ಮಂಗಳೂರು: ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿರುವ ಕ್ರಿಸ್ಮಸ್ ದ್ವೀಪ ಎಂದು ಕರೆಯಲ್ಪಡುವ ಕಿರಿಬಾತಿ ದ್ವೀಪದಲ್ಲಿ ಜನವರಿ 1, 2025ರ ಮುಂಜಾನೆಯು ಡಿಸೆಂಬರ್ 31, 2024ರಂದು ಪೂರ್ವ ಸಮಯ ಬೆಳಿಗ್ಗೆ 5.00 ಗಂಟೆಗೇ ಆರಂಭವಾಗುವ ಮೂಲಕ ಹೊಸ ವರ್ಷಕ್ಕೆ ಕಾಲಿಡುವ ವಿಶ್ವದ ಮೊದಲು ರಾಷ್ಟ್ರವಾಗಿದೆ.
ಕಿರಿಬಾತಿಯಲ್ಲಿ ಗಡಿಯಾರವು ಮಧ್ಯರಾತ್ರಿಯನ್ನು ಮುಟ್ಟಿದಾಗ ಸ್ಥಳೀಯರು ಹೊಸ ವರ್ಷಾಚರಣೆಯನ್ನು ಆರಂಭಿಸುತ್ತಾರೆ.
ಆದರೆ ಭಾರತಕ್ಕೂ ಕಿರಿಬಾತಿಗೂ ತುಂಬಾ ಸಮಯದ ವ್ಯತ್ಯಾಸವಿದೆ. ಕಿರಿಬಾತಿಯಲ್ಲಿ ಆಚರಣೆಗಳು ಈಗಾಗಲೇ ಆರಂಭವಾಗಿದ್ದರೆ, ಭಾರತದಲ್ಲಿ ಇನ್ನೂ ಸಿದ್ಧತೆಗಳು ನಡೆಯುತ್ತದೆ ಕಿರಿಬಾತಿಯ ನಂತರ 15 ನಿಮಿಷಗಳ ಅಂತರದಲ್ಲಿ ನ್ಯೂಜಿಲೆಂಡ್ನ ಚಾಥಮ್ ದ್ವೀಪಗಳಲ್ಲಿ ಬೆಳಿಗ್ಗೆ 5.15ಕ್ಕೆ ಹೊಸ ವರ್ಷಾಚರಣೆ ಆರಂಭವಾಗಿದೆ. ಇದರ ನಂತರ ನ್ಯೂಜಿಲೆಂಡ್ ಮತ್ತು ಟೋಕೆಲಾವ್ ಮತ್ತು ಟೋಂಗಾದಂತಹ ಹಲವಾರು ಪೆಸಿಫಿಕ್ ದ್ವೀಪಗಳಲ್ಲಿ ಜನವರಿ 1ನೇ ತಾರೀಕು ಉದಯಿಸಿದೆ.