image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇಶದ ಒಟ್ಟಾರೆ ಅರಣ್ಯ ಮತ್ತು ಮರಗಳ ಹೊದಿಕೆಯ ಪ್ರಮಾಣವು 2021ರಿಂದ 1,445 ಚದರ ಕಿ.ಮೀ ಹೆಚ್ಚಳ

ದೇಶದ ಒಟ್ಟಾರೆ ಅರಣ್ಯ ಮತ್ತು ಮರಗಳ ಹೊದಿಕೆಯ ಪ್ರಮಾಣವು 2021ರಿಂದ 1,445 ಚದರ ಕಿ.ಮೀ ಹೆಚ್ಚಳ

ನವದೆಹಲಿ: ದೇಶದ ಒಟ್ಟಾರೆ ಅರಣ್ಯ ಮತ್ತು ಮರಗಳ ಹೊದಿಕೆಯ ಪ್ರಮಾಣವು 2021ರಿಂದ 1,445 ಚದರ ಕಿ.ಮೀ ಹೆಚ್ಚಳವಾಗಿದ್ದು, 2023ರಲ್ಲಿ ಒಟ್ಟು ಭೌಗೋಳಿಕ ಪ್ರದೇಶದ ಶೇ 25.17ರಷ್ಟಿದೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ.

ಭಾರತದ ಅರಣ್ಯ ಸ್ಥಿತಿಗತಿ ವರದಿ (ಐಎಸ್‌ಎಫ್‌ಆರ್) 2023 ಅನ್ನು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು. ಈ ವರದಿಯ ಪ್ರಕಾರ, ದೇಶದ ಒಟ್ಟಾರೆ ಅರಣ್ಯ ಪ್ರದೇಶವು (Total Forest Cover) 2021ರಲ್ಲಿದ್ದ 7,13,789 ಚ.ಕಿ.ಮೀನಿಂದ 2023ರಲ್ಲಿ 7,15,343 ಚ.ಕಿ.ಮೀ ತಲುಪಿದೆ. ಇದರೊಂದಿಗೆ ದೇಶದ ಒಟ್ಟು ಭೌಗೋಳಿಕ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ 21.76 ತಲುಪಿದೆ.

ಮರಗಳ ಹೊದಿಕೆಯ (Tree Cover) ಪ್ರಮಾಣವು 1,289 ಚ.ಕಿ.ಮೀ ಏರಿಕೆಯಾಗಿದ್ದು, ಇದೀಗ ಒಟ್ಟಾರೆ ಭೌಗೋಳಿಕ ಪ್ರದೇಶದ ಶೇ 3.41ರಷ್ಟಿದೆ ಎಂದು ವರದಿ ತಿಳಿಸಿದೆ.

ಅರಣ್ಯ ಪ್ರದೇಶ ಮತ್ತು ಮರಗಳ ಹೊದಿಕೆ ಪ್ರಮಾಣ ಎರಡೂ ಸೇರಿ ಒಟ್ಟು ಭೌಗೋಳಿಕ ವ್ಯಾಪ್ತಿಯ 8,27,357 ಚ.ಕಿ.ಮೀ ಅಥವಾ ಶೇ 25.17ರಷ್ಟಾಗುತ್ತದೆ. ಇದು 2021ರಲ್ಲಿದ್ದ ಪ್ರಮಾಣಕ್ಕಿಂತ 1,445 ಚ.ಕಿ.ಮೀ ಹೆಚ್ಚು ಮತ್ತು ಅರಣ್ಯ ಪ್ರದೇಶ ಒಂದೇ 156 ಚ.ಕಿ.ಮೀ ಹೆಚ್ಚಾಗಿರುವುದು ಗಮನಾರ್ಹ ಎಂದು ವರದಿ ಹೇಳಿದೆ.

ಫಾರೆಸ್ಟ್ ಸರ್ವೇ ಆಫ್ ಇಂಡಿಯಾ (ಎಫ್‌ಎಸ್‌ಐ) ಪ್ರಕಾರ, ಅರಣ್ಯ ಹೊದಿಕೆಯು ಎಲ್ಲ ಭೂ ಪ್ರದೇಶದ ಪೈಕಿ ಶೇ 10ಕ್ಕಿಂತ ಹೆಚ್ಚು ಮರಗಳ ಸಾಂದ್ರತೆ ಹೊಂದಿರುವ ಮತ್ತು ಅದು ಒಂದು ಹೆಕ್ಟೇರ್/ಅದಕ್ಕಿಂತ ಹೆಚ್ಚಿನ ಪ್ರದೇಶದ ಮಾಲೀಕತ್ವ/ಕಾನೂನು ಸ್ಥಿತಿಯನ್ನು ಲೆಕ್ಕಿಸದೆ ಹರಡಿರುವ ಎಲ್ಲಾ ಭೂ ಪ್ರದೇಶ. ಇದರ ವ್ಯಾಪ್ತಿಯಲ್ಲಿ ನೈಸರ್ಗಿಕ ಅರಣ್ಯ ಪ್ರದೇಶಗಳು, ಮಾನವ ನಿರ್ಮಿತ ಪ್ಲಾಂಟೇಶನ್‌ಗಳು, ಹಣ್ಣಿನ ತೋಟಗಳು, ಮೇಲಿನ ಮಾನದಂಡದಂತೆ ಗಾತ್ರ ಮತ್ತು ಮರಗಳ ಪ್ರಮಾಣವಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಇತರೆ ಗಿಡ ಮರಗಳಿರುವ ಭೂ ಪ್ರದೇಶಗಳು ಸೇರಿವೆ.

Category
ಕರಾವಳಿ ತರಂಗಿಣಿ