image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಿಜ್ಬುಲ್ಲಾಗೆ ಸೇರಿದ ನೆಲೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದ ಇಸ್ರೇಲ್

ಹಿಜ್ಬುಲ್ಲಾಗೆ ಸೇರಿದ ನೆಲೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದ ಇಸ್ರೇಲ್

ಲೆಬನಾನ್​: ಇಸ್ರೇಲ್ ಮತ್ತು ಲೆಬನಾನ್ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ನಡುವಿನ ಕದನ ವಿರಾಮವನ್ನು ಒಂದು ತಿಂಗಳ ಕಾಲ ಜಾರಿಯಲ್ಲಿತ್ತು. ಆದರೆ ಒಪ್ಪಂದದ ಗಡುವಿನೊಳಗೆ ಕದನ ವಿರಾಮ ಷರತ್ತುಗಳ ಪಾಲನೆ ಅಸಂಭವವಾಗಿದೆ.

ನವೆಂಬರ್ 27 ರಂದು ನಡೆದ ಕದನ ವಿರಾಮ ಒಪ್ಪಂದದ ಪ್ರಕಾರ, ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಮತ್ತು ಇಸ್ರೇಲಿ ಪಡೆಗಳು ಲೆಬನಾನ್​ನಿಂದ ಹಿಂದೆ ಸರಿಯಬೇಕು. ಇದರ ಜೊತೆಗೆ ಲೆಬನಾನ್​ ಸೈನ್ಯ ಮತ್ತು ಯುಎನ್ ಶಾಂತಿಪಾಲಕರಿಗೆ ಇಸ್ರೇಲಿ ತನ್ನ ನಿಯಂತ್ರಣವನ್ನು ಹಸ್ತಾಂತರಿಸಲು 60 ದಿನಗಳ ಗಡುವು ನೀಡಲಾಗಿತ್ತು.

ಆದರೆ ಇಸ್ರೇಲ್, ಇಲ್ಲಿಯವರೆಗೆ ದಕ್ಷಿಣ ಲೆಬನಾನ್​​ನಲ್ಲಿ ತನ್ನ ಹಿಡಿತದಲ್ಲಿರುವ ಡಜನ್​ಗಟ್ಟಲೆ ಪಟ್ಟಣಗಳ ಪೈಕಿ ಕೇವಲ ಎರಡರಿಂದ ಮಾತ್ರ ಹಿಂದೆ ಸರಿದಿದೆ ಮತ್ತು ಹಿಜ್ಬುಲ್ಲಾಗೆ ಸೇರಿದ ನೆಲೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದೆ. ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ವಶಪಡಿಕೊಳ್ಳುವ ಮತ್ತು ಅವುಗಳನ್ನು ನಾಶಪಡಿಸುವುದಕ್ಕೂ ಮುನ್ನ ಇಸ್ರೇಲ್​ ರಾಕೆಟ್​ಗಳನ್ನು ಉಡಾಯಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸುಮಾರು 14 ತಿಂಗಳ ಸುದೀರ್ಘ ಯುದ್ಧದಿಂದ ಕಂಗೆಟ್ಟಿರುವ ಹಿಜ್ಬುಲ್ಲಾ, 60 ದಿನಗಳ ಗಡುವಿನೊಳಗೆ ಇಸ್ರೇಲ್ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳದಿದ್ದರೆ ಯುದ್ಧವನ್ನು ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದೆ.

Category
ಕರಾವಳಿ ತರಂಗಿಣಿ