image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಎಸ್​ಎಫ್​ ಯೋಧರಿಂದ ಪಾಕಿಸ್ಥಾನದ ಮೂರು ಸುಧಾರಿತ ತಂತ್ರಜ್ಞಾನದ ಡ್ರೋನ್​​ಗಳು ವಶಕ್ಕೆ

ಬಿಎಸ್​ಎಫ್​ ಯೋಧರಿಂದ ಪಾಕಿಸ್ಥಾನದ ಮೂರು ಸುಧಾರಿತ ತಂತ್ರಜ್ಞಾನದ ಡ್ರೋನ್​​ಗಳು ವಶಕ್ಕೆ

ಅಮೃತ್​ಸರ್​​​: ಪಂಜಾಬ್​ ಗಡಿಯಲ್ಲಿ ಬಿಎಸ್​ಎಫ್​ ಯೋಧರು ಪಾಕಿಸ್ಥಾನದ ಮೂರು ಸುಧಾರಿತ ತಂತ್ರಜ್ಞಾನದ ಡ್ರೋನ್​​ಗಳನ್ನು​ ವಶಕ್ಕೆ ಪಡೆದಿದ್ದಾರೆ. ಅಮೃತ್​ಸರದ ರಜತಲ್​ ಗ್ರಾಮದಲ್ಲಿ ಈ ಡ್ರೋನ್​​ಗಳನ್ನು​ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿ ಈ ಡ್ರೋನ್​ಗಳನ್ನು ಬಿಎಸ್​ಎಫ್​ ಪರಿಣಾಮಕಾರಿಯಾಗಿ ತಟಸ್ಥಗೊಳಿಸಿದೆ. ಹಾಗೇ ಮಾದಕವಸ್ತು ಕಳ್ಳಸಾಗಣೆಗೆ ಬಳಸದಂತೆ ತಡೆಯಲಾಗಿದೆ ಎಂದು ಬಿಎಸ್​ಎಫ್​ ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಎಸ್​ಎಫ್​​ ಪಂಜಾಬ್​, ಇಂದಿನ ಮಹತ್ವದ ಕಾರ್ಯಾಚರಣೆಯಲ್ಲಿ ಬಿಎಸ್​ಎಫ್​ ಪಂಜಾಬ್​​ ಪಡೆ ಎರಡು ಡಿಜೆಐ ಮ್ಯಾಟ್ರಿಕ್​ ಆರ್​ಟಿಕೆ ಡ್ರೋನ್​ ಮತ್ತು ಡಿಜೆಐ ಮ್ಯಾವಿಕ್​ 3 ಕ್ಲಾಸಿಕ್​ ಸೇರಿದಂತೆ 3 ಡ್ರೋನ್​ ಗಳನ್ನ ಪಂಜಾಬ್​ ಗಡಿಯ ರಜತಲ್​ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

ಗಡಿಯಲ್ಲಿ ಭದ್ರತೆ ಬಿಗಿಗೊಳಿಸುವಲ್ಲಿ, ಹಾಗೇ ಗಡಿದಾಟಿ ನಡೆಯುವ ಮಾದಕ ವಸ್ತು ಕಳ್ಳ ಸಾಗಣೆ ಚಟುವಟಿಕೆ ತಡೆಗೂ ಬಿಎಸ್​ಎಫ್​ ಪಂಜಾಬ್​ ಬದ್ದವಾಗಿದೆ ಎಂದು ಅದು ತಿಳಿಸಿದೆ.

Category
ಕರಾವಳಿ ತರಂಗಿಣಿ