image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಯ್ಯಪ್ಪ ಭಕ್ತರಿಗೆ ನೀಡಲಾಗುತ್ತಿದ್ದ ವಿಶೇಷ ಪಾಸ್​ ತಾತ್ಕಾಲಿಕ ಸ್ಥಗಿತ

ಅಯ್ಯಪ್ಪ ಭಕ್ತರಿಗೆ ನೀಡಲಾಗುತ್ತಿದ್ದ ವಿಶೇಷ ಪಾಸ್​ ತಾತ್ಕಾಲಿಕ ಸ್ಥಗಿತ

ಕೇರಳ : ಅರಣ್ಯ ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ಬರುವ ಶಬರಿಮಲೆ ಅಯ್ಯಪ್ಪ ಭಕ್ತರಿಗೆ ನೀಡುವ ವಿಶೇಷ ಪಾಸ್​​ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ತಿರುವಾಂಕೂರ್​​ ದೇವಸ್ವಂ ಮಂಡಳಿ (ಟಿಡಿಬಿ) ಘೋಷಿಸಿದೆ.

ಈ ಪಾಸ್​ ವಿತರಣೆಯಿಂದಾಗಿ ವರ್ಚುವಲ್​ ಸಾಲಿನ ವ್ಯವಸ್ಥೆ ಮತ್ತು ಅಲ್ಲಿಯೇ ಬುಕ್ಕಿಂಗ್​ ಮಾಡಿ ಪಂಬಾದಿಂದ ಬರುತ್ತಿರುವ ಭಕ್ತರು ಅಯ್ಯಪ್ಪನ ದರ್ಶನಕ್ಕೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಈ ವಿಶೇಷ ಪಾಸ್​ ಅನ್ನು ನಿಲ್ಲಿಸಲಾಗಿದೆ ಎಂದು ದೇವಸ್ವಂ ಬೋರ್ಡ್​ ಸದಸ್ಯ ಎ ಅಜಿಕುಮಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಅರಣ್ಯ ಮಾರ್ಗದಿಂದ ನಡೆದುಕೊಂಡು ಬರುವ 5,000 ಭಕ್ತರಿಗೆ ದರ್ಶನ ಸುಲಭಗೊಳಿಸಲು ಈ ವಿಶೇಷ ಪಾಸ್​ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರಣ್ಯ ಮಾರ್ಗದ ಮೂಲಕ ಆಗಮಿಸುವ ಭಕ್ತರ ಸಂಖ್ಯೆ ಕೂಡ ಐದು ಪಟ್ಟಿ ಹೆಚ್ಚಾಗಿತ್ತು. ಈ ಹಿನ್ನೆಲೆ ವಿಶೇಷ ಪಾಸ್​ ನೀಡುವಿಕೆ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು. ಇದೀಗ ಮುಂದಿನ ಪ್ರಕಟಣೆವರೆಗೆ ವಿಶೇಷ ದರ್ಶನದ ಪಾಸ್​ ಅನ್ನು ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ವಾರ್ಷಿಕ ಮಕರವುಲಕ್ಕು ಹಬ್ಬದ ಅಂಗವಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ಡಿಸೆಂಬರ್​ 30ರಂದು ತೆಗೆಯಲಾಗಿದ್ದು, ಜನವರಿ 14ರ ವರೆಗೆ ಈ ದರ್ಶನವನ್ನು ಅಯ್ಯಪ್ಪ ಭಕ್ತರು ನಡೆಸಬಹುದಾಗಿದೆ. ಡಿಸೆಂಬರ್ 23ರ ಹೊತ್ತಿಗೆ ಈ ಋತುವಿನಲ್ಲಿ ಒಟ್ಟು 30,87,049 ಯಾತ್ರಾರ್ಥಿಗಳು ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಅಲ್ಲಿನ ಆಡಳಿತ ಮಂಡಳಿ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 4.46 ಲಕ್ಷ ಭಕ್ತರು ಹೆಚ್ಚು ಭೇಟಿ ನೀಡಿದ್ದಾರೆ. ಮಕರವಿಳಕ್ಕು ಹಬ್ಬದ ಅಂಗವಾಗಿ ಜನವರಿ 13 ಮತ್ತು 14 ರಂದು ವರ್ಚುವಲ್ ಕ್ಯೂ ಬುಕ್ಕಿಂಗ್ ಸಂಖ್ಯೆಯನ್ನು 50,000 ಮತ್ತು 40,000 ಕ್ಕೆ ನಿಗದಿಪಡಿಸಲಾಗಿದೆ.

Category
ಕರಾವಳಿ ತರಂಗಿಣಿ