image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂಭಾಲ್​ನ ಚಂದೌಸಿ ಪ್ರದೇಶದಲ್ಲಿ ಮುಚ್ಚಲ್ಪಟ್ಟಿದ್ದ ನೂರಾರು ವರ್ಷ ಹಳೆಯ ಮೆಟ್ಟಿಲು ಬಾವಿ ಪತ್ತೆ

ಸಂಭಾಲ್​ನ ಚಂದೌಸಿ ಪ್ರದೇಶದಲ್ಲಿ ಮುಚ್ಚಲ್ಪಟ್ಟಿದ್ದ ನೂರಾರು ವರ್ಷ ಹಳೆಯ ಮೆಟ್ಟಿಲು ಬಾವಿ ಪತ್ತೆ

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಕಾರ್ತಿಕೇಯ ಮಹಾದೇವ ದೇವಾಲಯವನ್ನು 46 ವರ್ಷಗಳ ನಂತರ ಮತ್ತೆ ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಮರೆಮಾಚಿಹೋಗಿದ್ದ ಮತ್ತಷ್ಟು ಐತಿಹಾಸಿಕ ಅಂಶಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಚಂದೌಸಿ ಪ್ರದೇಶದಲ್ಲಿ ಉತ್ಖನನದ ಸಮಯದಲ್ಲಿ ಮೆಟ್ಟಿಲು ಬಾವಿಯೊಂದು ಪತ್ತೆಯಾಗಿದ್ದು, ಇದು ಪ್ರದೇಶದ ಐತಿಹಾಸಿಕ ಮಹತ್ವಕ್ಕೆ ಹೊಸ ಆಯಾಮ ನೀಡಿದೆ.

ಈ ತಿಂಗಳ ಆರಂಭದಲ್ಲಿ ಅದೇ ಪ್ರದೇಶದಲ್ಲಿ ಪ್ರಾಚೀನ ಬಾಂಕೆ ಬಿಹಾರಿ ದೇವಾಲಯದ ಅವಶೇಷಗಳು ಪತ್ತೆಯಾದ ಸ್ವಲ್ಪ ಸಮಯದ ನಂತರ ಈ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಸನಾತನ ಸೇವಕ ಸಂಘದ ಪದಾಧಿಕಾರಿಗಳ ಮನವಿಯ ಮೇರೆಗೆ ಮೇರೆಗೆ, ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ರಾಜೇಂದ್ರ ಪೆನ್ಸಿಯಾ ಅವರು ಲಕ್ಷ್ಮಣ್ ಗಂಜ್​ನಲ್ಲಿರುವ ಸ್ಥಳದಲ್ಲಿ ಉತ್ಖನನಕ್ಕೆ ಆದೇಶ ನೀಡಿದ್ದಾರೆ.

ಎಡಿಎಂ ನ್ಯಾಯಾಂಗ ಸತೀಶ್ ಕುಮಾರ್ ಕುಶ್ವಾಹ ಮತ್ತು ತಹಶೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್ ತಮ್ಮ ತಂಡದೊಂದಿಗೆ ಶನಿವಾರ ಎರಡು ಜೆಸಿಬಿ ಯಂತ್ರಗಳೊಂದಿಗೆ ಅಗೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ಸುಮಾರು 45 ಗಂಟೆಗಳ ಕಾಲ ಅಗೆತದ ನಂತರ ಸ್ಥಳದಲ್ಲಿ ಮೆಟ್ಟಿಲು ಬಾವಿಯ ಗೋಡೆಗಳು ಕಾಣಿಸಲಾರಂಭಿಸಿವೆ. ಮೆಟ್ಟಿಲು ಬಾವಿಯ ಪಕ್ಕದಲ್ಲಿ ನಾಲ್ಕು ಕೋಣೆಗಳು ಸಹ ಉತ್ಖನನದಲ್ಲಿ ಕಂಡು ಬಂದಿವೆ. ಆದರೆ ಕತ್ತಲಾಗಿದ್ದರಿಂದ ರಾತ್ರಿಯಲ್ಲಿ ಅಗೆಯುವಿಕೆಯನ್ನು ನಿಲ್ಲಿಸಲಾಯಿತು.

ಸ್ಥಳೀಯರು ಮತ್ತು ಐತಿಹಾಸಿಕ ದಾಖಲೆಗಳ ಪ್ರಕಾರ, ಮೆಟ್ಟಿಲು ಬಾವಿ ಮತ್ತು ಸುತ್ತಮುತ್ತಲಿನ ರಚನೆಗಳು 1857 ರ ದಂಗೆಯ ಕಾಲದದಷ್ಟು ಹಿಂದಿನವು ಆಗಿವೆ. ಈ ಸ್ಥಳವನ್ನು ಸಹಸ್ಪುರದ ರಾಜಮನೆತನದವರು ರಹಸ್ಯ ಕ್ಯಾಂಪಿಂಗ್ ತಾಣವಾಗಿ ಬಳಸುತ್ತಿದ್ದರು ಎಂದು ನಂಬಲಾಗಿದೆ.

Category
ಕರಾವಳಿ ತರಂಗಿಣಿ