image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಜರ್​​ಬೈಜಾನ್​ ಅಧ್ಯಕ್ಷರ ಬಳಿ ಕ್ಷಮೆ ಕೋರಿದ ರಷ್ಯಾ ಅಧ್ಯಕ್ಷ ಪುಟಿನ್

ಅಜರ್​​ಬೈಜಾನ್​ ಅಧ್ಯಕ್ಷರ ಬಳಿ ಕ್ಷಮೆ ಕೋರಿದ ರಷ್ಯಾ ಅಧ್ಯಕ್ಷ ಪುಟಿನ್

ಮಾಸ್ಕೋ: ಕಝಾಕಿಸ್ತಾನದಲ್ಲಿ ಅಜರ್​ಬೈಜಾನ್​ ವಿಮಾನ ಪತನಗೊಂಡು 38 ಮಂದಿ ಬಲಿಯಾದ ಘಟನೆ ಕುರಿತಂತೆ, ಅಜರ್​​ಬೈಜಾನ್​​ ಅಧ್ಯಕ್ಷ ಇಲ್ಹಾಮ್ ಅಲಿಯೆವ್‌ ಅವರ ಬಳಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ ಅವರು ಕ್ಷಮೆಯಾಚಿಸಿದ್ದಾರೆ. ಆದರೆ, ಘಟನೆಗೆ ರಷ್ಯಾವೇ ಕಾರಣ ಎಂದು ಒಪ್ಪಿಕೊಂಡಿಲ್ಲ.

ವಿಮಾನವು ಡಿಸೆಂಬರ್ 25 ರಂದು ಅಜರ್‌ಬೈಜಾನ್‌ನ ರಾಜಧಾನಿ ಬಾಕುದಿಂದ ರಷ್ಯಾದ ಗ್ರೋಜ್ನಿಗೆ ಹಾರುತ್ತಿದ್ದಾಗ ಅದು ಕಝಾಕಿಸ್ತಾನ್​ ವಾಯುಪ್ರದೇಶದಲ್ಲಿ ಇಳಿಯಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 67 ಮಂದಿ ಇದ್ದರು. ಇದರಲ್ಲಿ 29 ಮಂದಿ ಬದುಕುಳಿದಿದ್ದರು.

ಅಜರ್​​ಬೈಜಾನ್​ ಏರ್‌ಲೈನ್ಸ್ ವಿಮಾನವು ಪತನಗೊಳ್ಳುವ ಮೊದಲು ರಷ್ಯಾದ ವಾಯು ಕ್ಷೇತ್ರದಲ್ಲಿ ವಿಮಾನ ಹಾರುತ್ತಿತ್ತು. ಉಕ್ರೇನ್​​ ಡ್ರೋನ್​ಗಳು ಈ ಪ್ರದೇಶದಲ್ಲಿ ಹಾರಿ ಬಂದಿದ್ದವು. ಹೀಗಾಗಿ, ರಷ್ಯಾದ ವಾಯು ರಕ್ಷಣೆಯು ಆಕಸ್ಮಿಕವಾಗಿ ಹೊಡೆದುರುಳಿಸಿರಬಹುದು ಎಂದು ಪುಟಿನ್ ಅಲಿಯೆವ್ ಬಳಿ ಹೇಳಿದ್ದಾಗಿ ವರಿಯಾಗಿದೆ.

ರಷ್ಯಾದ ವಾಯುಪ್ರದೇಶದಲ್ಲಿ ಘಟನೆ ನಡೆದಿದ್ದರೂ ಅಲಿಯೆವ್‌ ಬಳಿ ಕ್ಷಮೆಯಾಚಿಸುವಾಗ ರಷ್ಯಾದ ಅಧ್ಯಕ್ಷ ದುರಂತದ ಹೊಣೆಯನ್ನು ಹೊತ್ತುಕೊಂಡಿಲ್ಲ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಕ್ರಿಸ್​​ಮಸ್​ ದಿನದಂದೇ ಕಝಾಕಿಸ್ತಾನದ ಅಕ್ಟೌ ಬಳಿ ಅಜರ್​ಬೈಜಾನ್​ ಏರ್​​ಲೈನ್ಸ್ ವಿಮಾನ ಪತನದಲ್ಲಿ 38 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಮಕ್ಕಳು ಸೇರಿ 29 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ.

ಅಜರ್​ಬೈಜಾನ್​ನ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ ತೆರಳುತ್ತಿದ್ದ ವಿಮಾನ ಕಝಾಕಿಸ್ತಾನದ ಮೇಲೆ ಹಾರುತ್ತಿದ್ದಾಗ ಸಮಸ್ಯೆಗೀಡಾಗಿದೆ. ಪಕ್ಷಿಗಳ ಡಿಕ್ಕಿಯಿಂದಾಗಿ ವಿಮಾನ ನಿಯಂತ್ರಣ ಕಳೆದುಕೊಂಡಿದೆ. ತುರ್ತು ಭೂಸ್ಪರ್ಶ ಮಾಡಬೇಕಿದೆ ಎಂದು ಪೈಲಟ್​​ ಸಂದೇಶ ರವಾನಿಸಿದ್ದ ಎಂಬ ಮಾಹಿತಿ ಹರಿದಾಡುತ್ತಿದೆಯಾದರೂ, ಇದು ಇನ್ನೂ ದೃಢಪಟ್ಟಿಲ್ಲ.

Category
ಕರಾವಳಿ ತರಂಗಿಣಿ