ್​ ಸ್ಥಾಪನೆ : ರಾಜಸ್ಥಾನ ಶಿಕ್ಷಣ ಇಲಾಖೆಯಿಂದ ಮಹತ್ವದ ಹೆಜ್ಜೆ

ಜೈಪುರ್​: ಫಾಸ್ಟ್​ ಫುಡ್​ ಮತ್ತು ಜಂಕ್​ ಆಹಾರಗಳಿಂದ ಮಕ್ಕಳನ್ನು ದೂರವಿಡಬೇಕು ಎಂದು ನಿರ್ಧರಿಸಿರುವ ರಾಜಸ್ಥಾನ ಶಿಕ್ಷಣ ಇಲಾಖೆ ಇದಕ್ಕಾಗಿ ಹೊಸ ಹೆಜ್ಜೆಯನ್ನು ಮುಂದಿಟ್ಟಿದೆ. ಶಾಲೆಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ನಡೆಸುವ ಜೊತೆಗೆ ಆರೋಗ್ಯ ಕ್ಲಬ್​​ಗಳನ್ನು ಆಯೋಜಿಸುತ್ತಿದೆ. ಈ ಹೆಲ್ತ್​ ಕ್ಲಬ್​ನಲ್ಲಿ ಮಕ್ಕಳಿಗೆ ಫಾಸ್ಟ್​ ಫುಡ್​ಗಳು ಹೇಗೆ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತವೆ ಎಂದು ತಿಳಿಸುವ ಪ್ರಯತ್ನ ನಡೆಸಿದೆ.

ಫಾಸ್ಟ್​ ಫುಡ್​ ಮತ್ತು ಜಂಕ್​ ಫುಡ್​ಗಳು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಪೋಷಕರು ಕೂಡ ಈ ಬಗ್ಗೆ ಅರಿವು ಹೊಂದಿದ್ದರೂ, ಮಕ್ಕಳನ್ನು ಇದರಿಂದ ದೂರವಿಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಹೊರಲು ಮುಂದಾಗಿದೆ.

ಸರ್ಕಾರದಿಂದ ಶಾಲೆಗಳಲ್ಲಿ ಹೆಲ್ತ್​ ಕ್ಲಬ್​ ರಚಿಸಲಾಗಿದ್ದು, ಇದರಲ್ಲಿ ಮಕ್ಕಳಿಗೆ ಆಹಾರ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸುವ ಯತ್ನ ನಡೆಸಲಾಗಿದೆ. ಹಾಗೇ ಮಾನಸಿಕವಾಗಿ ಮಕ್ಕಳನ್ನು ಇಂತಹ ಆರೋಗ್ಯದಿಂದ ದೂರವಿರುವ ಪ್ರಯತ್ನ ನಡೆಸಿದೆ. ಇಲಾಖೆ ಆದೇಶದ ಪ್ರಕಾರ, ಶಾಲೆಗಳಲ್ಲಿರುವ ಆರೋಗ್ಯ ಕ್ಲಬ್​ಗಳಲ್ಲಿ ಮಕ್ಕಳು ತರುವ ಆಹಾರದ ಬಗ್ಗೆ ಶಿಕ್ಷಕರು ಮತ್ತು ಸಹಪಾಠಿಗಳಿಗೆ ತಿಳಿಹೇಳುವ ಪ್ರಯತ್ನ ನಡೆಸಲಾಗಿದೆ.

Category
ಕರಾವಳಿ ತರಂಗಿಣಿ